Top

6 ಭಾಷೆಗಳಲ್ಲಿ ತೆರೆಮೇಲೆ ತ್ರಿವಿಕ್ರಮನ ದರ್ಬಾರ್

6 ಭಾಷೆಗಳಲ್ಲಿ ತೆರೆಮೇಲೆ ತ್ರಿವಿಕ್ರಮನ ದರ್ಬಾರ್
X

ಸಿಂಹದ ಮರಿ, AK 47, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಮತ್ತು ಓಂ ಪ್ರಕಾಶ್ ರಾವ್​ ಜೋಡಿಯ ಸೂಪರ್ ಹಿಟ್ ಸಿನಿಮಾಗಳು. ಇವರಿಬ್ಬರ ಕಾಂಬಿನೇಷನ್​ನಲ್ಲಿ ತ್ರಿವಿಕ್ರಮ ಅನ್ನೋ ಮತ್ತೊಂದು ಸಿನಿಮಾ ಬರುತ್ತೆ ಅನ್ನೋ ಸುದ್ದಿ ಕೇಳಿ ಬರ್ತಾನೆ ಇದೆ. ಹಾಫ್​ ಸೆಂಚುರಿ ಹೊಸ್ತಿಲಲ್ಲಿರೋ ಓಂ ಪ್ರಕಾಶ್​ ರಾವ್, ತಮ್ಮ 50ನೇ ಚಿತ್ರದಲ್ಲಿ ಶಿವಣ್ಣನನ್ನ ಡೈರೆಕ್ಟ್ ಮಾಡೋ ಹುಮ್ಮಸ್ಸಿನಲ್ಲಿದ್ದಾರೆ. ತ್ರಿವಿಕ್ರಮ, ಓಂ ನಿರ್ದೇಶನದ 50ನೇ ಆ ಸಿನಿಮಾ ಆಗೋ ಸಾಧ್ಯತೆಯಿದೆ.

ಸದ್ಯ ತೆಲುಗಿನ ಬಲುಪು ಚಿತ್ರವನ್ನ ರವಿಚಂದ್ರನ್, ಉಪೇಂದ್ರ ಕಾಂಬಿನೇಷನ್​ನಲ್ಲಿ ತೆರೆಗೆ ತರೋ ಪ್ರಯತ್ನದಲ್ಲಿ ಓಂ ಪ್ರಕಾಶ್​ ರಾವ್ ತಮ್ಮ 50ನೇ ಸಿನಿಮಾ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.ಶಿವಣ್ಣ ಅಭಿನಯದ 50ನೇ ಸಿನಿಮಾ ಎಕೆ47ಗೆ ಓಂ ಆಕ್ಷನ್ ಕಟ್ ಹೇಳಿದ್ರು. ಹಾಗಾಗಿ ತಮ್ಮ 50ನೇ ಚಿತ್ರದಲ್ಲಿ ಶಿವಣ್ಣ ನಟಿಸ್ಬೇಕು ಅನ್ನೋದು ನಿರ್ದೇಶಕರ ಆಸೆ.6 ಭಾಷೆಗಳಲ್ಲಿ ಚಿತ್ರವನ್ನ ತೆರೆಗೆ ತರೋ ಪ್ರಯತ್ನದಲ್ಲಿದ್ದಾರೆ ಓಂ.

ಸದ್ಯ ಓಂ ಪ್ರಕಾಶ್ ರಾವ್ ನಿರ್ದೇಶನದ ರವಿಚಂದ್ರ ಸಿನಿಮಾ ಟಾಕ್ ಆಫ್​ ದ ಟೌನ್ ಆಗಿದೆ.ಚಿತ್ರದಲ್ಲಿ ರವಿಚಂದ್ರನ್, ಉಪೇಂದ್ರ ನಟಿಸಲಿದ್ದಾರೆ.ಅದಾದ ನಂತ್ರ ಮತ್ತೆರಡು ಸಿನಿಮಾಗಳಿಗೆ ಓಂ ಆಕ್ಷನ್ ಕಟ್ ಹೇಳಲಿದ್ದು, 2019ರ ಕೊನೆಗೆ 50ನೇ ಚಿತ್ರಕ್ಕೆ ಚಾಲನೆ ಸಿಗಲಿದೆ. ಸಾಲು ಸಾಲು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿಯಾಗಿದ್ದು, 2020 ವೇಳೆಗೆ ತ್ರಿವಿಕ್ರಮ ಚಿತ್ರ ಸೆಟ್ಟೇರೋ ಸಾಧ್ಯತೆಯಿದೆ.

ಸಿಂಹದ ಮರಿ, ಎಕೆ47, ಶಿವ, ನಿನ್ನೇ ಪ್ರೀತಿಸುವೆ, ಸುಗ್ರೀವ ಸಿನಿಮಾಗಳಲ್ಲಿ ಓಂ ಮತ್ತು ಶಿವಣ್ಣ ಜೊತೆಯಾಗಿ ಕೆಲಸ ಮಾಡಿದ್ದಾರೆ.ತ್ರಿವಿಕ್ರಮ ಚಿತ್ರಕ್ಕೆ ಒಂದಾದ್ರೆ, ಅದು 6ನೇ ಸಿನಿಮಾ.ಅಂದಹಾಗೆ ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ವಿಲನ್ ಆಗಿ ಕಾಣಿಸಿಕೊಳ್ತಾರೆ ಅನ್ನೋ ಮಾತು ಇದೆ.ಒಟ್ಟಾರೆ ತ್ರಿವಿಕ್ರಮ ಸ್ಯಾಂಡಲ್​ವುಡ್​ನಲ್ಲಿ ಭಾರಿ ಕುತೂಹಲ ಕೆರಳಿಸಿರೋದು ಸುಳ್ಳಲ್ಲ.

Next Story

RELATED STORIES