ಬೆಂಗಳೂರು ವಿವಿಯ 57 ಕೋರ್ಸ್ಗಳಿಗೆ ಮಾನ್ಯತೆಯೇ ಇಲ್ಲ.!!
ಬೆಂಗಳೂರು : ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸ್ ಆಗ್ಬೇಕು. ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು. ಈ ಮೂಲಕ ಒಳ್ಳೆಯ ಹುದ್ದೆಗಳಿಗೆ ಏರಿ ಕೆಲಸ ಮಾಡಬೇಕು ಎಂದು ಕನಸು ಕಾಣ್ತಾ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪಿಜಿ ಕೋರ್ಸ್ಗೆ ಸೇರೋ ವಿದ್ಯಾರ್ಥಿಗಳೇ ಗಮನಿಸಿ. ಬೆಂಗಳೂರು ವಿವಿ ನಡೆಸುತ್ತಿರುವ 81 ಪಿಜಿ ಕೋರ್ಸ್ಗಳಲ್ಲಿ 57 ಪಿಜಿ ಕೋರ್ಸ್ಗೆ ಮಾಲ್ಯತೆಯೇ ಇಲ್ವಂತೆ..!
ಹೌದು ಪ್ರಿಯ ವಿದ್ಯಾರ್ಥಿಗಳೇ, ವಿವಿಧ ಕನಸುಗಳನ್ನು ಕಟ್ಟಿಕೊಂಡು, ನೀವು ಬೆಂಗಳೂರು ವಿವಿಗೆ ಪಿಜಿ ಕೋರ್ಸ್ಗಳಿಗೆ ಸೇರ್ತಾ ಇದ್ದೀರಿ. ಆದರೇ ಬೆಂಗಳೂರು ವಿಶ್ವವಿದ್ಯಾನಿಲಯ ನಡೆಸುತ್ತಿರುವ ಅನೇಕ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಕೆಪಿಎಸ್ಸಿಯಲ್ಲಿ ಮಾನ್ಯತೆಯೇ ಇಲ್ಲ.
ಇಂತಹ ಆಘಾತಕಾರಿ ವಿಷಯ ಇದೀಗ ಹೊರಬಿದ್ದಿದೆ. ಈ ಮೂಲಕ ಸ್ನಾತಕೋತ್ತರ ಕೋರ್ಸ್ಗಳನ್ನು ಬೆಂಗಳೂರು ವಿವಿಯಲ್ಲಿ ಮಾಡಿ, ಹೊರಬಂದವರಿಗೆ ಕೆಪಿಎಸ್ಸಿ ನೀಡಿದೆ.
ಅಂದಹಾಗೇ, 81 ಪಿಜಿ ಕೋರ್ಸ್ಗಳಲ್ಲಿ 24 ಕೋರ್ಸ್ಗಳಿಗೆ ಮಾತ್ರ ಮಾನ್ಯತೆ ಇದೆ. ಇನ್ನೂಳಿದ 57 ಸ್ನಾತಕೋತ್ತರ ಕೋರ್ಸ್ಗಳಿಗೆ ಮಾತ್ಯತೆಯೇ ಇಲ್ಲ. ಈ ಹೊಸ ಕೋರ್ಸ್ಗಳ ಮಾಹಿತಿಯನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಮಾಹಿತಿಯನ್ನೇ ನೀಡಿಲ್ಲ.
ಬೇಕಾಬಿಟ್ಟಿ ಕೋರ್ಸ್ಗಳನ್ನು ಪ್ರಾರಂಭಿಸಿರುವ ಬೆಂಗಳೂರು ವಿವಿ. ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಜೆಲ್ಲಾಟವಾಡುತ್ತಿದೆ. ಅದರಲ್ಲೂ ವಿವಿ ನಡೆಸುತ್ತಿರುವ ಎಂ ಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ, ಸೇರಿದಂತೆ ಡಿಪ್ಲೋಮಾ ಕೋರ್ಸ್ಗಳಿಗೆ ಯುಜಿಸಿಯಿಂದ ಕೂಡ ಮಾನ್ಯತೆ ಇಲ್ಲವಂತೆ.
ಈ ಬಗ್ಗೆ ವಿವಿ ಕುಲಪತಿ ಕೆ.ಆರ್.ವೇಣುಗೋಪಾಲ್ ವಿಚಾರಿಸಿದ್ರೇ, ನಾವು ಸಿಂಡಿಕೇಟ್ ಸಭೆಯಲ್ಲಿ ಅನುಮತಿ ಪಡೆದು ಕೋರ್ಸ್ಗಳನ್ನು ಪ್ರಾರಂಭಿಸುತ್ತೇವೆ. ಇಂತಹ ಕೋರ್ಸ್ಗಳಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಅನುಮತಿ ಪಡೆಯಲು ಪ್ರಯತ್ನ ನಡೆಸಬೇಕು. ಹೀಗಾಗಿ ಸರ್ಕಾರ ಮಾನ್ಯತೆ ಪಡೆಸಿಕೊಡಲು ಮುಂದಾಗಬೇಕು. ಆದಷ್ಟು ಬೇಗ ಸರ್ಕಾರದ ಮೂಲಕ ಮಾನ್ಯತೆ ಪಡೆಯಲು ಪ್ರಯತ್ನ ನಡೆಸುವುದಾಗು ಸ್ಪಷ್ಟನೆ ನೀಡಿ, ತಮ್ಮ ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತಾರೆ.
ಹಾಗಾದ್ರೇ ಮಾನ್ಯತೆ ಇಲ್ಲದ ಕೋರ್ಸ್ಗಳನ್ನು ಏಕೆ ಪ್ರಾರಂಭಿಸಬೇಕು.? ಇಂತಹ ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ಪಡೆದು ಹೊರಬಂದ ವಿದ್ಯಾರ್ಥಿಗಳು ಏನು ಮಾಡಬೇಕು.? ಯಾರೋ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ.? ಇದನ್ನು ಆದಷ್ಟು ಬೇಗ ಸರಿಪಡಿಸಬೇಕು ಎಂಬುದು ವಿವಿ ವಿದ್ಯಾರ್ಥಿಗಳ ಆಕ್ರೋಶದ ಮಾತಾಗಿದೆ.
- Bangalore University post graduate course bangalore univesity kannada news today Karnataka Lokaseva Ayoga karnataka news today kpsc latest karnataka news PG Course tv5 kannada tv5 kannada live tv5 kannada news tv5 live UGC ಬೆಂಗಳೂರು ವಿವಿ ಬೆಂಗಳೂರು ವಿವಿ ಕೋರ್ಸ್ಗಳಿಗೆ ಮಾನ್ಯತೆ ಇಲ್ಲ. ಬೆಂಗಳೂರು ವಿಶ್ವವಿದ್ಯಾನಿಲಯ ಯುಜಿಸಿ