Top

ರಾಜ್ಯದ 13 ವಿವಿಗಳ ಸಿಂಡಿಕೇಟ್‌ ಸದಸ್ಯರ ಬದಲಾವಣೆಗೆ ಶಿಕ್ಷಣ ಇಲಾಕೆ ಸುತ್ತೋಲೆ.!?

ರಾಜ್ಯದ 13 ವಿವಿಗಳ ಸಿಂಡಿಕೇಟ್‌ ಸದಸ್ಯರ ಬದಲಾವಣೆಗೆ ಶಿಕ್ಷಣ ಇಲಾಕೆ ಸುತ್ತೋಲೆ.!?
X

ಬೆಂಗಳೂರು : ವಿಧಾನಸಣೆ ಚುನಾವಣೆ ಮುಗಿದ್ರೂ ಹಳೆಯ ರಾಜಕೀಯ ದುಷ್ಮನಿಗಳ ನಡುವಿನ ಧ್ವೇಷ ನಿಂತಿಲ್ಲ. ಚುನಾವಣೆಯ ನಂತರವೂ ಅದು ಮುಂದುವರಿದಿದೇ ಇದೆ. ಈಗಲೂ ಅವರ ಮೇಲೆ ಇವ್ರು, ಇವ್ರ ಮೇಲೆ ಅವ್ರು ಪರೋಕ್ಷವಾಗಿ ಸಮಯಬಂದಾಗಲೆಲ್ಲಾ ಹಗೆಯನ್ನ ಸಾಧಿಸ್ತಿದ್ದಾರೆ. ಹಾಗಾದ್ರೆ ಅವ್ರು ಯಾರು..?ಎಲ್ಲಿಯವರು..? ಯಾಕೆ ಅವರ ನಡುವೆ ದ್ವೇಷ ಅನ್ನೋದ್ರ ಬಗ್ಗೆ ಮುಂದೆ ಓದಿ.

ಚುನಾವಣೆ ಮುಗಿದ್ರೂ ಮಾಗಿಲ್ಲ ದ್ವೇಷದ ರಾಜಕಾರಣ

ಮೈಸೂರಿನ ಪ್ರಬಲ ರಾಜಕಾರಣಿಗಳಿಬ್ಬರ ಹಗೆ ರಾಜಕಾರಣ

ಎಸ್.. ಮೈಸೂರಿನ ರಾಜಕಾರಣಿಗಳಿಬ್ಬರ ಹಗೆ ಚುನಾವಣೆ ಮುಗಿದ್ರೂ ಮುಂದುವರಿದಿದೇ ಇದೆ. ಸಮ್ಮಿಶ್ರ ಸರ್ಕಾರದಲ್ಲಿ ಇಬ್ಬರೂ ಪಾಲುದಾರರಾದ್ರೂ ಧ್ವೇಷದ ರಾಜಕಾರಣ ಮಾತ್ರ ನಿಂತಿಲ್ಲ. ಅಂದಂಗೆ ನಾವೇಳ್ತಿರೋದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ನಡುವಿನ ರಾಜಕೀಯ ದ್ವೇಷ. ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಒಬ್ಬರು ಕಾಂಗ್ರೆಸ್ ಮತ್ತೊಬ್ಬರು ಜೆಡಿಎಸ್​ ಪಕ್ಷದಿಂದ ಸ್ಪರ್ಧಿಸಿದ್ರು. ಜಿದ್ದಾಜಿದ್ದಿನ ಎಲೆಕ್ಷನ್​ನಲ್ಲಿ ಹಾಲಿ ಸಿಎಂ ಆಗಿದ್ರೂ ಮಾಜಿ ಸಿಎಂ ಸಿದ್ದರಾಮಯ್ಯ ಅತ್ಯಧಿಕ ಮತಗಳ ಹಂತರದಿಂದ ಸೋತಿದ್ರು. ಚುನಾವಣೆಯಲ್ಲಿ ಸಿದ್ದು ಎದುರು ಜಿಟಿಡಿ ಗೆಲುವಿನ ನಗೆ ಬೀರಿದ್ರು. ಆದ್ರೆ ಯಾವುದೇ ಪಕ್ಷಕ್ಕೂ ಬಹುಮತ ಬಾರದ ಹಿನ್ನೆಲೆ ಜೆಡಿಎಸ್​ ಹಾಗೂ ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರ ರಚಿಸಬೇಕಾಯ್ತು. ಈಗ ಸಿದ್ದು ಹಾಗೂ ಜಿಟಿಡಿ ಸಮ್ಮಿಶ್ರಸರ್ಕಾರದಲ್ಲಿದ್ರೂ ವೈಯಕ್ತಿವಾಗಿ ಹಳೆಯ ದ್ವೇಷ ಮುಂದುವರಿದೇ ಇದೆ. ಯಾಕಂದ್ರೆ ವಿವಿ ಸಿಂಡಿಕೇಟ್ ನಾಮನಿರ್ದೇಶಿತ ಸದಸ್ಯರ ಮುಂದುವರಿಕೆ ವಿಚಾರದಲ್ಲಿ ಮತ್ತೆ ಇಬ್ಬರ ನಡುವೆ ಹಗೆ ರಾಜಕಾರಣ ಮುಂದುವರಿದಿದೆ.

