Top

ಮೈಸೂರಿನಲ್ಲಿ ಜೂನಿಯರ್ ಉಮೇಶ್ ರೆಡ್ಡಿ ಪ್ರತ್ಯಕ್ಷ..!!

ಮೈಸೂರಿನಲ್ಲಿ ಜೂನಿಯರ್ ಉಮೇಶ್ ರೆಡ್ಡಿ ಪ್ರತ್ಯಕ್ಷ..!!
X

ಮೈಸೂರು : ಜಿಲ್ಲೆಯಲ್ಲಿ ಜೂನಿಯರ್ ಉಮೇಶ್ ರೆಡ್ಡಿ ಪ್ರತ್ಯಕ್ಷವಾಗಿದ್ದಾನೆ. ಇದ್ರಿಂದ ಮೈಸೂರಿನ ವಿದ್ಯಾರ್ಥಿನಿಯರು ಬೆಚ್ಚಿ ಬಿದ್ದಿದ್ದು, ಆತನ ನಡುವಳಿಕೆಯನ್ನ ಕಂಡು ತಮ್ಮ ರೂಂನಲ್ಲಿರಲು ಕೂಡ ಬೆದರುತ್ತಿದ್ದಾರೆ. ಅಷ್ಟಕ್ಕೂ ಈ ಜ್ಯೂನಿಯರ್ ಉಮೇಶ್ ರೆಡ್ಡಿ ಯಾರು.? ಈತ ಬಂದಿದಾದ್ರು ಎಲ್ಲಿಗೆ ಅನ್ನೋದರ ಕಂಪ್ಲೀಟ್ ಸ್ಟೋರಿ ಮುಂದಿ ಓದಿ..

ಕ್ಯಾಮೆರಾ ನೋಡುತ್ತಾ ಮಹಿಳೆಯರ ಒಳ ಉಡುಪು ಕದ್ದಿಯುತ್ತ ವಿಚಿತ್ರವಾಗಿ ವರ್ತಿಸುವ ಜೂನಿಯರ್ ವಿಕೃತ ಕಾಮಿ, ಮೈಸೂರಿನಲ್ಲಿ ಕಾಣಿಸಿಕೊಂಡಿದ್ದಾನೆ. ಜುಲೈ 20ರ ಮಧ್ಯರಾತ್ರಿ ಮೈಸೂರಿನ ಕೆ.ಆರ್.ಆಸ್ಪತ್ರೆಯ ಮೂರಂತಸ್ಥಿನ ನರ್ಸಿಂಗ್ ಕಾಲೇಜಿನ ಲೇಡಿಸ್ ಹಾಸ್ಟೆಲ್ಗೆ ನುಗ್ಗಿರುವ, ಸೈಕೋ ಮಹಿಳೆಯರ ಒಳ ಉಡುಪುಗಳನ್ನು ತೆಗೆದುಕೊಂಡು ವಿಕೃತ ಮನಸ್ಥಿತಿಯನ್ನ ಪ್ರದರ್ಶನ ಮಾಡಿದ್ದಾನೆ. ಈತನ ಪ್ರತಿಯೊಂದು ಸೈಕೋ ಆಟ ಹಾಸ್ಟೆಲ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಬೆಚ್ಚಿ ಬಿದ್ದಿದ್ದಾರೆ.

ಹೌದು, ವಿದ್ಯಾರ್ಥಿನಿಯ ರೂಂಗೆ ನುಗ್ಗಿ ಮೊಬೈಲ್ ಕದ್ದ ಈತನ ಕೃತ್ಯವನ್ನ ಹಾಸ್ಟೆಲ್ ವಿದ್ಯಾರ್ಥಿನಿ ನೋಡಿದ್ದಾಳೆ. ಈ ವೇಳೆ ಸೈಕೋ ಕಳ್ಳ ಕತ್ತು ಹಿಸುಕುವ ಮೂಲಕ ಅಸಭ್ಯ ವರ್ತನೆ ತೋರಿದ್ದಾನೆ. ಸೆಕ್ಯೂರಿಟಿ ಗಾರ್ಡ್, ಸಿಸಿಟಿವಿ ಇದ್ದರೂ ಲೆಕ್ಕಿಸದೇ ಕಾಂಪೌಂಡ್ ಹಾರಿ ಒಳ ನುಗ್ಗಿರುವ ಸೈಕೋ ಜು‌.20ರಂದು ಬೆಳಗಿನ ಜಾವ ಸುಮಾರು 3ಗಂಟೆ ವರೆಗೂ ಹಾಸ್ಟೆಲ್‌ನಲ್ಲೇ ಅಡ್ಡಾಡಿ ಯುವತಿಯರ ಒಳ ಉಡುಪುಗಳನ್ನು ತೆಗೆದುಕೊಂಡು ವಿಚಿತ್ರವಾಗಿ ವರ್ತಿಸಿದ್ದಾ‌ನೆ.

ಸುಮಾರು 30ವರ್ಷ ಇತಿಹಾಸವಿರುವ ಕೆ.ಆರ್.ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಹಾಸ್ಟೆಲ್‌‌‌ನ ಹಿಂಭಾಗದಿಂದ ಕಾಂಪೌಂಡ್ ಹಾರಿ ಬಂದು ಈ ಕೃತ್ಯ ಎಸಗಲಾಗಿದೆ. ಕಳೆದ ವರ್ಷವೂ ಇದೇ ರೀತಿಯ ಘಟನೆ ನಡೆದಿದ್ದು, ಆ ವೇಳೆ ಹಾಸ್ಟೆಲ್ ನಲ್ಲಿ‌ ಸಿಸಿಟಿವಿ ಹಾಕಿರಲಿಲ್ಲ. ಘಟನೆ ಬಳಿಕ ಸಿಸಿಟಿವಿ ಅಳವಡಿಸಿದ್ದ ಹಾಸ್ಟೆಲ್ ನ ಆಡಳಿತ ಮಂಡಳಿ ಈ ವಿಚಾರ ತಿಳಿಯುತಿದ್ದಂತೆ ಎಚ್ಚೆತ್ತುಕೊಂಡ ದೇವರಾಜ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಒಟ್ಟಾರೆ, ಜ್ಯೂ.ಉಮೇಶ್ ರೆಡ್ಡಿಯ ವರ್ತನೆಗೆ ಮೈಸೂರಿನ ಹಾಸ್ಟೆಲ್ ವಿದ್ಯಾರ್ಥಿನಿಯರು ಬೆಚ್ಚಿಬಿದ್ದಿದ್ದು, ಕೌಂಪೌಂಡ್ ಹಾರಿ ಬಂದ ರೋಮಿಯೋಗಾಗಿ ಮೈಸೂರು ನಗರ ಪೊಲೀಸರು ತಲಾಷ್ ಆರಂಭಿಸಿದ್ದಾರೆ. ಆದಷ್ಟು ಬೇಗ ಈ ವಿಕೃತ ಕಾಮಿಯ ಬಂಧನವಾಗದಿದ್ರೆ, ಮತ್ತೇಷ್ಟು ಹಾಸ್ಟೆಲ್‌ಗಳಿಗೆ ನುಗ್ಗಿತ್ತಾನೋ ಅನ್ನೋ ಭಯದಲ್ಲಿ ಸಾಂಸ್ಕೃತಿಕ ನಗರಿಯ ಜನರು ಭಯ ಪಡುತ್ತಿದ್ದಾರೆ.

ವರದಿ : ಸುರೇಶ್, Tv5 ಮೈಸೂರು

Next Story

RELATED STORIES