Top

ಆಶಾಢ ಮಾಸದ ಮೊದಲ ಶುಕ್ರವಾರ, ನಾಡ ಅಧಿದೇವತೆಗೆ ವಿಶೇಷ ಪೂಜೆ

ಆಶಾಢ ಮಾಸದ ಮೊದಲ ಶುಕ್ರವಾರ, ನಾಡ ಅಧಿದೇವತೆಗೆ ವಿಶೇಷ ಪೂಜೆ
X

ಮೈಸೂರು: ಇಂದು ಆಶಾಢ ಶುಕ್ರವಾರದ ಮೊದಲ ದಿನವಾಗಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ತಾಯಿ ಚಾಮುಂಡಿಗೆ ಲಕ್ಷ್ಮಿಯ ಅಲಂಕಾರ ಮಾಡಲಾಗಿದ್ದು, ಬೆಳಗ್ಗಿನಿಂದಲೇ ಭಕ್ತರ ದಂಡು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದು, ಮಂಜು, ಚಳಿಯ ನಡುವೆಯೂ ಸಂಭ್ರಮದಿಂದ ದೇವಿ ದರ್ಶನ ಪಡೆಯುತ್ತಿದ್ದಾರೆ.ಇನ್ನು ಜಿಲ್ಲಾಡಳಿತ ಧರ್ಮದರ್ಶನಕ್ಕಾಗಿ 50 ರೂ., 300ರೂ. ಟಿಕೆಟ್ ಸೇರಿದಂತೆ ಮೂರು ಸರತಿ ಸಾಲಿನ ವ್ಯವಸ್ಥೆ ಮಾಡಿದ್ದಾರೆ.

ಇನ್ನು ದೇವಸ್ಥಾನವನ್ನು ಬಣ್ಣಬಣ್ಣದ ಹೂಗಳಿಂದ ಅಲಂಕರಿಸಲಾಗಿದ್ದು, ನಾಡಅಧಿದೇವತೆ ಲಕ್ಷ್ಮೀಯ ಅವತಾರದಲ್ಲಿ ಕಂಗೊಳಿಸುತ್ತಿದ್ದಾಳೆ. ಇನ್ನು ಇಂದು ಸಿಎಂ ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಚಾಮುಂಡಿದೇವಿಯ ದರ್ಶನ ಪಡೆಯಲಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಭದ್ರತೆಗಾಗಿ ಅಶ್ವಾರೋಹಿ ದಳ ನಿಯೋಜನೆ ಮಾಡಲಾಗಿದೆ.

ಇನ್ನು ಸಚಿವ ಜಿ.ಟಿ.ದೇವೇಗೌಡರು, ಆಷಾಢ ಮಾಸದ ಪ್ರಸಾದ ಹಂಚಿದರು.ಕುಟುಂಬ ಸಮೇತರಾಗಿ ಮೈಸೂರಿನ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ದೇಗುಲಕ್ಕೆ ಬಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಜಿಟಿಡಿ, ಸರತಿ ಸಾಲಿನಲ್ಲಿ ಬಂದವರಿಗೆ ಪ್ರಸಾದ ನೀಡಿದರು.

Next Story

RELATED STORIES