Top

ಜಿ.ವಿ. ಅಯ್ಯರ್ ಮೊಮ್ಮಗಳ ಟ್ರಂಕ್ ಚಿತ್ರಕ್ಕೆ ಪ್ರಶಂಸೆಯ ಹೊಳೆ

ಜಿ.ವಿ. ಅಯ್ಯರ್ ಮೊಮ್ಮಗಳ ಟ್ರಂಕ್ ಚಿತ್ರಕ್ಕೆ ಪ್ರಶಂಸೆಯ ಹೊಳೆ
X

ಪ್ರಯೋಗಗಳ ಮೂಲಕ ಕನ್ನಡ ಚಿತ್ರರಂಗದ ಖ್ಯಾತಿಯನ್ನು ದೇಶದ ಮೂಲೆ ಮೂಲೆಗೆ ತಲುಪುವಂತೆ ಮಾಡಿದ ನಿರ್ದೇಶಕ, ಗೀತ ರಚನೆಕಾರ, ಬರಹಗಾರ ಜಿವಿ ಅಯ್ಯರ್ ಮೊಮ್ಮಗಳು ಅದೇ ದಾರಿಯಲ್ಲಿ ಸಾಗುವ ಸೂಚನೆ ನೀಡಿದ್ದಾರೆ.

ಹೌದು, ಕನ್ನಡದ ಭೀಷ್ಮ ಎಂದೇ ಖ್ಯಾತರಾದ ಜಿ.ವಿ. ಅಯ್ಯರ್​ರ ಮೊಮ್ಮಗಳು ಈಗ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಮೂಲಕ ಕಲೆ ಎಂಬುದು ತಮಗೆ ರಕ್ತಗತವಾಗಿಯೇ ಬಂದಿದೆ ಎಂಬುದನ್ನು ನಿರೂಪಿಸುವ ಪ್ರಯತ್ನ ಮಾಡಿದ್ದಾರೆ.

ಮದ್ದು ಮೊಗದ ಈ ಪೋರಿ ಜಿವಿ ಅಯ್ಯರ್​ರ ಮೊಮ್ಮಗಳು. ನೋಡೋಕೆ ಥೇಟ್ ನಟಿಯಂತೆ ಕಂಡರೂ ತಾತನಂತೆ ತೆರೆಹಿಂದೆ ಕೆಲಸ ಮಾಡುತ್ತಿದ್ದಾರೆ. ಜೈನ್ ಯೂನಿವರ್ಸಿಟಿಯಲ್ಲಿ ಪತ್ರಿಕೋದ್ಯಮ ಪದವಿ ಪಡೆದರೂ ಸಹ, ಚಿತ್ರರಂಗ ಕೈಬೀಸಿ ಕರೆಯುತ್ತೆ. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಒಂದಷ್ಟು ದಿನ ನಿರ್ದೇಶನವನ್ನ ಕರಗತ ಮಾಡಿಕೊಂಡ ರಿಷಿಕಾ, ಟ್ರಂಕ್ ಸಿನಿಮಾ ಮಾಡಿದ್ದಾರೆ.

ಅಂದಹಾಗೆ ಟ್ರಂಕ್ ಇತ್ತೀಚೆಗೆ ತೆರೆಕಂಡ ಫ್ರೆಶ್ ಹಾರರ್ ಸಿನಿಮಾ. ತಾತ ದೇವರು ದಿಂಡರು ಅಂತ ಸಿನಿಮಾ ಮಾಡಿದ್ರೆ, ಮೊಮ್ಮಗಳು ಅದಕ್ಕೆ ತದ್ವಿರುದ್ದವಾಗಿ ದೆವ್ವದ ಕುರಿತಾದ, ಅದರ ಅನ್ವೇಷಕರ ಕುರಿತಾದ ಹಾರರ್ ಸಿನಿಮಾ ಮಾಡಿದ್ದಾರೆ. ಟ್ರಂಕ್. ಟೈಟಲ್​ಗೆ ತಕ್ಕನಾಗಿರೋ ಈ ಸಿನಿಮಾ ಅಕ್ಷರಶಃ ನಿರೀಕ್ಷೆಗೂ ಮೀರಿದ ಓಪನಿಂಗ್ ಪಡ್ಕೊಂಡಿದೆ.

ಕಳೆದ ವಾರ ತೆರೆಕಂಡ ಟ್ರಂಕ್ ಸಿನಿಮಾ, ಉತ್ತರ ಕರ್ನಾಟಕದಲ್ಲಿ ಚಾಲ್ತಿಯಲ್ಲಿರೋ ಘೋಸ್ಟ್ ಹಂಟರ್ಸ್​ ಕುರಿತಾದ ಸಿನಿಮಾ. ವಾಸ್ತವಕ್ಕೆ ತುಂಬಾ ಹತ್ತಿರವಾದ ಅಂಶಗಳನ್ನ ಇಟ್ಟುಕೊಂಡು ಸಿನಿಮಾ ಮಾಡಿರೋ ರಿಷಿಕಾ, ಅದ್ರ ಪ್ರೆಸೆಂಟೇಷನ್ ಶೈಲಿಯಿಂದ ಎಲ್ಲರ ಮನಗೆದ್ದಿದ್ದಾರೆ. ಪಾತ್ರಗಳು, ಅವುಗಳ ನಿರೂಪಣೆ, ಲೊಕೇಷನ್ಸ್, ಕ್ಯಾಮೆರಾ ವರ್ಕ್​ ಹೀಗೆ ಎಲ್ಲವೂ ಸ್ಪೆಷಲ್ ಅನಿಸುತ್ತೆ.

ಸಣ್ಣ ವಯಸ್ಸಿನ ಹುಡುಗಿ ಆದ್ರೂ ಸಹ, ತಾನೊಬ್ಬ ಹುಡುಗಿ ಅನ್ನೋದನ್ನೇ ಮರೆತು, ಸುಮಾರು 35ರಿಂದ 40 ಮಂದಿ ತಂಡದೊಂದಿಗೆ ಈ ಸಿನಿಮಾ ಮಾಡಿರೋದು ನಿಜಕ್ಕೂ ಮೆಚ್ಚಲೇಬೇಕು. ಸದ್ಯ ಟ್ರಂಕ್ ಸಿನಿಮಾಗೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅಷ್ಟೇ ಅಲ್ಲ, ಚಿತ್ರರಂಗದ ತಾರೆಯರಿಂದಲೂ ಸಹ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES