Top

ಕೆಆರ್​ಎಸ್​ಗೆ ಸಿಎಂ ನಾಳೆ ಬಾಗಿನ: ಮೈಸೂರು ರಾಜಮನೆತನಕ್ಕೆ ಇಲ್ಲ ಆಹ್ವಾನ?

ಕೆಆರ್​ಎಸ್​ಗೆ ಸಿಎಂ ನಾಳೆ ಬಾಗಿನ: ಮೈಸೂರು ರಾಜಮನೆತನಕ್ಕೆ ಇಲ್ಲ ಆಹ್ವಾನ?
X

ಸತತ ಮಳೆಯಿಂದಾಗಿ ಮಂಡ್ಯದ ಕೆಆರ್​ಎಸ್​ ಜಲಾಶಯ ಜುಲೈ ತಿಂಗಳಲ್ಲೇ ಭರ್ತಿಯಾಗಿದ್ದು, ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಶುಕ್ರವಾರ ಬಾಗಿನ ಅರ್ಪಿಸಲಿದ್ದಾರೆ. ಆದರೆ ಜಿಲ್ಲಾಡಳಿತ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಮೈಸೂರು ರಾಜ ವಂಶಸ್ಥರನ್ನು ಕರೆಯದೇ ನಿರ್ಲಕ್ಷ್ಯ ವಹಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಗುರುವಾರ ಕೊಡಗು ಪ್ರವಾಸ ಹಮ್ಮಿಕೊಂಡಿರುವ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಶುಕ್ರವಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರ ಅಣೆಕಟ್ಟೆ ಭೇಟಿ ನೀಡಲಿದ್ದು, ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೆಆರ್​ಎಸ್​ಗೆ ಕುಟುಂಬ ಸಮೇತರಾಗಿ ಬಾಗಿನ ಅರ್ಪಿಸಲಿದ್ದಾರೆ.

ಆಗಿನ ಕಾಲದಲ್ಲಿಯೇ ಪತ್ನಿಯ 3 ಕೋಟಿ ಮೌಲ್ಯದ ಒಡವೆಗಳನ್ನು ಮಾರಿ ಕೆಆರ್​ಎಸ್ ಜಲಾಶಯ ನಿರ್ಮಿಸಿದ ಮೈಸೂರು ರಾಜವಂಶಸ್ಥರನ್ನು ರಾಜ್ಯದ ಜನತೆ ಮರೆಯಲು ಸಾಧ್ಯವೇ ಇಲ್ಲ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಶ್ರಮದಿಂದ ನಿರ್ಮಾಣ ವಾದ ಕೆ.ಆರ್.ಎಸ್. ಅಣೆಕಟ್ಟೆ ನಿರ್ಮಾಣವಾಯಿತು.

ಆದರೆ ಶುಕ್ರವಾರ ನಡೆಯುವ ಕಾರ್ಯಕ್ರಮಕ್ಕೆ ಒಡೆಯರ್ ಕುಟುಂಬವನ್ನೇ ಮಂಡ್ಯ ಜಿಲ್ಲಾಡಳಿತ ಮರೆತಿದೆ. ಆಹ್ವಾನ ಪತ್ರಿಕೆಯಲ್ಲಿ ರಾಜವಂಶಸ್ಥರಾದ ಯದುವೀರ್, ಪ್ರಮೋದಾ ದೇವಿ ಒಡೆಯರ್ ಹೆಸರು ನಾಪತ್ತೆಯಾಗಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Next Story

RELATED STORIES