Top

ಲೋಕಸಭಾ ಚುನಾವಣಾ ಮೈತ್ರಿಗೆ ಕೈ ನಾಯಕರ ಅಪಸ್ವರ.?

ಲೋಕಸಭಾ ಚುನಾವಣಾ ಮೈತ್ರಿಗೆ ಕೈ ನಾಯಕರ ಅಪಸ್ವರ.?
X

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್,ಕಾಂಗ್ರೆಸ್ ಮೈತ್ರಿ ವಿಚಾರ ಸಾಕಷ್ಟು ಸದ್ದುಗದ್ದಲಕ್ಕೆ ಕಾರಣವಾಗ್ತಿದೆ. ಜೆಡಿಎಸ್ ಜೊತೆಗಿನ ಮೈತ್ರಿಗೆ ಕಾಂಗ್ರೆಸ್ ನಲ್ಲಿಯೇ ಕೆಲ ಹಿರಿಯ ನಾಯಕರು ಅಪಸ್ವರ ಎತ್ತಿದ್ದಾರೆ. ಎರಡೂ ಪಕ್ಷಗಳ ನಾಯಕರು ಮೈತ್ರಿಯಿಂದಾಗಬಹುದಾದ ಲಾಭನಷ್ಟಗಳ ಲೆಕ್ಕಾಚಾರಕ್ಕೆ ಮುಂದಾಗಿದ್ದಾರೆ. ಮತ್ತೊಂದು ಕಡೆ ಇದು ದೋಸ್ತಿ ಸರ್ಕಾರದ ಮೇಲೂ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

ಲೋಕಸಭಾ ಚುನಾವಣಾ ಮೈತ್ರಿ : ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ನಾಯಕರು ಬ್ಯುಸಿ

ಸಮ್ಮಿಶ್ರ ಸರ್ಕಾರದಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿಗೆ ನಿರ್ಧರಿಸಿದೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೂಡ ನೀಡಿದೆ. ಆದರೆ ಹೈಕಮಾಂಡ್ ನಿರ್ಧಾರಕ್ಕೆ ಹಿರಿಯ ನಾಯಕರು ಅಪಸ್ವರ ಎತ್ತಿದ್ದಾರೆ. ಎಲ್ಲವೂ ಹೈಕಮಾಂಡ್ ಮಟ್ಟದಲ್ಲೇ ನಿರ್ಧಾರವಾದ್ರೆ ಸ್ಥಳೀಯ ನಾಯಕರ ಅಭಿಪ್ರಾಯಕ್ಕೆ ಬೆಲೆ ಎಲ್ಲಿ. ಹೋಗ್ಲಿ ಮೈತ್ರಿಯಿಂದ ನಮಗೇನಾದ್ರೂ ಲಾಭವಿದ್ಯಾ. ಲಾಭ ಅವರಿಗೆ ,ನಷ್ಟ ನಮಗೆ ಅಂತ ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಂದು ಕಡೆ ಎರಡೂ ಪಕ್ಷಗಳ ನಾಯಕರು ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದ್ದಾರಂತೆ.

ಚುನಾವಣಾ ಮೈತ್ರಿಯ ಬಗ್ಗೆ ಪರಿಶೀಲಿಸಿ : ರಾಹುಲ್ ಮುಂದೆ ಫುಲ್ ಡಿಟೇಲ್ಸ್ ಬಿಚ್ಚಿಟ್ರು ಸಿಕ್ಸರ್ ಸಿದ್ದು

ಜೆಡಿಎಸ್ ಜೊತೆಗಿನ ಮೈತ್ರಿಯ ಬಗ್ಗೆ ಈ ಹಿಂದೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ಇಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಭೇಟಿ ಮಾಡಿ ಲಾಭ ನಷ್ಟದ ಬಗ್ಗೆಯೂ ವಿವರಣೆ ನೀಡಿದ್ದಾರೆ..ದೋಸ್ತಿ ಸರ್ಕಾರ ರಚನೆಯಿಂದ ಪಕ್ಷಕ್ಕೆ ಹಾನಿಯೇ ಹೊರತು, ಲಾಭವಿಲ್ಲ ಒಮ್ಮೊಮ್ಮೆ ಮೈತ್ರಿ ಬಗ್ಗೆ ಪರಿಶೀಲಿಸಿದರೆ ಒಳ್ಳೆಯದು ಅಂತ ಸಲಹೆ ನೀಡಿದ್ದಾರೆ. ನಾವು ತಂದ ಅನ್ನಭಾಗ್ಯ ಯೋಜನೆ ಜನರನ್ನ ತಲುಪಿದೆ. ಆದರೆ ಬಜೆಟ್ ನಲ್ಲಿ ಸಿಎಂ 2 ಕೆಜಿ ಅಕ್ಕಿ ಕಡಿತ ಮಾಡಿದ್ರು. ಪೆಟ್ರೋಲ್ ಡಿಸೇಲ್ ಸೆಸ್ ಹಾಕಿದ್ರು. ನಮ್ಮ ಮುಖಂಡರು ವಾಪಸ್ ಪಡೆಯುವಂತೆ ಮನವಿ ಮಾಡಿದ್ರು. ಖುದ್ದಾಗಿ ನಾನೇ ಸಿಎಂಗೆ ಪತ್ರ ಬರೆದ್ರೂ ವಾಪಸ್ ಪಡೆದಿಲ್ಲ.

ಇದು ಸರ್ಕಾರದ ಮೇಲಿನ ಜನಸಾಮಾನ್ಯರ ನಂಬಿಕೆಗೆ ದ್ರೋಹ ಬಗೆದಂತಾಗಿದೆ. ಅಲ್ಲದೆ ಅವರು ಕೇಳುತ್ತಿರುವ ಕ್ಷೇತ್ರಗಳು ನಮ್ಮ ಹಿಡಿತದಲ್ಲಿವವೇ ಆಗಿವೆ. ಗೆಲ್ಲುವ ಕ್ಷೇತ್ರಗಳನ್ನ ಅವರಿಗೆ ಬಿಟ್ಟುಕೊಟ್ಟರೆ ನಮಗೇ ನಷ್ಟ ಅಂತ ರಾಹುಲ್ ಮುಂದೆ ಡಿಟೇಲ್ಸ್ ಬಿಚ್ಚಿಟ್ಟಿದ್ದಾರೆ. ಹೀಗಾಗಲೇ ಮೈತ್ರಿ ಬಗ್ಗೆ ಘೋಷಿಸಿದ್ದೀರ, ಆದರೆ ನಮ್ಮ ಕ್ಷೇತ್ರಗಳನ್ನ ಹೊರತುಪಡಿಸಿ ಬೇರೆ ಕ್ಷೇತ್ರಗಳನ್ನ ಬಿಟ್ಟುಕೊಡುವ ತೀರ್ಮಾನ ತೆಗೆದುಕೊಳ್ಳಿ ಅಂತ ಸಲಹೆಯನ್ನೂ ರಾಹುಲ್ ಗೆ ನೀಡಿದ್ದಾರೆ.

ನಮ್ಮ ಅಭಿಪ್ರಾಯಕ್ಕೂ ಸ್ವಲ್ಪ ಬೆಲೆ ಕೊಡಿ ಸ್ವಾಮಿ : ಹಿರಿಯ ನಾಯಕರ ಆಕ್ಷೇಪ

ಇನ್ನು ಮಾಜಿ ಸಚಿವ ಎ.ಮಂಜು, ಹೆಚ್.ಕೆ.ಪಾಟೀಲ್ ಸೇರಿದಂತೆ ಕೆಲ ಹಿರಿಯ ನಾಯಕರು ಜೆಡಿಎಸ್ ಮೈತ್ರಿಯ ಬಗ್ಗೆ ಆಕ್ಷೇಪವೆತ್ತಿದ್ದಾರೆ. ಅದ್ರಲ್ಲೂ ಮೈತ್ರಿ ಮಾಡಿಕೊಂಡರೆ ನಮ್ಮಪಕ್ಷಕ್ಕೆನಷ್ಟವೇ ಹೊರತು, ಜೆಡಿಎಸ್ ಗಲ್ಲ ಅಂತ ಮಾಜಿ ಸಚಿವ ಎ.ಮಂಜು ಬಹಿರಂಗವಾಗಿಯೇ ಗರಂ ಆಗಿದ್ದಾರೆ.

ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ವಿಚಾರದಲ್ಲಿ ಕೈ ನಾಯಕರು ಆಕ್ರೋಶ ಗೊಂಡಿದ್ದಾರೆ. ಇದು ಸಮ್ಮಿಶ್ರ ಸರ್ಕಾರದ ಮೇಲೂ ಪರಿಣಾಮ ಬೀರಲಿದೆ. ಚುನಾವಣಾ ಮೈತ್ರಿಯಿಂದ ಹಿಂದೆ ಸರಿಯುವ ಪ್ರಯತ್ನ ಮಾಡಿದ್ರೆ, ಸರ್ಕಾರದ ಆಯುಷ್ಯ ಕೂಡ ಪರಿಸಮಾಪ್ತಿಯಾಗಲಿದೆ. ಹೀಗಾಗಿ ಈ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯ ಹೆಜ್ಜೆಯನ್ನಿಡುವ ಪರಿಸ್ಥಿತಿ ರಾಹುಲ್ಮುಂದಿದೆ. ಯಾವ ನಿರ್ಧಾರ ತೆಗೆದುಕೊಳ್ತಾರೆ ಅನ್ನೋದ್ರ ಮೇಲೆ ಎಲ್ಲವೂ ನಿಂತಿದೆ.

ವರದಿ : ಶಿವಕುಮಾರ್ ಜೋಹಳ್ಳಿ, ಪೊಲಿಟಿಕಲ್ ಬ್ಯೂರೋ, ಟಿವಿ5 ಬೆಂಗಳೂರು

Next Story

RELATED STORIES