ಟೀಂ ಇಂಡಿಯಾಕ್ಕೆ ದೊಡ್ಡ ಹಿನ್ನಡೆ : ಸಚಿನ್

X
TV5 Kannada22 July 2018 7:43 AM GMT
ಟೀಂ ಇಂಡಿಯಾದ ಸ್ವಿಂಗ್ ಸ್ಪೆಶಲಿಸ್ಟ್ ಭುವನೇಶ್ವರ್ ಕುಮಾರ್ ಆಂಗ್ಲರ ಪ್ರವಾಸದಲ್ಲಿ ಗಾಯಗೊಂಡಿರೋದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ನಾನು ಭುವಿಯಿಂದ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದೆ. ಚೆಂಡನ್ನ ಅವರು ಸ್ವಿಂಗ್ ಮಾಡೋದ್ರಿಂದ ಟೆಸ್ಟ್ ಸರಣಿಯಲ್ಲಿ ತಂಡಕ್ಕೆ ನೆರವಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಕುಲದೀಪ್ ಫಾರ್ಮ್ ಮುಂದುವರೆಸಲಿ
ತಮ್ಮ ಚೈನಾಮನ್ ಸ್ಪಿನ್ ಮೂಲಕ ಕುಲ್ದೀಪ್ ಯಾದವ್ ಯಾದವ್ ಎಲ್ಲರ ಗಮನ ಸೆಳೆದಿದ್ದಾರೆ. ನಾನು ಟಿವಿಯಲ್ಲಿ ನೋಡಿದಾಗ ಜೋ ರೂಟ್ ಕುಲ್ದೀಪ್ ಯಾದವ್ ಅವರ ಬೌಲಿಂಗ್ನ್ನ ಚೆನ್ನಾಗಿ ಅರ್ಥ ಮಾಡಿಕೊಂಡು ಚೆನ್ನಾಗಿ ಆಡಿದ್ದಾರೆ. ಆದರೆ ವಿಶ್ವದ ಎಲ್ಲ ಬ್ಯಾಟ್ಸ್ ಮನ್ಗಳು ಕುಲ್ದೀಪ್ ನ್ನ ಎದುರಿಸಲು ಸಾಧ್ಯವಿಲ್ಲ . ಹೀಗಾಗಿ ಕುಲದೀಪ್ ತಮ್ಮ ಅದ್ಬುತ ಫಾರ್ಮ್ನ್ನ ಮುಂದುವರೆಸಬೇಕೆಂದು ಸಲಹೆ ನೀಡಿದ್ದಾರೆ.
Next Story