ಸಿಂಡಿಕೇಟ್ ಸದಸ್ಯರ ಬದಲಾವಣೆ ಮಾಡದಂತೆ ಸಿದ್ದು ಪತ್ರ

ಸದಸ್ಯರ ಬದಲಾವಣೆಗೆ ಶಿಕ್ಷಣ ಇಲಾಖೆಯಿಂದ ಅಧಿಕೃತ ಸುತ್ತೋಲೆ

ಇನ್ನು ರಾಜ್ಯದ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಸಿಂಡಿಕೇಟ್ ಸದಸ್ಯರನ್ನ ನಾಮನಿರ್ದೇಶನ ಮಾಡುತ್ತದೆ..ಕಳೆದ ಸಿದ್ದು ಸರ್ಕಾರ ಕೂಡ ಎಲ್ಲಾ ವಿವಿಗಳಿಗೆ ಸಿಂಡಿಕೇಟ್ ಸದಸ್ಯರನ್ನ ನೇಮಕಮಾಡಿತ್ತು. ಸರ್ಕಾರದಅವಧಿ ಮುಗಿದ ಬಳಿಕ ಮತ್ತೆ ಹೊಸ ಸದಸ್ಯರ ನಾಮ ನಿರ್ದೇಶನ ಮಾಡುವುದು ವಾಡಿಕೆ. ಹೀಗಾಗಿ ಹೊಸ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವ ಜಿಟಿಡಿ ಹಿಂದಿನ ಸದಸ್ಯರ ಬದಲಾವಣೆ ಬಗ್ಗೆ ನಿರ್ಧರಿಸಿದ್ದರು. ಇದು ಗೊತ್ತಾದ ತಕ್ಷಣವೇ ಮಾಜಿ ಸಿಎಂ ಸಿದ್ದು ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದು ನಾವು ಮಾಡಿದ ಸದಸ್ಯರನ್ನೇ ಮುಂದುವರಿಸಿ ಅಂತ ಮನವಿ ಮಾಡಿದ್ದರು.

ಆದ್ರೆ ಇದೀಗ ಸಿದ್ದು ಪತ್ರಕ್ಕೆ ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲ. ಕಳೆದ ಮಂಗಳವಾರ ಸಿದ್ದು ಪತ್ರದ ಬಗ್ಗೆ ಪ್ರತಿಕ್ರಿಯಿಸಿದ್ದ ಉನ್ನತ ಶಿಕ್ಷಣ ಸಚಿವ ಜಿಟಿಡಿ ಹೊಸ ಸರ್ಕಾರ ಬಂದ ಮೇಲೆ ಸಿಂಡಿಕೇಟ್ ಸದಸ್ಯರನ್ನ ಬದಲಾಯಿಸಬೇಕಾಗುತ್ತದೆ ಎಂದಿದ್ದರು. ಹೇಳಿಕೆ ನೀಡಿ ಬೆನ್ನಲ್ಲೇ, ಶಿಕ್ಷಣ ಇಲಾಖೆಯಿಂದ ಹಳೆಯ ಸಿಂಡಿಕೇಟ್ ಸದಸ್ಯ ಅವಧಿ ರದ್ಧುಪಡಿಸಲಾಗಿದೆ ಎಂದು ಸುತ್ತೋಲೆಯೂ ಬಿಡುಗಡೆಯಾಗಿದೆ.

