Top

ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಅದಕ್ಕೆ ಅವರ ಅಂತ್ಯಕ್ರಿಯೆಗೆ ಹೋಗಲ್ಲ

ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಅದಕ್ಕೆ ಅವರ ಅಂತ್ಯಕ್ರಿಯೆಗೆ ಹೋಗಲ್ಲ
X

ಶಿರಸಿ: ಪಟ್ಟದ ದೇವರನ್ನು ಶಿರೂರು ಶ್ರೀಗಳಿಗೆ ಕೊಡದೆ ಇರಲು ಕಾರಣವಿದೆ. ನನಗೆ ಮಕ್ಕಳಿದ್ದಾರೆ ಎಂದು ಅವರೇ ಒಪ್ಪಿಕೊಂಡಿದ್ದರಿಂದ ಪಟ್ಟದ ದೇವರನ್ನು ಕೊಡಲಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಶೀರೂರು ಶ್ರೀಗಳ ಸಾವಿಗೆ ಸಂಬಂಧಪಟ್ಟಂತೆ, ಶಿರಸಿಯಲ್ಲಿ ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದು, ಅವರು ಮಠಾಧೀಶರಲ್ಲ, ಅವರು ಸನ್ಯಾಸತ್ವವನ್ನು ಬಿಟ್ಟಿದ್ದಾರೆ. ಅವರೇ ಒಪ್ಪಿಕೊಂಡಿದ್ದಾರೆ ಆದ್ದರಿಂದ ಅವರ ಅಂತ್ಯಕ್ರಿಯೆಗೆ ನಾವು ಹೋಗಿಲ್ಲವೆಂದು ಹೇಳಿದ್ದಾರೆ. ಅಲ್ಲದೇ ಸ್ವಾಮಿಗಳಾದ ಮೇಲೆ ಧರ್ಮ ಬೇಕು ಅದನ್ನು ಅವರು ಒಪ್ಪಿಕೊಂಡಿದ್ದಾರೆ. ಮಠಾಧೀಶರಿಗೆ ದ್ವೇಷವಿಲ್ಲ. ಅವರು ಪೀಠಾಧಿಪತಿ ಅಲ್ಲ ಎಂದು ಎಲ್ಲರೂ ತೀರ್ಮಾನ ಮಾಡಿ ಒಪ್ಪಿಕೊಂಡಿದ್ದೇವೆ . ಅವರು ಸನ್ಯಾಸ ಜೀವನದಿಂದ ಬ್ರಷ್ಟರಾಗಿದ್ದಾರೆ ಅವರಿಗೆ ಮಗನಿದ್ದಾನೆ,ತನ್ನ ಮಗನೆಂದು ಎಲ್ಲರಿಗೂ ತೋರಿಸಿದ್ದಾರೆ ಅಂತವರು ಸ್ವಾಮಿಗಳಾಗಲು ಸಾಧ್ಯವಿಲ್ಲ ಹಾಗಾಗಿ ಶಿರೂರು ಶ್ರೀಗಳ ಅಂತ್ಯಕ್ರಿಯೆಗೆ ಹೋಗಿಲ್ಲ ಎಂದು ಹೇಳಿದ್ದಾರೆ.

ಇನ್ನು ನಿನ್ನೆ ಶಿರೂರು ಶ್ರೀಗಳ ಸಹೋದರ ಪೇಜಾವರ ಶ್ರೀಗಳೊಂದಿಗೆ ಮಾತನಾಡಿದ್ದು, ಶಿರೂರು ಶ್ರೀಗಳು ಪಲಾವನ್ನು ತೆಗೆದುಕೊಂಡಿದ್ದರು ಒಂದು ಕೆಟ್ಟ ಕಿಲುಬು ಪಾತ್ರೆ ಯಲ್ಲಿ ಕಲಯಿ ಆಗದಿರುವುದರಲ್ಲಿ ತೆಗೆದುಕೊಂಡಿದ್ದಾರೆ,ಇದರಿಂದಲೇ ಸಾವಾಗಿದೆ ಎಂದು ಹೇಳಿದ್ದರು. ಆದ್ರೆ ನಿನ್ನೆ ಬರದ ಅನುಮಾನ ಇಂದು ಬಂದಿದೆ. ಅದು ಹೇಗೆ ಬಂತು? ಮರಣೋತ್ತರ ಪರೀಕ್ಷೆ ಆಗಿಬರಲಿ, ಆಗ ಎಲ್ಲಾ ವಿಷಯ ತಿಳಿಯುತ್ತದೆ ಎಂದು ಹೇಳಿದ್ದಾರೆ.

Next Story

RELATED STORIES