Top

ಪರಿಹಾರದ ಹಣ ಪಡೆಯಲು ಗಂಡನನ್ನೇ ಕೊಂದ ಪತ್ನಿ.!!

ಪರಿಹಾರದ ಹಣ ಪಡೆಯಲು ಗಂಡನನ್ನೇ ಕೊಂದ ಪತ್ನಿ.!!
X

ಹಾಸನ : ಜೂನ್ 8ರಂದು ರೈತ ಯೋಗೇಶ್ ಆತ್ಯಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಾಲದ ಬಾಧೆಯಿಂದ ಗಂಡ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆಂದು ಬಿಂಬಿಸಲಾಗಿದ್ದ ಪ್ರಕರಣಕ್ಕೆ, ಹೊಸ ತಿರುವು ಪಡೆದುಕೊಂಡಿದೆ.

ರೈತ ಯೋಗೇಶ್ ಸಾಲದ ಬಾಧೆಯಿಂದ ನೇಣಿಗೆ ಶರಣಾಗಿದ್ದಾರೆ ಎಂದು ಪತ್ನಿ ಗಾಯತ್ರಿ, ಪೊಲೀಸರಿಗೆ ದೂರು ನೀಡಿದ್ದರು. ಆದರೇ ಮರಣೋತ್ತರ ಪರೀಕ್ಷೆ ವರದಿ ರೈತನ ಆತ್ಮಹತ್ಯೆ ಪ್ರಕರಣವನ್ನೇ ಬುಡಮೇಲು ಮಾಡಿದೆ. ಪದೇ ಪದೇ ಗಲಾಟೆ ಮಾಡುತ್ತಿದ್ದ ಗಂಡನನ್ನು ಪತ್ನಿ-ಮಗನೇ ಉಸಿರುಗಟ್ಟಿಸಿ ಕೊಲೆ ಮಾಡಿ, ನೇಣಿಗೆ ಶರಣಾಗಿದ್ದಾರೆ ಎಂಬಂತೆ ಬಿಂಬಿಸಿದ್ದ ಪ್ರಕರಣಕ್ಕೆ ತಿರುವು ನೀಡಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಪತ್ನಿ ಮತ್ತು ಪುತ್ರ ದರ್ಶನ್ ನ್ನನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾವೇ ಕೊಲೆ ಮಾಡಿದ್ದಾಗಿ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಆತ್ಮಹತ್ಯೆ ಎಂದು ಬಿಂಬಿಸಿ ಪರಿಹಾರದ ಹಣ ಪಡೆಯಲು ಯೋಗೇಶ್ ಮಲಗಿದ್ದಾಗ ಕತ್ತು ಹಿಸುಕಿ ಕೊಂದಿದ್ದೇವೆ. ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಕೋಣೆಯಲ್ಲೇ ನೇಣು ಹಾಕಿದ್ದೇವೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾರೆ. ಇದೀಗ ಯೋಗೀಶ್ ಪತ್ನಿ ಮತ್ತು ಮಗನ್ನು ಬಂಧಿಸಿರುವ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Next Story

RELATED STORIES