Top

ಕೋಟೆ ಕಾಪಾಡಲು ಐತಿಹಾಸಿಕ ಕ್ರಿಕೆಟ್ ಮೈದಾನ ಕೆಡವಲು ಮುಂದಾದ ಸರ್ಕಾರ!

ಕೋಟೆ ಕಾಪಾಡಲು ಐತಿಹಾಸಿಕ ಕ್ರಿಕೆಟ್ ಮೈದಾನ ಕೆಡವಲು ಮುಂದಾದ ಸರ್ಕಾರ!
X

ವಿಶ್ವದ ಅತ್ಯಂತ ಅದ್ಭುತ ವೀಕ್ಷಣೆಯ ಕ್ರಿಕೆಟ್ ಮೈದಾನಗಳಲ್ಲಿ ಒಂದಾದ ಶ್ರೀಲಂಕಾದ ಗಾಲೆ ಕ್ರೀಡಾಂಗಣ ನೋಡಲು ಇನ್ನು ಕೆಲವೇ ದಿನಗಳು ಮಾತ್ರ ಲಭ್ಯ!

ಹೌದು, ಪ್ರವಾಸೋದ್ಯಮ ನಿಯಮವನ್ನು ಮೀರಿ ಕ್ರೀಡಾಂಗಣದ ಪೆವಿಲಿಯನ್ ಸ್ಟ್ಯಾಂಡ್ ಬಳಿ ಜಾಗವನ್ನು ಒತ್ತುವರಿ ಮಾಡಿಕೊಂಡಿದೆ. ಇದರಿಂದ 17ನೇ ಶತಮಾನದ ಡಚ್ಚರ ಕಾಲದ ಕೋಟೆಗೆ ಧಕ್ಕೆ ಬಂದಿದೆ. ಈ ಕೋಟೆಯನ್ನು ರಕ್ಷಿಸುವ ಉದ್ದೇಶದಿಂದ ಗಾಲೆ ಕ್ರೀಡಾಂಗಣವನ್ನು ಧ್ವಂಸಗೊಳಿಸಲು ಸರಕಾರ ನಿರ್ಧರಿಸಿದೆ.

1984ರಲ್ಲಿ ನಿರ್ಮಾಣವಾದ ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ನಡೆದಿದ್ದು 1998ರಲ್ಲಿ. 2004ರಲ್ಲಿ ಭೀಕರ ಸುನಾಮಿಯಿಂದಾಗಿ ಈ ಕ್ರೀಡಾಂಗಣದ ಬಹುತೇಕ ಭಾಗ ಹಾನಿಗೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣ ಮರು ನಿರ್ಮಾಣದ ವೇಳೆ ಸ್ವಲ್ಪ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು.

ಕೋಟೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರಿಂದ ಯುನೆಸ್ಕೊದಿಂ ವಿಶ್ವ ಪ್ರವಾಸಿ ತಾಣ ಎಂಬ ಸ್ಥಾನವನ್ನು ಶ್ರೀಲಂಕಾ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣವನ್ನು ಧ್ವಂಸಗೊಳಿಸಲು ಶ್ರೀಲಂಕಾ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ.

Next Story

RELATED STORIES