Top

ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ ಮಾಜಿ ಪ್ರಧಾನಿ ಜೀವನಗಾಥೆ

ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ ಮಾಜಿ ಪ್ರಧಾನಿ ಜೀವನಗಾಥೆ
X

ನವದೆಹಲಿ: ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಏನೆಲ್ಲ ನಡೀತು ಎಂಬುದನ್ನ ತೆರೆಗೆ ತರಲು ಬಾಲಿವುಡ್ ನಿರ್ದೇಶಕ ವಿಜಯ್ ಗುಟ್ಟೆ ರೆಡಿಯಾಗಿದ್ದಾರೆ. ಇದೇ ವರ್ಷ ಕ್ರಿಸ್‌ಮಸ್‌ ಹಬ್ಬಕ್ಕೆ ಎನ್‌ಡಿಎ ಸರ್ಕಾರದ ಬಗ್ಗೆ ಇರುವ ದಿ ಆಕ್ಸಿಡೆಂಟಲ್ ಪ್ರೈ ಮಿನಿಸ್ಟರ್ ಸಿನಿಮಾ ತೆರೆ ಮೇಲೆ ಬರೋಕ್ಕೆ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಅನುಪಮ್ ಖೇರ್ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಸಿನಿಮಾಗೆ ಸಂಬಂಧಪಟ್ಟ ಫೋಟೋಗಳನ್ನು ನಟ ಅನುಪಮ್ ಖೇರ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸುಜೇನ್ನೆ ಸೋನಿಯಾಗಾಂಧಿಯಾಗಿ ಮಿಂಚಿದ್ರೆ, ಆಹಾನಾ ಕುಮಾರ್ ಪ್ರಿಯಾಂಕಾ ಗಾಂಧಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಾಹುಲ್ ಗಾಂಧಿಯಾಗಿ ಅರ್ಜುನ್ ಮಾಥೂರ್ ರಾಹುಲ್ ಗಾಂಧಿ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ.ಇನ್ನು ಮನಮೋಹನ್ ಸಿಂಗ್ ಪತ್ನಿ ಗುರುಶರಣ್ ಕೌರ್ ಆಗಿ ದಿವ್ಯಾ ಸೇಠ್ ಕಾಣಿಸಿಕೊಂಡಿದ್ದಾರೆ.ಸಂಜಯ್ ಬಾರುವಾಗಿ ಅಕ್ಷಯ್ ಖನ್ನಾ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಸಂಬಂಧಪಟ್ಟ ಫೋಟೋವನ್ನ ಟ್ವೀಟ್ ಮಾಡಿದ ಅನುಪಮ್ ಖೇರ್, ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಭಾರತದಲ್ಲಿ ಮೊದಲಬಾರಿ ಇಂಥದ್ದೊಂದು ಪ್ರಯತ್ನ ಮಾಡಲಾಗಿದೆ. ತಂಡದ ಸದಸ್ಯರೆಲ್ಲ ಸಿನಿಮಾ ಮಾಡಲು ಸಾಕಷ್ಟು ಶ್ರಮ ಪಟ್ಟಿದ್ದು, ಈ ಶ್ರಮ ಸಕ್ಸಸ್ ತಂದುಕೊಡುತ್ತದೆ ಎಂಬ ವಿಶ್ವಾಸವಿದೆ. ಇನ್ನು ನಮ್ಮ ನಿರ್ದೇಶಕರಾದ ವಿಜಯ್ ಗುಟ್ಟೆ ಕೂಡ ಸಾಕಷ್ಟು ಶ್ರಮವಹಿಸಿ ಚಿತ್ರ ನಿರ್ಮಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಈ ಚಿತ್ರದ ಶೂಟಿಂಗ್‌ನ್ನ ಲಂಡನ್ ಮತ್ತು ನವದೆಹಲಿಯಲ್ಲಿ ಚಿತ್ರೀಕರಿಸಲಾಗಿದ್ದು, ಇದೇ ಡಿಸೆಂಬರ್ ವೇಳೆಗೆ ಚಿತ್ರ ತೆರೆಗೆ ಬರಲಿದೆ.

Next Story

RELATED STORIES