Top

ವಿಶ್ವದಾಖಲೆ ಜೊತೆಯಾಟ ಬರೆದ ಪಾಕಿಸ್ತಾನದ ಆರಂಭಿಕರು!

ವಿಶ್ವದಾಖಲೆ ಜೊತೆಯಾಟ ಬರೆದ ಪಾಕಿಸ್ತಾನದ ಆರಂಭಿಕರು!
X

ಪಾಕಿಸ್ತಾನದ ಆರಂಭಿಕರಾದ ಫಕರ್ ಜಮಾನ್ ಮತ್ತು ಇಮಾಮ್ ಉಲ್​-ಹಕ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿಯೇ ಆರಂಭಿಕ ವಿಕೆಟ್​ಗೆ ಅತೀ ದೊಡ್ಡ ಮೊತ್ತದ ಜೊತೆಯಾಟ ನಿಭಾಯಿಸಿದ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಬುಧವಾರ ಬುಲವಾಯೊದಲ್ಲಿ ನಡೆದ 4ನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಫಕರ್​ ಜಮನ್​​ ಮತ್ತು ಇಮಾಮ್ ಉಲ್ ಹಕ್ ಮೊದಲ ವಿಕೆಟ್​ಗೆ 304 ರನ್ ಗಳ ಜೊತೆಯಾಟ ನಿಭಾಯಿಸಿದರು.

ಈ ಹಿಂದೆ ಶ್ರೀಲಂಕಾದ ಉಪುಲ್ ತರಂಗ ಮತ್ತು ಸನತ್ ಜಯಸೂರ್ಯ ಮೊದಲ ವಿಕೆಟ್​ಗೆ ಕಲೆ ಹಾಕಿದ್ದ 286 ರನ್ ಗಳ ದಾಖಲೆಯನ್ನು ಪಾಕ್ ಜೋಡಿ ಹಿಂದಿಕ್ಕಿತು. ಈ ಜೋಡಿ 42 ಓವರ್​ಗಳ ಕಾಲ ಕ್ರೀಸ್​ನಲ್ಲಿದ್ದು, ಇಮಾಮ್ ಉಲ್ ಹಕ್ 113 ರನ್ ಬಾರಿಸಿ ಔಟಾಗುವ ಮೂಲಕ ಈ ಜೊತೆಯಾಟಕ್ಕೆ ತೆರೆ ಎಳೆದರು.

ಮತ್ತೊಂದೆಡೆ ಜಿಂಬಾಬ್ವೆ ಬೌಲರ್​​ಗಳನ್ನು ದಂಡಿಸಿದ ಫಕರ್ ಜಮಾನ್, ದ್ವಿಶತಕ ಸಿಡಿಸಿದರು. ಈ ಮೂಲಕ ಈ ಸಾಧನೆ ಮಾಡಿದ 6ನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. 221 ನಿಮಿಷ ಬ್ಯಾಟ್​ ಮಾಡಿದ ಫಖಾರ್​​ 156 ಎಸೆತಗಳಲ್ಲಿ 24 ಬೌಂಡರಿ, 5 ಸಿಕ್ಸರ್​ ಸೇರಿದಂತೆ 210 ರನ್ ಬಾರಿಸಿದರು.

ಏಕದಿನ ಕ್ರಿಕೆಟ್​​ನಲ್ಲಿ ಮೊದಲ ಬಾರಿಗೆ ದ್ವಿಶತಕ ಬಾರಿಸಿ ಕೀರ್ತಿ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಹೆಸರಲ್ಲಿದೆ. ಸಚಿನ್​​ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ್ದರು. ತದ ನಂತರ ಭಾರತದವರೇ ಆದ ವಿರೇಂದ್ರ ಸೆಹ್ವಾಗ್​​, ರೋಹಿತ್​​ ಶರ್ಮಾ ಈ ಮೈಲುಗಲ್ಲು ಮುಟ್ಟಿದ್ದಾರೆ. ವೆಸ್ಟ್​ ಇಂಡೀಸ್​​ನ ದೈತ್ಯ ಆಟಗಾರ ಕ್ರೀಸ್​ ಗೇಲ್​, ನ್ಯೂಜಿಲೆಂಡ್​ನ ಮಾರ್ಟಿನ್​ ಗುಪ್ಟಿಲ್​ ಸಹ ಸ್ಥಾನ ಪಡೆದಿದ್ದಾರೆ. ಹಿಟ್​ ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ ಈ ಸಾಧನೆಯನ್ನು ಮೂರು ಬಾರಿ ಮಾಡಿರೋದು ವಿಶೇಷ.

Next Story

RELATED STORIES