Top

ಅವಿಶ್ವಾಸ ಗೊತ್ತುವಳಿಗೆ ಸಜ್ಜಾದ ಆಡಳಿತ ಪಕ್ಷ, ಪ್ರತಿಪಕ್ಷಗಳು: ಫಲಿತಾಂಶ ಕುತೂಹಲ

ಅವಿಶ್ವಾಸ ಗೊತ್ತುವಳಿಗೆ ಸಜ್ಜಾದ ಆಡಳಿತ ಪಕ್ಷ, ಪ್ರತಿಪಕ್ಷಗಳು: ಫಲಿತಾಂಶ ಕುತೂಹಲ
X

ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್​ಡಿಎ ಸರಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು, ಇದೇ ಅವಕಾಶವನ್ನು ಬಳಸಿಕೊಂಡು ಪ್ರತಿಪಕ್ಷಗಳನ್ನು ಮೆಟ್ಟಿನಿಲ್ಲಲು ಬಿಜೆಪಿ ತಯಾರಿ ಆರಂಭಿಸಿದ್ದರೆ, ಪ್ರತಿಪಕ್ಷಗಳು ಪ್ರತಿದಾಳಿ ನಡೆಸಲು ಕತ್ತಿ ಮಸೆಯುತ್ತಿವೆ. ಇದರಿಂದ ಶುಕ್ರವಾರ ನಡೆಯುವ ಅವಿಶ್ವಾಸ ಗೊತ್ತುವಳಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಚಳಿಗಾಲದ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಶುಕ್ರವಾರ ಸದನದ ಮುಂದೆ ಬರಲಿದ್ದು, ಪ್ರಧಾನಿ ನರೇಂದ್ರ ಮೋದಿ, ಸಚಿವರು ಹಾಗೂ ಆಯಾ ಇಲಾಖಾ ಮುಖ್ಯಸ್ಥರಿಗೆ ಸಾಧನೆಯ ಪಟ್ಟಿ ತಯಾರಿಸುವಂತೆ ಸೂಚಿಸಿದ್ದಾರೆ. ಅಧಿವೇಶನದ ಚರ್ಚೆಯ ವೇಳೆ ಈ ಅವಕಾಶ ಬಳಸಿಕೊಳ್ಳಲು ಉದ್ದೇಶಿಸಿದೆ. ಆದರೆ ಪ್ರತಿಪಕ್ಷಗಳು ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟು ಹೋರಾಟ ನಡೆಸಲು ಸಿದ್ಧತೆ ನಡೆಸಿವೆ.

2014ಲ್ಲಿ ಸರಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿ ಅವಿಶ್ವಾಸ ಗೊತ್ತುವಳಿಗೆ ಪ್ರತಿಪಕ್ಷಗಳು ಪ್ರಸ್ತಾಪ ಮಂಡಿಸಿವೆ. ಬುಧವಾರ ಸಭಾಧ್ಯಕ್ಷರ ಮುಂದೆ ಈ ಪ್ರಸ್ತಾಪ ಮುಂದಿಟ್ಟ ನಂತರ ರಾಜಕೀಯದಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗಿವೆ.

ಪ್ರತಿಪಕ್ಷಗಳ ಬಳಿ ಮ್ಯಾಜಿಕ್ ನಂಬರ್ ಇಲ್ಲ ಎಂಬ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ನಮ್ಮ ಬಳಿ ನಂಬರ್ ಇಲ್ಲ ಎಂದು ಯಾರು ಹೇಳಿದರು ಎಂದು ಮಾಧ್ಯಮಗಳಿಗೆ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಸತತ ಸೋಲುಂಡಿರುವುದರಿಂದ ಸಂಖ್ಯಾಬಲದಲ್ಲಿ ಕಡಿತವಾಗಿದೆ. ಅಲ್ಲದೇ ಬಿಜೆಪಿಯ 8 ಸಂಸದರನ್ನು ಕಾಂಗ್ರೆಸ್​ ಸೆಳೆದುಕೊಳ್ಳುವ ಪ್ರಯತ್ನ ಮಾಡಿದೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಶಿವಸೇನೆ ಮುಖಂಡ ಉದ್ಭವ್ ಠಾಕ್ರೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅವಿಶ್ವಾಸ ಮಂಡನೆ ವೇಳೆ ತಮಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ ಶಿವಸೇನೆ ಈ ಬಗ್ಗೆ ಮೌನ ವಹಿಸಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Next Story

RELATED STORIES