Top

ಶಿರೂರು ಶ್ರೀಗಳಿಗೆ ಹೆಣ್ಣಿನ ಸಂಪರ್ಕವಿತ್ತು: ಪೇಜಾವರ ಶ್ರೀ

ಶಿರೂರು ಶ್ರೀಗಳಿಗೆ ಹೆಣ್ಣಿನ ಸಂಪರ್ಕವಿತ್ತು: ಪೇಜಾವರ ಶ್ರೀ
X

ಉಡುಪಿ: ಶಿರೂರು ಶ್ರೀಗಳ ಸಾವಿನ ಕುರಿತಂತೆ ಇಂದು ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೇಜಾವರ ಶ್ರೀಗಳು, ನಾನು ಹಲವು ದಿನಗಳಿಂದ ಇಲ್ಲಿ ಇರಲಿಲ್ಲ. ಅದು ವಿಷಪ್ರಾಶನವೋ ಅಥವಾ ಇನ್ಯಾರೋ ವಿಷ ಪ್ರಾಶನ ಮಾಡಿಸಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ಪೇಜಾವರ ಶ್ರೀಗಳು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದು, ಅವರ ಸಾವಿನ ಬಗ್ಗೆ ಹಲವು ಉಹಾಪೋಹಗಳಿವೆ. ಅವರಿಗೆ ಹೆಂಗಸಿನ ಸಹವಾಸವಿತ್ತು. ಇತ್ತೀಚೆಗೆ ಹೊಸ ಮಹಿಳೆ ಬಂದಿರುವ ಬಗ್ಗೆ ಸುದ್ದಿ ಇದೆ. ಅಥವಾ ಅವರು ಪಾನ ಮಾಡುತ್ತಿದ್ದರು. ಅದೇ ಅವರ ಪ್ರಾಣಕ್ಕೆ ಕಂಟಕವಾಗಿರಬಹುದು ಎಂದು ಹೇಳಿದ್ದಾರೆ.

ಇನ್ನು ಶಿರೂರು ಶ್ರೀಗಳು ಬದುಕಿರುವಾಗಲೇ ಅವರು ಅಷ್ಟಮಠಾಧೀಶರಲ್ಲ ಎಂದು ಹೇಳಿದ್ದೆ.ಅವರು ನನ್ನ ಮೇಲೂ ಆರೋಪ ಮಾಡಿದ್ದರು. ತಾರುಣ್ಯದಲ್ಲಿ ನನಗೆ ಮಹಿಳೆಯ ಸಂಪರ್ಕ ಇತ್ತು ಎಂದಿದ್ದರು.ಮಕ್ಕಳಿದ್ದಾರೆ ಎಂದಿದ್ದರು.10 ಸಾವಿರ ಕರಪತ್ರ ಮಾಡೋದಾಗಿ ಅನಾಮಿಕರೊಬ್ಬರು ಹೇಳಿದ್ರು. ಆದ್ರೆ ಆರೋಪ ಮಾಡಿದ್ದೆಲ್ಲಾ ಸತ್ಯ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

ಇನ್ನು ವಿಷಪ್ರಾಷನ ಮಾಡಿಸಿರುವ ಬಗ್ಗೆ ಮಾತನಾಡಿರುವ ಶ್ರೀಗಳು, ಆದ್ರೆ ಆರೋಪ ಮಾಡಿದ್ದೆಲ್ಲಾ ಸತ್ಯ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈಗಿನ ಉಳಿದ ಮಠಾಧಿಪತಿಗಳು ಸನ್ಯಾಸ ಪಾಲನೆ‌ ಮಾಡುತ್ತಿದ್ದಾರೆ. ಅಷ್ಠ ಮಠಾಧಿಪತಿಗಳು ವಿಷ ಪ್ರಾಶನ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ. ನನಗೆ ಮಠಾಧಿಪತಿ ಬಗ್ಗೆ ವಿಶ್ವಾಸವಿದೆ, ಯಾವುದೇ ತನಿಖೆ ಗೆ ಸಿದ್ಧ. ಇಲ್ಲಿಗೆ ಯಾವುದೇ ಅಧಿಕಾರಿಗಳು ಬಂದು ತನಿಖೆ ಮಾಡಲಿ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

Next Story

RELATED STORIES