Top

ನಟಿ ರಚನಾಗೆ ಹುಚ್ಚಾ ಫ್ಯಾನ್ಸ್‌ ಟಾರ್ಚರ್ : ಪೊಲೀಸರಿಗೆ ದೂರು.!!

ನಟಿ ರಚನಾಗೆ ಹುಚ್ಚಾ ಫ್ಯಾನ್ಸ್‌ ಟಾರ್ಚರ್ : ಪೊಲೀಸರಿಗೆ ದೂರು.!!
X

ಬೆಂಗಳೂರು : ಕಳೆದ ವಾರ ಬಿಡುಗಡೆಯಾದ ಸಮರ್ಥ ಸಿನಿಮಾ ಮೂಲಕ ನಾಯಕ ನಟಿಯಾಗಿ ತೆರೆಗೆ ಬಂದ ರಚನಾ ದಶರಥ್‌ಗೆ ಹುಚ್ಚಾ ವೆಂಕಟ್‌ ಫ್ಯಾನ್ಸ್‌ ಟಾರ್ಚರ್‌ ಕೊಡ್ತಾ ಇದ್ದಾರಂತೆ. ಹೀಗೆಂದು ಇದೀಗ ನಟಿ ರಚನಾ ದಶರಥ್‌, ಪೊಲೀಸರಿಗೆ ದೂರು ನೀಡಿದ್ದಾರೆ.

https://www.youtube.com/watch?v=Xhii-OMn9Cs

ಕಳೆದ ನಿನ್ನೆಯ ತಡರಾತ್ರಿ 9.30ಕ್ಕೆ ಕಾಯಿನ್‌ ಬಾಕ್ಸ್‌ನಿಂದ ಕರೆ ಮಾಡಿರುವ ಅನಾಮಿಕ ಹುಚ್ಚಾ ವೆಂಕಟ್‌ ಅಭಿಮಾನಿ, ಸಮರ್ಥ ಸಿನಿಮಾದಲ್ಲಿ ನಾಯಕಿ ರಚನಾ ದಶರಥ್‌ ಮಾತಿಗೆ ತರಾಟೆ ತೆಗೆದುಕೊಂಡಿದ್ದಾರೆ. ಹೀರೋ ನಿಮಗೆ ಆ ಡೈಲಾಗ್ ಹೇಳೋಕೆ ನೀವು ಒಪ್ಕೊಂಡ್ರಾ..? ಹುಚ್ಚಾ ವೆಂಕಟ್ ಇದರಿಂದ ಬೇಜಾರಾಗಿದ್ದಾರೆ ಎಂದು ಹುಚ್ಚಾ ವೆಂಕಟ್ ಅಭಿಮಾನಿ ಟಾರ್ಚರ್‌ ಕೊಟ್ಟಿದ್ದಾರಂತೆ.

ಇದರಿಂದ ಗರಂ ಆಗಿರುವ ನಾಯಕ ನಟಿ ರಚನಾ ದಶರಥ್‌, ಹುಚ್ಚಾ ವೆಂಕಟ್ ಅಭಿಮಾನಿಯ ಬೆದರಿಕೆ ಕರೆ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ದಾಖಲಿಸಿಕೊಂಡಿರೋ ಪೊಲೀಸರಿಂದ ಕರೆ ಬಂದಿದ್ದ ನಂಬರ್‌ನ ಶೋಧ ಮಾಡುತ್ತಿದ್ದಾರೆ.

ಲಗ್ಗೇರೆ ಬಳಿಯ ಅಂಗಡಿಯೊಂದರ ಕಾಯ್ನ್ ಬಾಕ್ಸ್ ನಿಂದ ಕರೆ ಮಾಡಿದ್ದ ಹುಚ್ಚಾವೆಂಕಟ್ ಅಭಿಮಾನಿ ಯಾರು.? ಆತ ನಟಿ ರಚನಾ ದಶರಥ್‌ಗೆ ಬೆದರಿಕೆ ಹಾಕಿದ್ದೇಕೆ ಎಂಬುದಾಗಿಯೂ ತನಿಖೆ ನಡೆಸುತ್ತಿದ್ದಾರೆ. ಸದ್ಯ ಆರೋಪಿಯ ಪತ್ತೆ ಪೊಲೀಸರ ಶೋಧ ಕಾರ್ಯ ಮುಂದುವರೆದಿದೆ.

ಅಂದಹಾಗೇ ಸಮರ್ಥ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದ ರಚನಾ ದಶರಥ್, ‘ಮಂಚಕ್ಕೆ ಕರೆದು ಮಕ್ಕಳು ಮಾಡ್ತೀನಿ’ ಅನ್ನೋ ಡೈಲಾಗ್‌ನ ರಚನಾ ಹೇಳಿದ್ದಾರೆ. ಈ ಡೈಲಾಗ್‌ ಹುಚ್ಚ ವೆಂಕಟ್‌ ಅಭಿಮಾನಿಗಳನ್ನ ಕೆರಳಿಸಿದೆ ಎನ್ನಲಾಗಿದೆ. ಇಂತಹ ಡೈಲಾಗ್‌ನ ಹೆಣ್ಣು ಮಕ್ಕಳು ಹೇಳೋದು ಸರಿಯಲ್ಲ ಅಂತ ಆರೋಪಿಸಿ, ಹುಚ್ಚ ವೆಂಕಟ್‌ ಅಭಿಮಾನಿಗಳ ಹೆಸರಲ್ಲಿ ರಚನಾರಿಗೆ ಫೋನ್‌ ಮಾಡಿ ಅಶ್ಲೀಲ ಪದಗಳಿಂದ ನಿಂದಿಸಲಾಗಿದ್ದೇ ರಚನಾ ಪೊಲೀಸ್‌ ಠಾಣೆಗೆ ದೂರು ಕೊಡಲು ಕಾರಣವಂತೆ.

Next Story

RELATED STORIES