Top

ಈ ದೇವಾಲಯದಲ್ಲಿ ಭಕ್ತರಿಗೆ ತಾವರೆ ಎಲೆಯ ಊಟವೇ ಪ್ರಸಾದ.!!

ಈ ದೇವಾಲಯದಲ್ಲಿ ಭಕ್ತರಿಗೆ ತಾವರೆ ಎಲೆಯ ಊಟವೇ ಪ್ರಸಾದ.!!
X

ಮಂಡ್ಯ : ಆಷಾಢ ಮಾಸ ಅಂದ್ರೆ ಶಕ್ತಿ ದೇವತೆ ಆರಾಧಿಸೋದು ವಿಶೇಷ. ಆದ್ರೆ ಮಂಡ್ಯ ಜಿಲ್ಲೆಯ ಆಬಲವಾಡಿಯಲ್ಲಿ ಇದಕ್ಕೆ ತದ್ವಿರುದ್ಧ. ಯಾಕೆಂದರೆ ಇಲ್ಲಿ ಹರಿಸೇವೆ ಮಾಡ್ತಾರೆ. ಶತಮಾನಗಳಿಂದ ನಡೆದುಕೊಂಡು ಬಂದಿರೋ ಈ ಪೂಜೆ, ಸೇವೆ ಜಿಲ್ಲೆಯಲ್ಲೇ ವಿಶೇಷ. ಯಾಕಂದರೆ ಇಲ್ಲಿಗೆ ಬರೋ ಭಕ್ತರಿಗೆ ತಾವರೆ ಎಲೆಯ ಊಟವೇ ಪ್ರಸಾದ. ಹಾಗಾದ್ರೆ ಈ ದೇವಾಲಯದ ವಿಶೇಷತೆ ಅಂತೀರಾ ಮುಂದೆ ಓದಿ..

ಹೌದು, ಮಂಡ್ಯಜಿಲ್ಲೆ ಮದ್ದೂರು ತಾಲ್ಲೂಕಿನ ಅಬಲವಾಡಿ ಗ್ರಾಮದಲ್ಲಿರೋ ತಿಮ್ಮಪ್ಪ ದೇವರಿಗೆ ಆಷಾಢ ಮಾದದ ಮೊದಲ ಶನಿವಾರ ವಿಶೇಷ ಪೂಜೆಯನ್ನು ಗ್ರಾಮಸ್ಥರು ಸೇರಿದಂತೆ ದೇವರ ಮನೆತನದವರು ಮಾಡಿಕೊಂಡು ಬರುತ್ತಿದ್ದಾರೆ. ಈ ವಿಶೇಷ ಪೂಜೆ ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿರುವುದು ವಿಶೇಷ. ಈ ಬಾರಿಯೂ ಶನಿವಾರ ರಾತ್ರಿಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ ಪ್ರಾರಂಭವಾಗುತ್ತದೆ.

ಶನಿವಾರ ರಾತ್ರಿಯೆಲ್ಲಾ ಗ್ರಾಮದಲ್ಲಿ ತೋಪಿನ ತಿಮ್ಮಪ್ಪನ ಉತ್ಸವ ಮೂರ್ತಿಯನ್ನು ಗ್ರಾಮದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಈ ತಿಮ್ಮಪ್ಪನ ಆರಾಧಕರು ಉತ್ಸವ ಮೂರ್ತಿಯನ್ನು ಒತ್ತು ಮೆರವಣಿಗೆ ಮಾಡಿ ಹರಕೆ ತೀರಿಸಿದ್ರು. ನಂತರ ಮುಂಜಾನೆಯೇ ಇಲ್ಲಿ ಬಂದ ಭಕ್ತರಿಗೆ ತಾವರೆ ಎಲೆಯಲ್ಲಿ ಪ್ರಸಾದ ನೀಡೋದೆ ವಿಶೇಷ.

ದೇವರ ಉತ್ಸವ ಆರಂಭ ಆಗುತ್ತಿದ್ದಂತೆ ಟನ್ ಗಟ್ಟಲೆ ಅನ್ನವನ್ನು ಬೇಯಿಸಲಾಗುತ್ತದೆ. ಜೊತೆಗೆ ಕೊಪ್ಪರಿಕೆಗಳಲ್ಲಿ ಸಾಂಬಾರು ಮಾಡಿ ಸಿದ್ಧ ಮಾಡಿಕೊಳ್ಳಲಾಗುತ್ತದೆ. ನಂತರ ದೇವರ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಸುತ್ತ ಭಕ್ತರಿಗೆ ಪ್ರಸಾದದ ಹಂಚಿಕೆ ಕಾರ್ಯ ಆರಂಭ ಆಗುತ್ತದೆ.

ಬಂದ ಭಕ್ತರನ್ನು ಸರಥಿ ಸಾಲಿನಲ್ಲಿ ಕೂರಿಸಿ, ತಾವರೆ ಎಲೆಯನ್ನು ಮೊದಲು ಕೊಡಲಾಗುತ್ತದೆ. ನಂತರ ದೊಡ್ಡ ಪಾತ್ರೆಗಳಲ್ಲಿ ಒಮ್ಮೆ ಮಾತ್ರ ಅನ್ನವನ್ನು ಎಲೆಗೆ ಬಡಿಸಲಾಗುತ್ತದೆ. ನಂತರ ಹಿಂದೆಯಿಂದಲೇ ಸಾಂಬರು ಹಾಕಲಾಗುತ್ತದೆ. ಮತ್ತೊಂದು ವಿಚಾರ ಅಂದ್ರೆ ಇಲ್ಲಿ ಎಲ್ಲರಿಗೂ ಹಿಡಿ ಅನ್ನ ಹಾಕೋದು. ಒಮ್ಮೆ ಹಾಕಿದರೆ ಇಡೀ ತಾವರೆ ಎಲೆಯ ತುಂಬೆಲ್ಲಾ ಹಿಡಿ ಅನ್ನ ಹರಡಿಕೊಳ್ಳತ್ತೆ..

ಒಟ್ಟಿನಲ್ಲಿ ಈ ಉತ್ಸವದಲ್ಲಿ ಮಂಡ್ಯ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಸಾವಿರಾರು ಬರೋದು ಪಾಲ್ಗೊಳ್ಳುತ್ತಾರೆ. ಈ ದೇವರ ಮನೆತನದವರು ಪ್ರತಿ ವರ್ಷ ಬಂದು ತಾವರೆ ಎಲೆ ಊಟ ಮಾಡಿ, ಪೂಜೆ ಸಲ್ಲಿಸಿದರೆ ಹರಕೆ ತೀರಿಸಬೇಕೆಂಬ ಪ್ರತೀತಿಯಿದ್ದು, ಈ ವರ್ಷವೂ ತೋಪಿನ ತಿಮ್ಮಪ್ಪನ ಹರಿಸೇವೆ ಅದ್ದೂರಿಯಾಗಿ ನಡೆಯಿತು.

ವರದಿ : ಎಂ.ಕೆ.ಮೋಹನ್ ರಾಜ್, TV5 ಮಂಡ್ಯ

Next Story

RELATED STORIES