Top

ಅರ್ಜುನ್ ತೆಂಡುಲ್ಕರ್ ಮೊದಲ ಪಂದ್ಯದ ಸಾಧನೆ 1 ವಿಕೆಟ್, 0 ರನ್​!

ಅರ್ಜುನ್ ತೆಂಡುಲ್ಕರ್ ಮೊದಲ ಪಂದ್ಯದ ಸಾಧನೆ  1 ವಿಕೆಟ್, 0 ರನ್​!
X

ಜಗತ್ತು ಕಂಡ ಅಪರೂಪದ ದಾಖಲೆಗಳ ವೀರ ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಶ್ರೀಲಂಕಾದಲ್ಲಿ ನಡೆಯುತ್ತಿರುವ ಕಿರಿಯರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ 1 ವಿಕೆಟ್ ಹಾಗೂ 0 ರನ್ ಸಾಧನೆ ಮಾಡಿದ್ದಾರೆ.

ಕೊಲಂಬೊದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 1 ವಿಕೆಟ್ ಪಡೆದಿದ್ದ ಅರ್ಜುನ್ ತೆಂಡುಲ್ಕರ್ ಬ್ಯಾಟಿಂಗ್​ ವೇಳೆ 11 ಎಸೆತ ಎದುರಿಸಿದರೂ ಖಾತೆ ತೆರೆಯದೇ ಶೂನ್ಯಕ್ಕೆ ಔಟಾದರು. ಶಶಿಕಲಾ ದುಲ್ಶನ್ ಅವರ ಎಸೆತದಲ್ಲಿ ಅರ್ಜುನ್ ಎಲ್​ಬಿ ಬಲೆಗೆ ಬಿದ್ದರು.

ಕಾಕತಾಳೀಯ ಅಂದರೆ ಸಚಿನ್​ ತೆಂಡುಲ್ಕರ್ ಕೂಡ ಮೊದಲ ಪಂದ್ಯಎದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಈ ಮೂಲಕ ಅರ್ಜುನ್ ಅಪ್ಪನ ಹಾದಿಯಲ್ಲೇ ಸಾಗುವ ಮುನ್ಸೂಚನೆ ನೀಡಿದ್ದಾರೆ. ಸಚಿನ್ 1989ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರನ್ ಗಳಿಸದೇ ಔಟಾಗಿದ್ದರು.

ಇದಕ್ಕೂ ಮುನ್ನ ಅರ್ಜುನ್ ಮೊದಲ ಇನಿಂಗ್ಸ್​ನಲ್ಲಿ ತನ್ನ 11ನೇ ಎಸೆತದಲ್ಲಿ ಕಮಲ್ ಮಿಶ್ರಾ ಅವರನ್ನು ಬೌಲ್ಡ್ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಚೊಚ್ಚಲ ವಿಕೆಟ್ ಪಡೆದ ಸಾಧನೆ ಮಾಡಿದ್ದರು.

Next Story

RELATED STORIES