Top

ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ : ಇಬ್ಬರ ಸಹೀವ ದಹನ

ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ : ಇಬ್ಬರ ಸಹೀವ ದಹನ
X

ಆನೇಕಲ್ : ಬೆಳ್ಳಂಬೆಳ್ಳಿಗ್ಗೆ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು ಡಿಕ್ಕಿಯ ರಭಸಕ್ಕೆ ಎರಡು ವಾಹನಗಳಿಗೆ ಬೆಂಕಿ ಹತ್ತಿಕೊಂಡಿದ್ದು ಕಾರಿನಲ್ಲಿದ್ದ ಇಬ್ಬರು ಸಜೀವ ದಹನವಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ.

ಹೊಸೂರು ಮುಖ್ಯರಸ್ತೆ ಚಂದಾಪುರ ಸಮೀಪದ ಹೆನ್ನಾಗರ ಗೇಟ್ ನಲ್ಲಿ ತಮಿಳುನಾಡಿನಿಂದ ಬೆಂಗಳೂರು ಕಡೆ ಹೊರಟಿದ್ದ ಕೆ.ಎ.51 ಎಎ. 5814 ನೋಂದಣಿ ಸಂಖ್ಯೆಯ ಖಾಸಗಿ ಬಸ್'ಗೆ ಬೆಂಗಳೂರಿನಿಂದ ಹೊಸೂರು ಕಡೆಗೆ ಹೊರಟಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಈ ಡಿಕ್ಕಿಯ ರಭಸಕ್ಕೆ ಎರಡು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲಿ ಕಾರು ಸಂಪೂರ್ಣ ಭಸ್ಮವಾಗಿದ್ದು ಕಾರಿನಲ್ಲಿದ್ದ ಇಬ್ಬರು ಗುರುತು ಸಿಗದಷ್ಟು ಸಜೀವ ದಹನವಾಗಿದ್ದಾರೆ.

ಇನ್ನು ಬಸ್‌ನಲ್ಲಿ ಸುಮಾರು 30 ರಿಂದ 40 ಜನ ಪ್ರಯಾಣಿಕರಿದ್ದರೆಂದು ತಿಳಿದು ಬಂದಿದ್ದು ಅವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ನಂತ್ರ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಎರಡು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು, ಸ್ಥಳಕ್ಕೆ ಸೂರ್ಯ ಸಿಟಿ ಪೊಲೀಸರು ಭೇಟಿ ನೀಡಿ ಕಾರಿನಲ್ಲಿದ್ದವರ ಬೆಂಗಳೂರಿನ ಕಲ್ಲಹಳ್ಳಿಯ ಶಿವನ್ ಚೆಟ್ಟಿ ನಿವಾಸಿಗಳು ಗುರುತಿಸಲಾಗಿದೆ.

Next Story

RELATED STORIES