Top

ಮೈತ್ರಿ ಸರ್ಕಾರ ಶೀಘ್ರದಲ್ಲೇ ಪತನ: ಕಾಂಗ್ರೆಸ್ ನಾಯಕನಿಂದಲೇ ಭವಿಷ್ಯ

ಮೈತ್ರಿ ಸರ್ಕಾರ ಶೀಘ್ರದಲ್ಲೇ ಪತನ: ಕಾಂಗ್ರೆಸ್ ನಾಯಕನಿಂದಲೇ ಭವಿಷ್ಯ
X

ತುಮಕೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೈತ್ರಿ ಶೀಘ್ರದಲ್ಲೇ ಬಿದ್ದು ಹೋಗಲಿದೆ ಎಂದು ಸ್ವತಃ ಕಾಂಗ್ರೆಸ್ ನಾಯಕರೇ ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಕೆ ಎನ್ ರಾಜಣ್ಣ ಈ ಬಗ್ಗೆ ಹೇಳಿಕೆ ನೀಡಿದ್ದು, ಮೈತ್ರಿ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ. ಮೈತ್ರಿ ಸರ್ಕಾರದ ಕಾರ್ಯವೈಖರಿ ನೋಡಿದ್ರೆ ಇದಕ್ಕೆ ಆಯುಷ್ಯ ಕಡಿಮೆ ಎಂದಿದ್ದಾರೆ.ಅಲ್ಲದೇ ಒಬ್ಬ ಮಂತ್ರಿ ಇಲಾಖೆಯಲ್ಲಿ ಮತ್ತೊಬ್ಬ ಮಂತ್ರಿ ಹಸ್ತಕ್ಷೇಪ ಮಾಡ್ತಾರೆ ಅಂದ್ರೆ ಹೇಗೆ ? ಎಂದು ಕಿಡಿಕರಿದ ರಾಜಣ್ಣ, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿದ್ದರ ಬಗ್ಗೆ ಮಾತನಾಡಿದ್ದು, ಏನ್ರೀ ಹೆಣ್ಣುಮಕ್ಕಳ ಥರಾ ಅಳ್ತಾ ಕುಳಿತ್ರೆ ಹೇಗೆ? ರಾಜ್ಯದ ಸಿಎಂ ಅತ್ತಿದ್ದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಆಗುತ್ತೆ ಅಂದ್ರೆ ಹೇಗೆ ? ಅಳೋದು ರಾಜ್ಯದ ಜನತೆಗೆ ಮಾಡಿದ ಅವಮಾನ. ಸಿಎಂ ಈ ನಡೆಯಿಂದ ಕಾಂಗ್ರೆಸ್ ಇಮೇಜ್ ಗೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ.ಕಣ್ಣೀರು ಹಾಕೋದು ನಾಚಿಕೆಗೇಡು. ಸಿಎಂ ಹೆಣ್ಣುಮಕ್ಕಳ ಥರಾ ಅತ್ರೆ ಹೇಗೆ ? ಚುನಾವಣೆ ವೇಳೆ ಮತಕ್ಕಾಗಿ ಅಳೋದು ನೋಡಿದ್ದೇವೆ. ಆದ್ರೆ ಈಗ ಅಳೋದು ತರವಲ್ಲ. ಮೈತ್ರಿ ಧರ್ಮವನ್ನ ಪಾಲಿಸಿದರೆ ಒಳ್ಳೆಯದು. ಆದ್ರೆ ಇದು ಆಗ್ತಿಲ್ಲ. ಈ ಸರ್ಕಾರಕ್ಕೆ ಆಯುಷ್ಯ ಕಡಿಮೆ ಎಂದು ಹೇಳಿದ್ದಾರೆ.

ಅಲ್ಲದೇ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಎಲ್ಲಾದ್ರೂ ಮಾಡಿಕೊಳ್ಳಲಿ ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ತುಮಕೂರು ಕ್ಷೇತ್ರದಲ್ಲಿ ಹಾಲಿ ಪಕ್ಷದ ಸಂಸದರಿದ್ದಾರೆ. ಹೀಗಾಗಿ ಕ್ಷೇತ್ರ ಬಿಟ್ಟುಕೊಡಬಾರದು. ಒಂದು ವೇಳೆ ಜೆಡಿಎಸ್ ಗೆ ಬಿಟ್ಟು ಕೊಟ್ಟರೆ ನಾನು ಕಣಕ್ಕಿಳಿಯೋದು ಗ್ಯಾರಂಟಿ.ಆಗ ತುಮಕೂರಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲೋದು. ಮೈತ್ರಿ ಆದ್ರೆ ನಾನು ಯಾವ ಪಕ್ಷದಿಂದಾದ್ರೂ ಕಣಕ್ಕಿಳಿಯುತ್ತೇನೆ ಎಂದು ಹೇಳಿದ್ದಾರೆ.

Next Story

RELATED STORIES