Top

ಒಂದು ಮೊಸಳೆ ದೇವಾಲಯ ರಕ್ಷಿಸುತ್ತೆ : ನೈವೇದ್ಯ ಅನ್ನವೇ ಅದಕ್ಕೆ ಆಹಾರ.!!

ಒಂದು ಮೊಸಳೆ ದೇವಾಲಯ ರಕ್ಷಿಸುತ್ತೆ : ನೈವೇದ್ಯ ಅನ್ನವೇ ಅದಕ್ಕೆ ಆಹಾರ.!!
X

ವಸಂತ ಬಿ ಈಶ್ವರಗೆರೆ

ಕೇರಳ : ಭಾರತದಲ್ಲಿ ಹಲವಾರು ಮಂದಿರಗಳಿವೆ ಅವುಗಳ ರಹಸ್ಯ ಭಕ್ತರಿಗೆ ಸೋಜಿಗವನ್ನುಂಟು ಮಾಡುತ್ತೆ. ಇಂತಹ ಒಂದು ಮಂದಿರ ಕೇರಳದಲ್ಲಿದೆ. ಈ ದೇವಾಲಯಕ್ಕೆ ಮೊಸಳೆಯೊಂದು ಸದಾ ಕಾವಲು ಕಾಯುತ್ತಿದ್ದು, ಯಾವುದೇ ಲೋಪಕ್ಕೆ, ಕಳ್ಳರಿಗೆ ಈ ದೇವಾಲಯ ಪ್ರವೇಶಕ್ಕೆ ಅವಕಾಶವನ್ನೇ ಮಾಡಿಕೊಡುವುದಿಲ್ಲ. ಇಂತಹ ದೇವಾಲಯವೇ ಕರ್ನಾಟಕ -ಕೇರಳದ ಗಡಿ ಭಾಗದಲ್ಲಿರುವ ಹೆಚ್ಚು ಕನ್ನಡಿಗರೇ ವಾಸವಾಗಿರುವ ಕಾಸರಗೋಡಿನ ಕುಂಬಳೆಯ ಅನಂತಪುರ ದೇವಾಲಯ.

ಈ ಮಂದಿರದಲ್ಲಿ ಒಂದು ಕೊಳ ಇದೆ. ಹೀಗೆ ಕೊಳದ ಮಧ್ಯದಲ್ಲಿರುವ ಕೇರಳದ ಏಕೈಕ ದೇವಾಲಯ ಇದಾಗಿದೆ. ಈ ದೇವಾಲಯದ ರಕ್ಷಣೆಯನ್ನು ಇಲ್ಲಿರುವ ಮೊಸಳೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಮೊಸಳೆ ಇತರ ಮೊಸಳೆಗಳಂತೆ ಮಾಂಸಾಹಾರಿಯಲ್ಲ. ಅದುವೇ ಇಲ್ಲಿನ ವಿಶೇಷ.

ಮೊಸಳೆಯ ವಿಶೇಷತೆ ಏನ್ ಗೊತ್ತಾ.?

ಈ ಮೊಸಳೆಗೆ ಬಬಿಯಾ ಎಂದು ಹೆಸರನ್ನು ಇಡಲಾಗಿದೆ. ಹಿಂದೆ ಬ್ರಿಟೀಷರು ಇಲ್ಲಿ ಟೆಂಟ್‌ ಹಾಕಿದ್ದರಂತೆ ಅಲ್ಲಿ ಮೊಸಳೆ ಇರುವುದನ್ನು ಅರಿತ ಅವರು ಅದಕ್ಕೆ ಗುಂಡು ಹಾರಿಸಿ ಸಾಯಿಸಿದ್ದರಂತೆ. ಅದನ್ನು ಸಾಯಿಸಿದ ಬ್ರೀಟೀಷ್‌ ಅಧಿಕಾರಿ ಸ್ವಲ್ಪ ದಿನದಲ್ಲೆ ಸತ್ತಿದ್ದ. ಆದರೆ ಪವಾಡ ಸದೃಶ ಎಂಬಂತೆ ಸ್ವಲ್ಪ ದಿನದಲ್ಲೇ ಆ ಮೊಸಳೆ ಮತ್ತೆ ಕಾಣಿಸಿದೆ. ಈಗಿರುವ ಮೊಸಳೆ ಇಲ್ಲಿವರೆಗೂ ಜನರಿಗೆ ಯಾವುದೇ ರೀತಿಯ ಉಪಟಳ ನೀಡಿಲ್ಲ. ಅದು ತನ್ನ ಪಾಡಿಗೆ ಇರುವುದು ಇಲ್ಲಿನ ವಿಶೇಷ.

