Top

ಮೋದಿಗೆ ಸದನದಲ್ಲಿ ಜಾದೂ ಕಿ ಜಪ್ಪಿ ನೀಡಿದ ರಾಹುಲ್​!

ಮೋದಿಗೆ ಸದನದಲ್ಲಿ ಜಾದೂ ಕಿ ಜಪ್ಪಿ ನೀಡಿದ ರಾಹುಲ್​!
X

ಪಪ್ಪು ಅಂತ ಕರೆದರೂ ಪರ್ವಾಗಿಲ್ವ, ನಾನು ನಿಮ್ಮನ್ನು ದ್ವೇಷಿಸಲಾರೆ ಎಂದು ಹೇಳುತ್ತಿದ್ದಂತೆ ಅವಿಶ್ವಾಸ ಗೊತ್ತುವಳಿ ಕುರಿತು ಸದನದಲ್ಲಿ ಬಿರುಸಿನ ಚರ್ಚೆಯ ಮಧ್ಯೆ ಕೆಪಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಬಳಿಗೆ ತೆರಳಿ ಅಪ್ಪಿಕೊಂಡರು.

ರಾಹುಲ್ ಗಾಂಧಿ ಅವರ ಈ ಅಚ್ಚರಿಯ ನಡೆಗೆ ಇಡೀ ಸದನವೇ ಬೆರಗಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಇದೇ ಪ್ರಮುಖ ಚರ್ಚೆಯಾಗಿ ಟ್ರೋಲ್ ಆಯಿತು.

ನೀವು ನಿಮ್ಮನ್ನು ಕಾವಲುಗಾರ ಅಂತ ಕರೆದುಕೊಳ್ಳಬಹುದು. ಆದರೆ ನೀವು ಪಲಾಯನವಾದಿ (ಚೌಕಿದಾರ್ ಅಲ್ಲ ಬಾಗೀದಾರ್​). ದೇಶದಲ್ಲಿ ದಲಿತರ ಮೇಲೆ ಹಲ್ಲೆ ನಡೆಯುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ದೇಶದ ಪ್ರಮುಖ ಸಮಸ್ಯೆಗಳ ಬಗ್ಗೆ ಉತ್ತರಿಸದೇ ದೇಶದ ಚೌಕಿದಾರ್ ಬಾಗಿದಾರ್ ಆಗಿದ್ದಾರೆ ಎಂದು ಇದಕ್ಕೂ ಮುನ್ನ ಕಟುವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಅವಿಶ್ವಾಸ ಗೊತ್ತುವಳಿ ಬಿರುಸಿನ ಚರ್ಚೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ, ರಾಫೆಲ್ ನಡಾಲ್ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಆರೋಪಿಸಿದರು. ತಮ್ಮ ಭಾಷಣದ ಕೊನೆಯಲ್ಲಿ ಸದನದ ಎದುರುಗಡೆ ಕುಳಿತಿದ್ದ ಮೋದಿ ಬಳಿಗೆ ತೆರಳಿ ಅವರನ್ನು ತಬ್ಬಿಕೊಂಡರು.

ವಿಚಿತ್ರ ವರ್ತನೆಗಳಿಂದ ಟ್ರೋಲ್ ಆಗುವ ರಾಹುಲ್ ಗಾಂಧಿ ಈ ಬಾರಿ ಸದನದಲ್ಲಿ ಮೋದಿ ಅವರನ್ನು ತಬ್ಬಿ ಅಭಿನಂದಿಸಿದರು. ಇದೇ ಮೊದಲ ಬಾರಿ ಪ್ರತಿಪಕ್ಷ ನಾಯಕರೊಬ್ಬರು ಪ್ರಧಾನಿ ಆಸನದ ಬಳಿ ತೆರಳಿ ತಬ್ಬಿಕೊಂಡ ಘಟನೆಗೆ ಲೋಕಸಭೆ ಸಾಕ್ಷಿಯಾಯಿತು.

ಈ ಘಟನೆಯಿಂದ ಸ್ವತಃ ಆಡಳಿತಾರೂಢ ಹಾಗೂ ಪ್ರತಿಪಕ್ಷಗಳು ಅಚ್ಚರಿಗೊಂಡವು. ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್​, ಜೋರಾಗಿಯೇ ನಕ್ಕುಬಿಟ್ಟರು. ಅಲ್ಲದೇ ಸದನಕ್ಕೆ ತನ್ನದೇ ಆದ ನಿಯಮಗಳಿವೆ. ಅದನ್ನು ಪಾಲಿಸಿ ಎಂದು ಹೇಳಿ ಸುಮ್ಮನಾದರು.

Next Story

RELATED STORIES