Top

ದಿ ವಿಲನ್ ಚಿತ್ರದ ಸೆಕೆಂಡ್ ಸಾಂಗ್ ರಿಲೀಸ್

ಕೆಲ ದಿನಗಳ ಹಿಂದಷ್ಟೇ ಬಹುನಿರೀಕ್ಷಿತ ಸಿನಿಮಾ ದಿ ವಿಲನ್ ಚಿತ್ರದ ಮೊದಲ ಸಾಂಗ್ ಬಿಡುಗಡೆಯಾಗಿತ್ತು. ಶಿವಣ್ಣ, ಸುದೀಪ್ ಅಭಿನಯದ ಮಲ್ಟಿಸ್ಟಾರರ್ ಸಿನಿಮಾ ಟೈಟಲ್ ಸಾಂಗ್ ಐ ಆ್ಯಮ್ ವಿಲನ್ ಸಾಂಗ್ ಭಾರೀ ಸೌಂಡ್ ಮಾಡಿತ್ತು. ಇದೀಗ ಚಿತ್ರದ ಸೆಕೆಂಡ್ ಲಿರಿಕಲ್ ಸಾಂಗ್ ಕೂಡ ರಿಲೀಸ್ ಆಗಿದ್ದು, ಸಖತ್ ಕ್ರೇಜ್ ಹುಟ್ಟುಹಾಕಿದೆ.

ಅರ್ಜುನ್ ಜನ್ಯಾ ಸಂಗೀತ, ಜೋಗಿ ಪ್ರೇಮ್ ಸಾಹಿತ್ಯದಲ್ಲಿ ಮೂಡಿಬಂದ ಹಾಡಿಗೆ, ಕೈಲಾಶ್ ಖೇರ್, ವಿಜಯ್ ಪ್ರಕಾಶ್, ಪ್ರೇಮ್ ಕಂಠದಾನ ಮಾಡಿದ್ದಾರೆ. ನಾನ್ ಸೈಲೆಂಟ್ ಆಗಿದ್ರೆ ರಾಮ, ವೈಲೆಂಟ್ ಆದ್ರೆ ರಾವಣ ಎಂಬ ಮಾತಿನೊಂದಿಗೆ ಶುರುವಾಗುವ ಈ ಹಾಡಿನ ಹೆಸರು ಟಿಕ್ ಟಿಕ್ ಟಿಕ್ ಟಿಕ್. ಕೆಲ ದಿನಗಳ ಹಿಂದೆ ನಿನ್ನೆ ಮೊನ್ನೆ ಬಂದೋರೆಲ್ಲ ನಂಬರ್ ಒನ್ ಅಂತಾರೋ ಎಂಬ ದಿ ವಿಲನ್ ಮೂವಿ ಹಾಡು ವಿವಾದಕ್ಕೀಡಾಗಿತ್ತು. ಈ ವಾಕ್ಯವಿರುವುದು ಇದೇ ಹಾಡಿನಲ್ಲಿ.

https://www.youtube.com/watch?v=UCTB_MEXw2c&feature=youtu.be

Next Story

RELATED STORIES