Top

ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಕಿಚ್ಚ ಕೊಟ್ರು ಗುಡ್ ನ್ಯೂಸ್

ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಕಿಚ್ಚ ಕೊಟ್ರು ಗುಡ್ ನ್ಯೂಸ್
X

ಒಬ್ಬ ಸಾಮಾನ್ಯ ಪ್ರತಿಭೆ ಯಾರ ಬೆಂಬಲವೂ ಇಲ್ಲದೆ ಶ್ರದ್ದೆ ಪರಿಶ್ರಮದಿಂದ ಏನೆಲ್ಲಾ ಮಾಡಬಹುದು ಅನ್ನೋದನ್ನ ಪ್ರೂವ್ ಮಾಡಿದ ಛಲಗಾರ ಸುದೀಪ್.ಗಾಡ್​ಫಾದರ್ ಇಲ್ಲದೆಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುದೀಪ್​ ಮೊದ ಮೊದಲು ಐರೆನ್ ಲೆಗ್ ಅಂತ ಅವಮಾನಕ್ಕೊಳಗಾಗಿದ್ರು. ಅವಕಾಶ ವಂಚಿತರಾಗಿದ್ರು. ಆದ್ರೂ ಸಹ ಸಿನಿಮೋತ್ಸಾಹದ ದಾಹ ಸ್ಟಾರ್ ಆಗಿಸಿತು. ದೇಸಾಯಿಯ ಸ್ಪರ್ಶ ಚಿತ್ರದಿಂದ, ಸುದೀಪ್ ಕನ್ನಡಿಗರ ಮನಗೆದ್ದ ಹೃದಯಸ್ಪರ್ಶಿ ಕಥೆ ಎಲ್ರಿಗೂ ಗೊತ್ತೇಯಿದೆ.

ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಿಂದ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿದ ಸುದೀಪ್ ಕನ್ನಡದ ಬಿಗ್ ಬಾಸ್ ಅನ್ನೋದು ಮರೆಯೋ ಹಾಗಿಲ್ಲ. ಅಂದಹಾಗೆ ಟ್ವಿಟರ್​ನಲ್ಲಿ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಇರೋ ಕನ್ನಡದ ಸ್ಟಾರ್ ಅಂದ್ರೆ ಅದು ಒನ್ ಅಂಡ್ ಓನ್ಲಿ ಅಭಿನಯ ಚಕ್ರವರ್ತಿ.

ಅಂದುಕೊಂಡದ್ದನ್ನ ವಿವೇಕತೆಯಿಂದ, ದೂರದೃಷ್ಠಿಯಿಂದ ಸಾಧಿಸಿ ತೋರಿಸೋ ಜಾಯಮಾನ ಸುದೀಪ್​ರದ್ದು. ಸಿನಿಮಾಗೆ ಮಾತ್ರ ಸೀಮಿತವಾಗದ ಸುದೀಪ್, ಸಿನಿಮೇತರ ಕಾರ್ಯಗಳಲ್ಲೂ ಎತ್ತಿದ ಕೈ. ಅದ್ರಲ್ಲೂ ಕ್ರಿಕೆಟ್ ಅಂದ್ರೆ ಕಿಚ್ಚನಿಗೆ ಪಂಚಪ್ರಾಣ. ಅದಕ್ಕೆ ರಾಜ್ ಕಪ್, ಸೆಲೆಬ್ರಿಟಿ ಕ್ರಿಕೆಟ್ ಲೀಗ್, ಕರ್ನಾಟಕ ಪ್ರೀಮಿಯಂ ಲೀಗ್​ಗಳೇ ಬೆಸ್ಟ್ ಎಕ್ಸಾಂಪಲ್.

ಕೆಪಿಎಲ್​ನಿಂದ ಹೊರಬಂದ ನಂತ್ರ ಕಿಚ್ಚ ಸುದೀಪ್, ಇಡೀ ಕನ್ನಡ ಚಿತ್ರರಂಗವನ್ನ ಒಂದೆಡೆ ಸೇರಿಸಿ, ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನ್​ಮೆಂಟ್ ಮಾಡೋ ಸಾಹಸ ಮಾಡ್ತಾರೆ. ಅದೇ ಕೆಸಿಸಿ. ಇತ್ತೀಚೆಗೆ ಅದ್ರ ಮೊದಲ ಸೀಸನ್ ಎಷ್ಟರ ಮಟ್ಟಿಗೆ ಸಕ್ಸಸ್ ಆಯ್ತು, ಮನ್ನಣೆ ಪಡೀತು ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಇದೀಗ ಸುದೀಪ್, ಸ್ಯಾಂಡಲ್​ವುಡ್ ಅಂಗಳದಲ್ಲಿ ಮತ್ತೊಂದು ದಾಖಲೆ ಬರೆಯೋಕೆ ಮುಂದಾಗಿದ್ದಾರೆ. ಅದಕ್ಕಾಗಿ ಸುದೀಪ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭರ್ಜರಿ ಬೇಟೆ ಕೂಡ ಆಡಿರೋದು ಹುಬ್ಬೇರಿಸುವಂತಿದೆ. ಹೌದು, ಕೆಸಿಸಿ ಸೀಸನ್-2 ಗೆ ಈಗಲಿಂದಲೇ ತಯಾರಿ ಶುರುವಿಟ್ಟಿದ್ದಾರೆ ಕಿಚ್ಚ ಸುದೀಪ್.

ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನ್​ಮೆಂಟ್​ ಲೋಗೋ ಲಾಂಚ್​ಗೆ ರೆಬೆಲ್ ಸ್ಟಾರ್ ಅಂಬರೀಶ್, ಕ್ರಿಕೆಟರ್ ಅನಿಲ್ ಕುಂಬ್ಳೆ ಸೇರಿದಂತೆ ಇಡೀ ಸ್ಯಾಂಡಲ್​ವುಡ್ ಸ್ಟಾರ್ಸ್​ ಸಾಥ್ ಕೊಟ್ಟಿದ್ರು. ಯಶ್, ಪ್ರೇಮ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ಸ್​ ಎಲ್ಲಾ ಬ್ಯಾಟು-ಬಾಲು ಹಿಡಿದು ಫೀಲ್ಡ್​ಗೆ ಇಳಿದಿದ್ರು.

ಇದೀಗ ಮತ್ತೆ ಅಂತಹ ಸಮಯ ಸಮೀಪಿಸ್ತಿದೆ. ತುಂಬಾ ಕಡಿಮೆ ಕಾಲಾವಧಿಯಲ್ಲೇ ಸೀಸನ್-2ಗೆ ಸುದೀಪ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದು ಸುದೀಪ್ ಅಭಿಮಾನಿಗಳ ಜೊತೆ ಕ್ರಿಕೆಟ್ ಪ್ರಿಯರಿಗೂ ಸ್ವೀಟ್ ನ್ಯೂಸ್ ಆಗಿದ್ದು, ಇಡೀ ಸೌತ್ ಸಿನಿದುನಿಯಾ ಭೇಷ್ ಅನ್ನುವಂತಾಗಿದೆ.

ಇದು ಅಕ್ಷರಶಃ ನಿಜ. ಈ ಬಾರಿಯ ಕೆಸಿಸಿ ಸೀಸನ್-2ನಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟರ್ಸ್​ ಆದ ಡೆಲ್ಲಿ ಡ್ಯಾಶರ್ ಸೆಹ್ವಾಗ್, ಶ್ರೀಲಂಕಾದ ದಿಲ್ಷನ್, ಆಸ್ಟ್ರೇಲಿಯಾದ ಗಿಲ್​ಕ್ರಿಸ್ಟ್, ಸೌತ್ ಆಫ್ರಿಕಾದ ಹರ್ಷೆಲ್ ಗಿಬ್ಸ್ ಇರಲಿದ್ದಾರೆ. ಬರೀ ಟಿ-20, ಇಂಟರ್ ನ್ಯಾಷನಲ್ ಒನ್ ಡೇ ಹಾಗೂ ಟೆಸ್ಟ್ ಟೂರ್ನ್​ಮೆಂಟ್​ಗಳಲ್ಲಿ ಇವ್ರನ್ನ ನೋಡಿ ಕಣ್ತುಂಬಿಕೊಳ್ತಿದ್ದ ಹಾಗೂ ಅವ್ರ ಫೋರು ಸಿಕ್ಸ್​ಗೆ ಶಿಳ್ಳೆ ಚಪ್ಪಾಳೆ ಹೊಡೀತಿದ್ರು ಕನ್ನಡಿಗರು. ಆದ್ರೀಗ ಇವ್ರನ್ನ ನೇರವಾಗಿ ನೋಡೋ ಸದಾವಕಾಶವನ್ನ ಕಲ್ಪಿಸಿಕೊಡ್ತಿದ್ದಾರೆ ಕಿಚ್ಚ ಸುದೀಪ್. ಇದು ನಿಜಕ್ಕೂ ದೊಡ್ಡ ಸಾಹಸವೇ ಸರಿ.

ಅಂದಹಾಗೆ ಈ ಕುರಿತು ಸದ್ಯದಲ್ಲೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸುದೀಪ್, ಈ ಇಲ್ಲಾ ಇಂಟರ್ ನ್ಯಾಷನಲ್ ಕ್ರಿಕೆಟರ್ಸ್​ ಜೊತೆಗೂಡಿ ಮಾಧ್ಯಮಗೋಷ್ಠಿ ಕೂಡ ನಡೆಸಲಿದ್ದು, ಯಾರ ತಂಡದಲ್ಲಿ ಯಾವ ಸ್ಟಾರ್ ಕ್ರಿಕೆಟರ್ ಇರಲಿದ್ದಾರೆ ಅನ್ನೋದು ರಿವೀಲ್ ಮಾಡಲಿದ್ದಾರೆ.

ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹೀಗೆ ಭಾರತೀಯ ಚಿತ್ರರಂಗದ ಬೇರೆ ಬೇರೆ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರೋ ಸುದೀಪ್, ಇದೀಗ ಹಾಲಿವುಡ್​ನಲ್ಲೂ ನಟಿಸ್ತಿರೋದು ಗೊತ್ತೇಯಿದೆ. ಸ್ಟಾರ್ ಡೈರೆಕ್ಟರ್ ರಾಜಮೌಳಿಯಿಂದ ಹಿಡಿದು, ಪರಭಾಷಾ ಸ್ಟಾರ್ಸ್​ ವರೆಗೆ ಉತ್ತಮ ಒಡನಾಟ ಹೊಂದಿರೋ ಸುದೀಪ್, ಇದೀಗ ಯೂನಿವರ್ಷಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇದು ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಚಾರ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES