Top

ಶಿರೂರು ಶ್ರೀಗಳ ಸಾವಿಗೆ ಟ್ವಿಸ್ಟ್: ಸಹಜ ಸಾವಲ್ಲ, ಕೊಲೆ..?

ಶಿರೂರು ಶ್ರೀಗಳ ಸಾವಿಗೆ ಟ್ವಿಸ್ಟ್: ಸಹಜ ಸಾವಲ್ಲ, ಕೊಲೆ..?
X

ಉಡುಪಿ: ನಿನ್ನೆ ರಾತ್ರಿ ಆಹಾರ ಸೇವಿಸಿದ್ದರ ಪರಿಣಾಮ ಫುಡ್ ಪಾಯ್ಸನ್ ಆಗಿ, ಆಸ್ಪತ್ರೆಗೆ ದಾಖಲಾಗಿದ್ದ ಶಿರೂರು ಶ್ರೀಗಳು ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ. ಆದ್ರೆ ಇದು ಸಹಜ ಸಾವಲ್ಲ, ಕೊಲೆ ಎನ್ನುವ ಶಂಕೆ ಉಂಟಾಗಿದೆ.ಶ್ರೀಗಳಿಗೆ ವಿಷಪ್ರಾಶನ ಮಾಡಿಸಲಾಗಿತ್ತೇ ಎಂಬ ಅನುಮಾನ ಉಂಟಾಗಿದೆ.

ಶಿರೂರು ಶ್ವಾಮೀಜಿಗಳ ಪಟ್ಟದ ದೇವರು ವಿವಾದದ ವಿಚಾರ ಕುರಿತಂತೆ, ಸ್ವಾಮೀಜಿ ಪರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಹೇಳಿಕೆ ನೀಡಿದ್ದು, ಶ್ರೀಗಳಿಗೆ ಜೀವಭಯ ಇತ್ತೆನ್ನಲಾಗಿದೆ. ಪಟ್ಟದ ದೇವರ ವಿಚಾರದ ವೈಮನಸ್ಸು ಸಂದರ್ಭದಲ್ಲಿ ನನ್ನ ಜೀವಕ್ಕೆ ಅಪಾಯ ಇದೆ ಅಂತಾ ಸ್ವಾಮೀಜಿ ಹೇಳಿಕೊಂಡಿದ್ದರು. ಪುತ್ತಿಗೆ ಸ್ವಾಮೀಜಿಯನ್ನು ಹೊರತುಪಡಿಸಿ ಉಳಿದ 6 ಸ್ವಾಮೀಜಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಿಳಿಸಿದ್ದರು. ಆಗ ನಾನು ಕ್ರಿಮಿನಲ್ ಪ್ರಕರಣ ದಾಖಲಿಸಲು ರೆಡಿಮಾಡಿಕೊಂಡಿದ್ದೆ ಎಂದಿದ್ದಾರೆ.

ಅಲ್ಲದೇ ಶಿರೂರು ಶ್ರೀಗಳಿಗಿರುವ ಅಪಾಯದ ಮುನ್ಸೂಚನೆ ಕುರಿತು ಎರಡು ಗಂಟೆಗಳ ಕಾಲ ತನ್ನೊಂದಿಗೆ ಚರ್ಚೆ ನಡೆಸಿದ್ದರೆಂದು, ರವಿಕಿರಣ್ ಮುರ್ಡೇಶ್ವರ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಶಿರೂರು ಶ್ರೀಗಳ ಸಾವಿನ ಬಗ್ಗೆ ತನಿಖೆಯಾಗಬೇಕು. ಶವ ಪರೀಕ್ಷೆ ನಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು ಶ್ರೀಗಳ ದೇಹದಲ್ಲಿ ವಿಷ ಪತ್ತೆಯಾದ ಹಿನ್ನೆಲೆ, ಪ್ರಕರಣದ ಉನ್ನತ ತನಿಖೆಗೆ ಸೂಚಿಸಲಾಗುತ್ತದೆ ಎಂದು ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

https://www.youtube.com/watch?v=U2uudKwANDQ&feature=youtu.be

Next Story

RELATED STORIES