ಶಿರೂರು ಶ್ರೀಗಳ ಸಾವಿನ ಬಗ್ಗೆ ಮೊದಲೇ ಸೂಚಿಸಿತ್ತಾ ಧರ್ಮದೈವ..?

X
TV5 Kannada20 July 2018 4:23 AM GMT
ಉಡುಪಿ: ಆಹಾರ ಸೇವಿಸಿ, ಅಸ್ವಸ್ಥರಾಗಿ ಸಾವನ್ನಪ್ಪಿದ ಶೀರೂರು ಲಕ್ಷ್ಮಿವರ ಶ್ರೀಗಳ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ. ಎರಡು ತಿಂಗಳ ಹಿಂದೆ ನಡೆದಿದ್ದ ದೈವಾರಾಧನೆಯಲ್ಲಿ, ಶೀರೂರು ಶ್ರೀಗಳಿಗೆ ಕಂಠಕವಿದೆ ಎಂದು ಧರ್ಮದೈವಿ ನುಡಿದಿತ್ತು.
ಪಡುಬಿದ್ರೆ ಬಾಲು ಪೂಜಾರಿ ಮನೆತನದಲ್ಲಿ ನಡೆದ ಧರ್ಮನೇಮದ ಸಂದರ್ಭ ಶೀರೂರು ಶ್ರೀಗಳ ಅಸಹಜ ಸಾವಿನ ಬಗ್ಗೆ ಧರ್ಮದೈವ ಕೊಡಮಣಿತ್ತಾಯ ದೈವ ನುಡಿದಿತ್ತು ಎನ್ನಲಾಗಿದೆ. ಧರ್ಮನೇಮದ ಸಮಯದಲ್ಲಿ ಶೀರೂರು ಶ್ರೀಗಳ ಮುಂದೆಯೇ ದೈವ ಶೀರೂರು ಶ್ರೀಗಳಿಗೆ ಅಪಾಯ ಇದೆ ಎಂದಿತ್ತು. ಆದರೆ ಈ ಬಗ್ಗೆ ಶ್ರೀಗಳು ಗಮನ ಹರಿಸಿರಲಿಲ್ಲ.ಆದರೆ ಕೊನೆಗೂ ದೈವ ನುಡಿದಂತೆ ಶ್ರೀಗಳು ಅಸಹಜ ಸಾವನ್ನಪ್ಪಿದ್ದಾರೆ.
Next Story