Top

ಶೀರೂರು ಮಠದ ಉತ್ತರಾಧಿಕಾರಿಯಾಗಿ ಬರಲು ವಟುಗಳ ನಿರಾಸಕ್ತಿ ?

ಉಡುಪಿ : ಶೀರೂರು ಮಠದ ಆಡಳಿತಕ್ಕೆಐವರು ಸದಸ್ಯರಸಮಿತಿ ರಚಿಸಲಾಗುತ್ತದೆ. ಮಠದ ಆಡಳಿತ ವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಸೋದೆವಿಶ್ವವಲ್ಲಭ ಶ್ರೀಗಳ ನೇತೃತ್ವದಲ್ಲಿ ಸಮಿತಿರಚನೆಯಾಗಲಿದೆ. ಇದರಲ್ಲಿ ಶೀರೂರು ಮಠದವಿದ್ವಾಂಸರನ್ನೂ ಸೇರಿಸಲಾಗುತ್ತದೆ.

ಈಗ ಆಷಾಢಮಾಸವಾದ ಕಾರಣ ಶಿಷ್ಯ ಸ್ವೀಕಾರಕ್ಕೆತೊಡಕಾಗಿದೆ. ಆಷಾಢದ ಬಳಿಕವೇ ಶಿಷ್ಯ ಸ್ವೀಕಾರಪ್ರಕ್ರಿಯೆ ಆರಂಭಿಸಲಾಗುವುದು ಅಂತ ಶೀರೂರುಮಠದ ದ್ವಂದ್ವ ಮಠವಾದ ಸೋದೆ ಮಠ ಸ್ಪಷ್ಟಪಡಿಸಿದೆ. ಈಗಾಗಲೇ ವಟುವಿನ ಜಾತಕಪರಿಶೀಲನೆ ನಡೆಯುತ್ತಿದ್ದು ಈ ಪ್ರಕ್ರಿಯೆಪೂರ್ಣಗೊಂಡ ಬಳಿಕಉತ್ತರಾಧಿಕಾರಿ ನೇಮಕನಡೆಯಲಿದೆ. ಸೋಮವಾರ ಈ ಸಮಿತಿ ರಚನೆಸಾಧ್ಯತೆಯಿದ್ದು, ಸದ್ಯ ಶೀರೂರುಮಠದನಿರ್ವಹಣೆಯ ಜವಾಬ್ದಾರಿಯನ್ನು ಸೋದೆ ವಿಶ್ವವಲ್ಲಭ ಶ್ರೀಗಳು ವಹಿಸಿಕೊಂಡಿದ್ದಾರೆ.

ಗಮನಾರ್ಹ ಸಂಗತಿ ಅಂದ್ರೆ ಉತ್ತರಾಧಿಕಾರಿಯಾಗಿಬರಲು ಹಲವರು ನಿರಾಸಕ್ತಿ ತೋರುತ್ತಿದ್ದಾರಂತೆ. ಇದಕ್ಕೆ ಕಾರಣ ಶೀರೂರು ಮಠದ ಆರ್ಥಿಕ ಸ್ಥಿತಿ ಆರ್ಥಿಕ ನಷ್ಟದಲ್ಲಿರುವ ಮಠವನ್ನು ಮುನ್ನಡೆಸುವುದು ಅಷ್ಟು ಸುಲಭವಂತೂ ಅಲ್ಲ.

ಒಟ್ಟಾರೆ,ಚಾತುರ್ಮಾಸ್ಯದ ನಂತರ ಉತ್ತರಾಧಿಕಾರಿ ನೇಮಕ ನಡೆಯಲಿದ್ದು, ಯಾರಾಗಲಿದ್ದಾರೆ ಉತ್ತರಾಧಿಕಾರಿ ಎಂಬ ಕುತೂಹಲ ಹೆಚ್ಚುತ್ತಿದೆ.

Next Story

RELATED STORIES