Top

ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ

ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ
X

ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಬಹುನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳಿಗಾಗಿನ ಟೀಮ್ ಇಂಡಿಯಾ ತಂಡ ಪಟ್ಟಿಯನ್ನು ಬಿಬಿಸಿಐ ಘೋಷಣೆ ಮಾಡಲಾಗಿದೆ.

ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಹಾಗೂ ಏಕದಿನ ಸರಣಿಯಲ್ಲಿ ಐದು ವಿಕೆಟುಗಳ ಸಾಧನೆ ಮಾಡಿರುವ ಚೈನಾಮನ್ ಖ್ಯಾತಿಯ ಮಣಿಕಟ್ಟಿನ ಸ್ಪಿನ್ನರ್ ಕುಲ್‌ದೀಪ್ ಯಾದವ್ ಟೆಸ್ಟ್ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.

ಟೆಸ್ಟ್ ಸ್ಪೆಷಲಿಸ್ಟ್‌ಗಳಾದ ಮುರಳಿ ವಿಜಯ್, ಚೇತೇಶ್ವರ ಪೂಜಾರ, ಉಪ ನಾಯಕ ಅಜಿಂಕ್ಯ ರಹಾನೆ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ ಸಹ ತಂಡಕ್ಕೆ ಮರಳಿದ್ದಾರೆ.

https://twitter.com/BCCI/status/1019511258725343232?ref_src=twsrc^tfw|twcamp^tweetembed|twterm^1019511258725343232&ref_url=https://vijaykarnataka.indiatimes.com/sportshome/cricket/indias-squad-for-first-three-tests-against-england/articleshow/65037895.cms

ಇನ್ನುಳಿದಂತೆ ಏಕದಿನ ತಂಡದಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಜತೆಗೆ ಶಿಖರ್ ಧವನ್, ಕನ್ನಡಿಗ ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಉಮೇಶ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ಸಹ ಕಾಣಿಸಿಕೊಂಡಿದ್ದಾರೆ. ಗಾಯಾಳು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಪುನಶ್ಚೇತನದ ಹಂತದಲ್ಲಿದ್ದಾರೆ.

ಟೀಮ್ ಇಂಡಿಯಾ ತಂಡದ ಪಟ್ಟಿ ಈ ಕೆಳಗಿನಂತಿದೆ

 1. ವಿರಾಟ್ ಕೊಹ್ಲಿ (ನಾಯಕ)
 2. ಶಿಖರ್ ಧವನ್
 3. ಕೆಎಲ್ ರಾಹುಲ್
 4. ಮುರಳಿ ವಿಜಯ್
 5. ಚೇತೇಶ್ವರ ಪೂಜಾರ
 6. ಅಜಿಂಕ್ಯ ರಹಾನೆ (ಉಪ ನಾಯಕ)
 7. ಕರುಣ್ ನಾಯರ್
 8. ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
 9. ರಿಷಬ್ ಪಂತ್ (ವಿಕೆಟ್ ಕೀಪರ್)
 10. ಆರ್ ಅಶ್ವಿನ್
 11. ರವೀಂದ್ರ ಜಡೇಜಾ
 12. ಕುಲ್‌ದೀಪ್ ಯಾದವ್
 13. ಹಾರ್ದಿಕ್ ಪಾಂಡ್ಯ
 14. ಇಶಾಂತ್ ಶರ್ಮಾ
 15. ಮೊಹಮ್ಮದ್ ಶಮಿ
 16. ಉಮೇಶ್ ಯಾದವ್
 17. ಜಸ್ಪ್ರೀತ್ ಬುಮ್ರಾ
 18. ಶಾರ್ದೂಲ್ ಠಾಕೂರ್

ಅಂದಹಾಗೇ, ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 3.30ಕ್ಕೆ ಪ್ರಾರಂಭವಾಗುತ್ತವೆ. ಇಂತಹ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ.

ಮೊದಲ ಟೆಸ್ಟ್ : ಆಗಸ್ಟ್ 1ರಿಂದ 5ರ ವರೆಗೆ, ಬರ್ಮಿಂಗ್‌ಹ್ಯಾಮ್

ದ್ವಿತೀಯ ಟೆಸ್ಟ್ : ಆಗಸ್ಟ್ 9ರಿಂದ 13ರ ವರೆಗೆ, ಲಾರ್ಡ್ಸ್, ಲಂಡನ್

ತೃತೀಯ ಟೆಸ್ಟ್ : ಆಗಸ್ಟ್ 18ರಿಂದ 22ರ ವರೆಗೆ, ನಾಟಿಂಗ್‌ಹ್ಯಾಮ್

ನಾಲ್ಕನೇ ಟೆಸ್ಟ್ : ಆಗಸ್ಟ್ 30ರಿಂದ ಸೆಪ್ಟೆಂಬರ್ 3ರ ವರೆಗೆ, ಸೌಂಥಪ್ಟನ್

ಐದನೇ ಟೆಸ್ಟ್ : ಸೆ. 7ರಿಂದ 11ರ ವರೆಗೆ, ಓವಲ್, ಲಂಡನ್

Next Story

RELATED STORIES