Top

ಸ್ನಾನಕ್ಕೆಂದು ಬಚ್ಚಲಿಗೆ ಹೋದಾಗ ಕಂಡಿದ್ದೇನು ಗೊತ್ತಾ?

ಸ್ನಾನಕ್ಕೆಂದು ಬಚ್ಚಲಿಗೆ ಹೋದಾಗ ಕಂಡಿದ್ದೇನು ಗೊತ್ತಾ?
X

ಚಿಕ್ಕಮಗಳೂರು: ಬೆಳ್ಳಂಬೆಳಗ್ಗೆ ಸ್ನಾನಕ್ಕೆಂದು ಬಚ್ಚಲ ಮನೆಗೆ ಹೋದಾಗ, ಬಾತ್‌ರೂಮ್‌ನಲ್ಲೇನಾದ್ರೂ ಹಾವು ಕಂಡ್ರೆ ಹೇಗಿರತ್ತೆ ಅನ್ನೋದನ್ನ ಒಮ್ಮೆ ಯೋಚನೆ ಮಾಡಿದ್ರೇನೆ ಮೈ ಜುಮ್‌ ಅನ್ನತ್ತೆ. ಅಂಥಾದ್ರಲ್ಲಿ ಸ್ನಾನಕ್ಕೆ ಹೋದಾಗ ನಾಗರಹಾವು ಪ್ರತ್ಯಕ್ಷ ಆದ್ರೆ ಹೇಗಿರತ್ತೆ? ಇಂಥಹದ್ದೇ ಒಂದು ಘಟನೆ ಚಿಕ್ಕಮಗಳೂರಿನ ಕಾಳಿದಾಸ ಬಡಾವಣೆಯಲ್ಲಿ ನಡೆದಿದೆ.

ಕಾಳಿದಾಸನಗರದ ಸತ್ಯನಾರಾಯಣ ಎಂಬುವರ ಮನೆಯಲ್ಲಿ ಸ್ನಾನಕ್ಕೆಂದು ತೆರಳಿದಾಗ ಬಚ್ಚಲ ಮನೆಯಲ್ಲಿ ಇಟ್ಟಿದ್ದ ಹಂಡೆಗೆ ಉರಿ ಹಾಕುವ ಬಾಕ್ಸ್‌ನಲ್ಲಿ ನಾಗರಹಾವು ಕಾಣಿಸಿದೆ.ಗೋದಿ ನಾಗರಹಾವು ನಾಲ್ಕು ಅಡಿ ಉದ್ದವಿದ್ದು, ರಟ್ಟಿನ ಬಾಕ್ಸ್ ಮೇಲಿದ್ದ ಹಾವು ನೋಡಿ ಮನೆ ಜನ ಭಯಪಟ್ಟಿದ್ದಾರೆ. ತಕ್ಷಣ ಮನೆಮಾಲೀಕ ಸ್ನೇಕ್‌ ನರೇಶ್‌ಗೆ ಕಾಲ್ ಮಾಡಿ, ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸ್ನೇಕ್ ನರೇಶ್ ಹಾವನ್ನ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

Next Story

RELATED STORIES