ಶಿರೂರು ಶ್ರೀಗಳಿಗೆ ಶಿಷ್ಯರಿಂದಲೇ ಮೋಸವಾಗಿತ್ತಾ?

X
TV5 Kannada21 July 2018 6:50 AM GMT
ಉಡುಪಿ: ಉಡುಪಿಯ ಶಿರೂರು ಲಕ್ಷ್ಮಿವರ ಶ್ರೀಗಳ ಅಸಹಜ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಶಿರೂರು ಶ್ರೀಗಳಿಗೆ ಭೂ ಮಾಫಿಯಾದ ನಂಟಿದ್ದು, ಇದೇ ಅವರ ಅಸಹಜ ಸಾವಿಗೆ ಕಾರಣವಾಗಿತ್ತು ಎಂದು ಹೇಳಲಾಗುತ್ತಿದೆ. ಇನ್ನು ತಮ್ಮ ಹಣವನ್ನು ತರಿಸಿಕೊಡಲು ಶ್ರೀಗಳು ಕೋಟಿ ಚೆನ್ನೈಯರ ಮೊರೆ ಹೋಗಿದ್ದರೆನ್ನಲಾಗಿದೆ.
ಕೆಲ ದಿನಗಳ ಹಿಂದೆ ಹಿರಿಯಡ್ಕ ನೇರಳೆಕಟ್ಟೆ ಗರೋಡಿಯಲ್ಲಿ ನಡೆದಿದ್ದ ಕೋಲದಲ್ಲಿ ದೈವಕ್ಕೆ, ತಮಗಾದ ಮೋಸದ ಬಗ್ಗೆ ಶ್ರೀಗಳು ದೂರು ನೀಡಿದ್ದರು.ತಮಗೆ ಇಬ್ಬರು ಉದ್ಯಮಿ ಶಿಷ್ಯರಿಂದ ಮೋಸವಾಗಿದೆ, ಒಬ್ಬ 12ಕೋಟಿ, ಮತ್ತೊಬ್ಬ 14ಕೋಟಿ ವಂಚನೆ ಮಾಡಿದ್ದಾನೆ ಎಂದು ಶ್ರೀಗಳು ದೈವಕ್ಕೆ ದೂರು ನೀಡಿದ್ದರು. ಈ ವೇಳೆ ಮೊಬೈಲ್ನಲ್ಲಿ ಈ ಸಂಭಾಷಣೆಯನ್ನು ವಿಡಿಯೋ ಮಾಡಲಾಗಿದ್ದು, ಶ್ರೀಗಳು ದೈವದ ಜೊತೆ ತುಳು ಭಾಷೆಯಲ್ಲಿ ಮಾತನಾಡಿದ್ದು ಈಗ ವೈರಲ್ ಆಗಿದೆ.
https://www.youtube.com/watch?v=GFWb_eneV-k
Next Story