Top

ಶಿರೂರು ಶ್ರೀಗಳ ಸಾವಿನ ಹಿಂದೆ ಭೂ ಮಾಫಿಯಾ..?

ಶಿರೂರು ಶ್ರೀಗಳ ಸಾವಿನ ಹಿಂದೆ ಭೂ ಮಾಫಿಯಾ..?
X

ಉಡುಪಿ: ಶಿರೂರು ಶ್ರೀ ಸಾವಿನ ಕುರಿತಂತೆ ಅವರ ಆಪ್ತನೊಬ್ಬ ರಹಸ್ಯ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಸೋದೆ ಮಠಕ್ಕೆ ಸಂಬಂಧಪಟ್ಟ ಭೂ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ, ಶ್ರೀಗಳ ಅಸಹಜ ಸಾವಾಗಿದೆ ಎಂದಿದ್ದಾರೆ.

ಶಿರೂರು ಮಠಕ್ಕೆ 500ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇತ್ತು. ಸೋದೆ ಮಠ ಶಿರೂರು ಮಠದ ದ್ವಂದ್ವ ಮಠ. ಇನ್ನು ಈ ಲ್ಯಾಂಡ್ ಮಾಫಿಯಾ ಸೋದೆ ಮಠಕ್ಕೆ ಸಂಬಂಧಪಟ್ಟಿದ್ದು, ಸ್ವಾಮೀಜಿ ನಿಧನದ ಬಳಿಕ ಸೋದೆ ಮಠ ಆಸ್ತಿ ತನ್ನತ್ತ ಪಡೆಯುವ ಹುನ್ನಾರ ನಡೆದಿತ್ತು ಎಂದಿದ್ದಾರೆ.

ಅಲ್ಲದೇ ಮಠದ ದೇವರ ಮೇಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣದ ಬಗ್ಗೆಯೂ ಲೆಕ್ಕ ವಿವರಿಸಲಾಗಿಲ್ಲ .ಈ ಹಿನ್ನೆಲೆಯಲ್ಲಿ ಮಠದ ಆಸ್ತಿ ಅರ್ಹರಿಗೇ ಸಲ್ಲಬೇಕಿದೆ. ಹೊರಗಿನ ಅರ್ಚಕರನ್ನು ನೇಮಿಸುವುದಕ್ಕೆ ತಡೆ ನೀಡಬೇಕಿದೆ. ಇದನ್ನು ಬೇರೆಯವರು ವಶಪಡಿಸಿಕೊಳ್ಳುವ ಪ್ರಯತ್ನವನ್ನು ಸರಕಾರ ತಡೆಯಬೇಕಿದೆ ಎಂದು ಸಾವಿನ ನಿಷ್ಪಕ್ಷಪಾತ ತನಿಖೆಗೆ ಆಪ್ತರು ಆಗ್ರಹಿಸಿದ್ದಾರೆ.

Next Story

RELATED STORIES