ಮಾನಸಿಕ ಅಸ್ವಸ್ಥೆ ಮಹಿಳೆಗೆ ಅಮಾನವೀಯ ಶಿಕ್ಷೆ.!!

X
TV5 Kannada19 July 2018 5:17 AM GMT
ಚಿತ್ರದುರ್ಗ : ಮನಸಿಕ ಅಸ್ವಸ್ಥ ಮಹಿಳೆಯ ಕಾಲಿಗೆ ಸರಪಳಿ ಮತ್ತು ಮರದ ದಿಂಬುಗಳನ್ನು ಕಟ್ಟಿ ಅಮಾವೀಯವಾಗಿ ನಡೆದುಕೊಂಡಿರುವ ಘಟನೆ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕೋನಪುರ ಗ್ರಾಮದಲ್ಲಿ ನಡೆದಿದೆ.
https://www.youtube.com/watch?v=cKWogODurh0&list=PLmylWU4EY3N_f6ewdnT8eqpGm6VQ43NJG&index=7
21 ವರ್ಷದ ಸರಸ್ವತಿ ಎಂಬ ಮಹಿಳೆ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಇಂತಹ ಮಹಿಳೆಗೆ ಚಿಕಿತ್ಸೆ ಕೊಡಿಸಿ, ರೋಗ ವಾಸಿಯಾಗಲು ನೆರವಾಗಬೇಕಾಗಿದ್ದ ಕುಟುಂಬದವರೇ, ಮನುಷ್ಯತ್ವ ಇಲ್ಲದೇ ನಡೆದುಕೊಂಡಿದ್ದಾರೆ. ಕಳೆದ ಹನ್ನೆರಡು ವರ್ಷಗಳಿಂದ ಕಾಲಿಗೆ ಸರಪಳಿ ಕಟ್ಟಿ ಓಡಾಲು ಆಗದಂತೆ ಗೃಹಬಂಧನದಲ್ಲಿ ಇರಿಸಿದ್ದಾರೆ.
10 ನೇ ವಯಸ್ಸಿನಲ್ಲಿ ಮೀತಿ ಮೀರಿದ ರಂಪಾಟ ವರ್ತನೆ ಕಂಡು ರೋಸಿ ಸರಪಳಿಯಿಂದ ಕಟ್ಟಿ ಹಾಕಲಾಗಿದೆಯಂತೆ. ಅಲ್ಲದೇ ಸರಪಳಿ ಜೊತೆ 40 ಕೆಜಿ ತೂಕದ ಮರದ ತುಂಡು ಜೋಡಿಸಿ ಕಟ್ಟಿಹಾಕಿ, ಅಮಾನವೀಯರಂತೆ ನಡೆದುಕೊಂಡಿದ್ದಾರೆ.
Next Story