ರಾಜ್ಯದ 13 ವಿವಿಗಳ ಸಿಂಡಿಕೇಟ್‌ ಸದಸ್ಯರ ಬದಲಾವಣೆ

ಶಿಕ್ಷಣ ಇಲಾಕೆಯಿಂದ ಸುತ್ತೋಲೆ

ಇದೀಗ ತುಮಕೂರು ವಿಶ್ವವಿದ್ಯಾನಿಲಯ, ಬೆಂಗಳೂರು ವಿವಿ, ಮೈಸೂರು ವಿವಿ, ಹಂಪಿ ಕನ್ನಡ ವಿವಿ, ಧಾರವಾಡದ ಕರ್ನಾಟಕ ವಿವಿ, ರಾಣಿ ಚೆನ್ನಮ್ಮ ವಿವಿ,ಇಜಯನಗರ ಕೃಷ್ಣ ದೇವರಾಯ ವಿವಿ, ಕಲಬುರಗಿ ವಿವಿ, ಮಂಗಳೂರು ವಿವಿ, ಶಿವಮೊಗ್ಗದ ಕುವೆಂಪು ವಿವಿ, ವಿಜಯಪುರದ ಮಹಿಳಾ ವಿವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಕರ್ನಾಟಕ ಮುಕ್ತ ವಿವಿ ಸೇರಿ ಒಟ್ಟು 13 ವಿವಿಗಳ ಸಿಂಡಿಕೇಟ್ ಸದಸ್ಯರ ಬದಲಾವಣೆಗೆ ಜಿಟಿಡಿ ಸುತ್ತೋಲೆ ಹೊರಡಿಸಿದ್ದಾರೆ. ಈ ಮೂಲಕ ಹಳೆಯ ಸದಸ್ಯರನ್ನ ಕಿತ್ತು ಹೊಸ ಸದಸ್ಯರನ್ನ ನಾಮನಿರ್ದೆಶನ ಮಾಡೋಕೆ ಮುಂದಾಗಿದ್ದಾರೆ.

ಆದ್ರೆ ಸಿದ್ದು ಇಷ್ಟಕ್ಕೇ ಸುಮ್ಮನಾಗ್ತಾರಾ ಅನ್ನೋ ಪ್ರಶ್ನೆಯೂ ಎದ್ದಿದೆ. ಜಿಟಿಡಿ ಅದೇಶ ಹೊರಡಿಸುವಲ್ಲಿ ಕೈಮೇಲಾಗುವಂತೆ ನೋಡಿಕೊಂಡ್ರೂ, ಸಿಎಂ ಮೇಲೆ ಒತ್ತಡ ತಂದು ಹಳಬರನ್ನೇ ಮುಂದುವರಿಸುವಲ್ಲಿ ಸಿದ್ದು ಕೂಡ ಯಶಸ್ವಿಯಾಗಬಹುದು.

ಒಟ್ಟಿನಲ್ಲಿ ಸಿದ್ದು ಹಾಗೂ ಜಿಟಿಡಿ ನಡುವಿನ ಕೋಲ್ಡ್ ವಾರ್ ಇದೀಗ ಸ್ಪೋಟಗೊಂಡಿದೆ. ಒಬ್ಬರ ಮೇಲೊಬ್ಬರು ಸಮಯ ಸಿಕ್ಕಾಗಲೆಲ್ಲಾ ಹಗೆ ಸಾಧಿಸೋಕೆ ನೋಡ್ತಿದ್ದಾರೆ. ಆದ್ರೆ ಸಾಕಷ್ಟು ಪ್ರಬಲವಾಗಿ ಬೆಳೆದಿರುವ ಸಿದ್ದು ಎದುರು ಜಿಟಿಡಿ ಎಷ್ಟರ ಮಟ್ಟಿಗೆ ತಿರುಗೇಟು ಕೋಡೋಕೆ ಸಾಧ್ಯ ಅನ್ನೋದು ಇದೀಗ ಉದ್ಬವಿಸಿರುವ ಪ್ರಶ್ನೆ.

ವರದಿ : ಶಿವಕುಮಾರ್ ಜೋಹಳ್ಳಿ, ಪೊಲಿಟಿಕಲ್ ಬ್ಯೂರೋ, ಟಿವಿ5 ಬೆಂಗಳೂರು

Next Story

RELATED STORIES