Top

ಹೆಂಡತಿಯ ತವರು ಮನೆಗೆ ಬೆಂಕಿ ಇಟ್ಟ ಪತಿ : ನಾಲ್ವರ ಸಜೀವ ದಹನ.!!

ಹೆಂಡತಿಯ ತವರು ಮನೆಗೆ ಬೆಂಕಿ ಇಟ್ಟ ಪತಿ : ನಾಲ್ವರ ಸಜೀವ ದಹನ.!!
X

ಕಲಬುರ್ಗಿ : ಭಾವ ಅಮಾಯಕ ಭಾಮೈದ ಪ್ರಳಯಾಂತಕ. ಇಂತಹ ಕಿರಾತಕ ಮಾಡಿದ ಖತರನಾಕ್ ಕೆಲಸಕ್ಕೆ ಕೊನೆಗೆ ಇಡೀ ಕುಟುಂಬವೇ ಸರ್ವಾನಾಶವಾಗಿದೆ. ಹೀಗಾಗಿ ಎನೂ ತಪ್ಪೇ ಮಾಡದ ನಾಲ್ಕು ಜೀವಗಳು ಸುಟ್ಟು ಕರಕಲಾಗಿವೆ. ದುರಂತ ಅಂದ್ರೆ ಪಾಪಿ ಮಾಡಿದ ಕೃತ್ಯಕ್ಕೆ ಕಾರಣ ಮಾತ್ರ ವೆರಿ ಸಿಂಪಲ್.

ಒಂದೇ ಒಂದು ಜೀವಕ್ಕೆ ಎನಾದ್ರೂ ಅನಾಹುತವಾದ್ರೆ ಸಾಕು ಕರುಳು ಕಿತ್ತುಬರುತ್ತೆ. ಆದ್ರೆ ಇಲ್ಲಿ ಬರೋಬ್ಬರಿ ನಾಲ್ಕು ಜೀವಗಳು ಸುಟ್ಟು ಕರಕಲಾಗಿವೆ. ಇಂತಹದೊಂದು ಭೀಕರ ಕೃತ್ಯ ಎಸಗಿದ ಪಾಪಿ ಹೆಸ್ರು ಮುಸ್ತಫಾ. ಕಲಬುರಗಿಯ ಇಕ್ಬಾಲ್ ಕಾಲನಿಯ ಅಕ್ಬರ್ ಮತ್ತವನ ಕುಟುಂಬ ಒಟ್ಟು ನಾಲ್ಕು ಜನರು ಮಲೆಯಲ್ಲಿ ಮಲಗಿದ ವೇಳೆ ಪಾಪಿ ಮುಸ್ತಫಾ ಮನೆಗೆ ಬೆಂಕಿ ಹಚ್ಚಿದ್ದಾನೆ. ಕಾರಣ ತನ್ನ ಹೆಂಡ್ತಿ ಪದೇಪೇದೇ ತವರು ಮನೆಗೆ ಹೋಗ್ತಿದ್ದಾಳೆ ಅಂತ. ಇಂತಹದೊಂದು ಕ್ಷುಲ್ಲಕ ಕಾರಣಕ್ಕೆ ನರಳಾಡುತ್ತಿದ್ದ ನಾಲ್ಕನೇ ಜೀವ ಯಾಸೀನ್ ರಾತ್ರಿ ಕೊನೆಯುಸಿರೆಳೆದಿದ್ದಾನೆ.

ಸದಾ ಹೆಂಡ್ತಿ ಜೊತೆ ಜಗಳ ವಾಡುತ್ತಿದ್ದ ಆರೋಪಿ ಮುಸ್ತಫಾ ಕಿರಿಕಿರಿಗೆ ಬೇಸತ್ತು ಹೆಂಡ್ತಿ ತವರು ಮನೆ ಅಂದ್ರೆ ಅಣ್ಣ ಅತ್ತಿಗೆ ಮನೆಗೆ ಹೋಗ್ತಿದ್ಳು. ಇದಕ್ಕೆ ತಲೆಕೆಡಿಸಿಕೊಂಡ ಮುಸ್ತಫಾ ತವರು ಮನೆನೇ ಭಸ್ಮ ಮಾಡಿದ್ರೆ ಇವಳು ನನ್ನಲ್ಲಿಯೇ ಬಿದ್ದಿರ್ತಾಳೆ ಅಂತ ಪ್ಲಾನ್ ಮಾಡಿದ..ಹೀಗಾಗಿ ಜುಲೈ 4 ರಂದು ಭೈವ ಅಕ್ಬರ್ ಮನೆಗೆ ಬೆಂಕಿ ಇಟ್ಟ. ತೀವ್ರವಾಗಿ ಗೊಯಗೊಂಡವರು ಒಬ್ಬೊಬ್ಬರಾಗಿ ಕೊನೆಯುಸಿರೆಳೆದ್ರು. ಆದ್ರೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 19 ವರ್ಷದ ಯಾಸೀನ್‌ ಕೂಡ ಇಂದು ಕೊನೆಯುಸಿರೆಳೆದಿದ್ದಾನೆ.

ಯಾಸೀನ್ ಕೊನೆ ಉಸಿರು ಎಳೆಯುತ್ತಿದ್ದಂತೆ, ಆಕ್ರೋಶದ ಸಿಟ್ಟಿನ ಕಟ್ಟೆ ಹೊಡೆದ ಸಂಬಂಧಿಕರು, ಮೃತನ ಶವದೊಂದಿಗೆ ಪೊಲೀಸ್ ಠಾಣೆಯ ಮುಂದೆ ನೆರೆದು ಪ್ರತಿಭಟನೆ ನಡೆಸಿದರು. ಈ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಬಂದ ಕಲಬುರ್ಗಿ ಎಸ್ಪಿ ಶಶಿಕುಮಾರ್, ಮೃತರನ್ನು ಸಮಾಧಾನಿಸಿ, ಮುಂದಿನ ಕಾರ್ಯ ನಡೆಸುವಂತೆ ಮನವೊಲಿಸಿದರು.

ಒಟ್ಟಾರೆ ನಾಲ್ಕು ಜೀವಗಳನ್ನ ಬಲಿ ಪಡೆದ ಪಾಪಿಗೆ ಪೋಲೀಸ್ರು ಅರೆಸ್ಟ್ ಮಾಡಿದ್ದಾರೆ. ಈ ಮೂಲಕ ಆರೋಪಿಯನ್ನು ಜೈಲಿಗಟ್ಟಿದ್ದಾರೆ.

ವರದಿ : ಗೋಪಾಲ ಕುಲಕರ್ಣಿ, ಟಿವಿ5 ಕಲಬುರಗಿ

Next Story

RELATED STORIES