Top

ನೆಲಮಂಗಲದ ಬಳಿ ಈರುಳ್ಳಿ ಲಾರಿ ಪಲ್ಟಿ : ಜನರು ಮಾಡಿದ್ದೇನು ಗೊತ್ತಾ.?

ನೆಲಮಂಗಲದ ಬಳಿ ಈರುಳ್ಳಿ ಲಾರಿ ಪಲ್ಟಿ : ಜನರು ಮಾಡಿದ್ದೇನು ಗೊತ್ತಾ.?
X

ನೆಲಮಂಗಲ : ಅಪಘಾತ ಅಥವಾ ಬೇರೆ ಯಾವುದೇ ಸಂದರ್ಭದಲ್ಲಿ ತೊಂದರೆಗೆ ಸಿಲುಕಿದವರನ್ನು ರಕ್ಷಿಸುವುದು ನಮ್ಮ ನಿಮೆಲ್ಲರ ಆದ್ಯ ಕರ್ತವ್ಯ. ಹೀಗೆ ನಡೆದುಕೊಂಡಾಗ ಮಾತ್ರ, ಅಮೂಲ್ಯ ಜೀವಗಳನ್ನು ರಕ್ಷಿಸಿ, ಮರು ಜೀವ ನೀಡಿದ ಆತ್ಮ ಸಂತೋಷ ಉಂಟಾಗುತ್ತದೆ. ಆದ್ರೇ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈರುಳ್ಳಿ ಮೂಟೆ ತುಂಬಿಕೊಂಡು ತೆರಳುತ್ತಿದ್ದ ವಾಹನ ಪಲ್ಟಿಯಾಗಿದೆ. ವಾಹನದಲ್ಲಿದ್ದ ಈರುಳ್ಳಿ ಮೂಟೆಗಳು ಕೆಳಗೆ ಬಿದ್ದು ರಸ್ತೆಯಲ್ಲಾ ಈರುಳ್ಳಿ ಉರುಳಾಡಿವೆ.

ಈ ಘಟನೆ ಕಂಡ ತಕ್ಷಣ, ವಾಹನ ಪಲ್ಟಿಯಾದ ಕಾರಣ, ವಾಹನ ಚಾಲಕ ಮತ್ತು ಕ್ಲೀನರ್ ಸಿಲುಕಿಕೊಂಡಿದ್ದಾರೆ. ಇದ್ಯಾವುದನ್ನು ಗಮನಿಸಿದ ಸಾರ್ವಜನಿಕರು ಮಾತ್ರ, ನಾ ಮುಂದು, ತಾ ಮುಂದು ಎಂಬಂತೆ, ಈರುಳ್ಳಿ ಹಾಯ್ದುಕೊಳ್ಳೋಕೆ ಮುಗಿ ಬಿದ್ದಿದ್ದಾರೆ. ಹಾದು ಕೊಂಡು ಚೀಲಕ್ಕೆ ತುಂಬಿಕೊಂಡು ಓಡಿದ್ದೇ ಓಡಿದ್ದು.

ನೆಲಮಂಗಲ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಗುಂಡೇನಹಳ್ಳಿ ಬಳಿ ನಡೆದ ಈ ಘಟನೆಯಲ್ಲಿ ಮಾನವೀಯತೆ ಮೆರೆಯಬೇಕಾದವರೇ, ಮಾನವೀಯತೆ ಮರೆತು ವರ್ತಿಸಿದ್ದಾರೆ. ಹೇಗೋ ಪಾಪ ಲಾರಿಯಲ್ಲಿ ಸಿಲುಕಿದ್ದ ವಾಹನ ಚಾಲಕ ಮತ್ತು ಕ್ಲೀನರ್ ಹೊರಗೆ ಬಂದು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

ಆದ್ರೆ, ಜನರು ಮಾತ್ರ ಈರುಳ್ಳಿ ಹಾಯ್ದುಕೊಳ್ಳುವುದರಲ್ಲಿ ಪುಲ್ ಬ್ಯೂಸಿ. ಒಂದು ಕಡೆ ವಾಹನ ಪಲ್ಟಿಯಾಗಿ ಈರುಳ್ಳಿ ಹಾಳಾಯ್ದಲ್ಲಾ ಎಂದು ವಾಹನ ಸವಾರ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ರೇ. ಸಾರ್ವಜನಿಕರಿಗೆ ಅವರ ಗೊಡವೇ ಬೇಕಿರಲಿಲ್ಲ. ರಸ್ತೆಯಲ್ಲೆಲ್ಲಾ ಉರುಳಾಡುತ್ತಿದ್ದ ಉಳ್ಳಾಗಡ್ಡೆಗಾಗಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನದ ಭಯ ಕೂಡ ಇಲ್ಲದೇ ಹಾಯ್ದುಕೊಳ್ತಾ ಇದ್ರು.

Next Story

RELATED STORIES