ಉಡುಪಿಯ ಶಿರೂರು ಸ್ವಾಮೀಜಿ ವಿಧಿವಶ

ಉಡುಪಿ : ಶಿರೂರು ಮಠದ ಲಕ್ಷ್ಮೀವರ ಶ್ರೀಗಳು ವಿಧಿವಶರಾಗಿದ್ದಾರೆ. ಕಳೆದ ರಾತ್ರಿ ಊಟ ಮಾಡಿದ್ದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಪುಡ್ ಪಾಯಿಸನ್ ಆಗಿ, ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗಾಗಿ ದಾಖಲಾದ ಶ್ರೀಗಳು, ಚಿಕಿತ್ಸೆ ಫಲಿಸದೇ ಇಂದು ವಿಧಿವಶರಾಗಿದ್ದಾರೆ.
ಉಡುಪಿಯ ಶಿರೂರು ಮಠದ ಲಕ್ಷ್ಮೀವರ ಶ್ರೀಗಳು, ಕಳೆದ ರಾತ್ರಿ ಆಹಾರ ಸೇವಿಸುತ್ತಿದ್ದಂತೆ ಅಸ್ವಸ್ಥರಾದರು. ಇವರನ್ನು ಉಡುಪಿಯ ಮಣಿಪಾಲದಲ್ಲಿರುವ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ತೀವ್ರ ಉಸಿರಾಟದ ತೊಂದೆರೆಗೂ ಒಳಗಾಗಿದ್ದ ಶ್ರೀಗಳನ್ನು, ತೀವ್ರ ನಿಗಾಘಟಕದಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಕೃತಕ ಉಸಿರಾಟ ವ್ಯವಸ್ಥೆಯ ಕೂಡ ಮಾಡಲಾಗಿತ್ತು. ಆದರೇ, ಇಂದು ಚಿಕಿತ್ಸೆ ಫಲಿಸದೇ ಶಿರೂರು ಮಠದ ಶ್ರೀಗಳು ವಿಧಿವಶರಾಗಿದ್ದಾರೆ.
ಅಂದಹಾಗೇ 8ನೇ ವಯಸ್ಸಿಗೆ ಸನ್ಯಾಸ ಧೀಕ್ಷೆ ಸ್ವೀಕರಿಸಿದ್ದ ಲಕ್ಷ್ಮೀವರ ತೀರ್ಥ ಶ್ರೀಗಳ ಮೂಲ ನಾಮ, ಹರೀಶ್ ಆಚಾರ್ಯ. 30ನೇ ವಯಸ್ಸಿನಲ್ಲಿ ಯತಿಗಳಾದ ಸ್ವಾಮೀಜಿ, ಪಟ್ಟದ ದೇವರ ಮರಳಿಸಲು ಇತರ ಮಠಾಧೀಶರು ನಿರಾಕರಿಸಿದ ಹಿನ್ನೆಲೆ ತೀವ್ರ ನೊಂದಿದ್ದರು. ಇತರ ಮಠಾಧೀಶರನ್ನು ಎದುರು ಹಾಕಿಕೊಂಡು ತನ್ನ ನೇರ ನುಡಿ ಮೂಲಕ ನಿಷ್ಠುರರಾಗಿದ್ದ ಸ್ವಾಮೀಜಿ, ಇತ್ತೀಚಿಗೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇಂತಹ ಸ್ವಾಮೀಜಿ ಇಂದು ಚಿಕಿತ್ಸೆ ಫಲಿಸದೇ ಇಂದು ವಿಧಿವಶರಾಗಿದ್ದಾರೆ.