ಮಾಂಸ ಸೇವಿಸುವುದಿಲ್ಲ, ನೈವೇದ್ಯ ಅನ್ನ ಸೇವಿಸೋದು ಬಿಡೋದಿಲ್ಲ

ಇತರೆ ಮೊಸಳೆಗಳು ಮಾಂಸಹಾರರ ಸೇವನೆ ಮಾಡಿದರೇ, ಕಾಸರಗೂಡಿನ ಅನಂತಪುರ ದೇವಾಲಯದಲ್ಲಿರುವ ಮೊಸಳೆ ಮಾತ್ರ ಇದಕ್ಕೆ ತದ್ವಿರುದ್ಧ. ಈ ಮೊಸಳೆ ಯಾರಿಗೂ ತೊಂದರೇ ಕೊಡದೇ, ಅರ್ಚಕರು ಬಬಿಯಾ ಅಂತ ಕರೆದ್ರೇ ಸಾಕು. ತಕ್ಷಣವೇ ಪ್ರತ್ಯಕ್ಷವಾಗುತ್ತದೆ. ದೇವಾಲಯದ ಅರ್ಚಕರುವ ನೀಡುವ ಅನ್ನ ನೈವೇದ್ಯವನ್ನು ಮಾತ್ರ ಸೇವಿಸಿ, ಇಲ್ಲಿ ಜೀವಿಸುತ್ತಿದೆಯಂತೆ.

ಎಲ್ಲಾ ಕಾಲದಲ್ಲೂ ದೇವಾಲಯದ ಸುತ್ತಲಿನ ನೀರು

ಅಂದಹಾಗೇ, ಮಳೆಗಾಲ ಕಡಿಮೆಯಾದರೂ ಈ ಕ್ಷೇತ್ರದಲ್ಲಿ ನೀರಿನ ಮಟ್ಟ ಒಂದೇ ರೀತಿಯಾಗಿರುತ್ತದೆ. ನೀರು ಸ್ವಲ್ಪ ಕಡಿಮೆಯಾದಾಗ ಗುಹೆಯಲ್ಲಿ ಮಲಗಿರುವ ಮೊಸಳೆಯನ್ನು ಕಾಣಬಹುದು. ಇಲ್ಲವಾದರೆ ಅದು ಕಾಣಿಸೋದೆ ಇಲ್ಲ. ಇಲ್ಲಿ ದೇವರ ಪೂಜೆಯ ನಂತರ ನೈವೇಧ್ಯವನ್ನು ಬಬಿಯಾನಿಗೆ ನೀಡಲಾಗುತ್ತದೆ. ಬೇರೆ ಜನರು ಪ್ರಸಾದ ತಿನ್ನಿಸುವ ಹಾಗಿಲ್ಲ. ಕೇವಲ ಪೂಜಾರಿ ಮಾತ್ರ ಪ್ರಸಾದ ತಿನ್ನಿಸುತ್ತಾರೆ.

ಅನಂತ ಪದ್ಮನಾಭಸ್ವಾಮಿಯ ಮೂಲಸ್ಥಾನವಂತೆ

ಇನ್ನೂ ತಿರುವನಂತಪುರದ ಅನಂತ ಪದ್ಮನಾಭಸ್ವಾಮಿ ದೇವಾಲಯದ ಮೂಲ ಸ್ಥಾನ ಇದಾಗಿದೆ ಎಂದು ಹೇಳಲಾಗುತ್ತದೆ. ಈ ಮಂದಿರದ ಮೂರ್ತಿಯನ್ನು ಕಲ್ಲಿನಿಂದ ಕೆತ್ತಲಾಗಿಲ್ಲ. ಬದಲಾಗಿ ಔಷಧೀಯ ವಸ್ತುಗಳಿಂದ ನಿರ್ಮಿಸಲಾಗಿದೆ. ಇಂತಹ ದೇವಾಲಯಕ್ಕೆ ಕಾವಲಿರುವ ಮೊಸಳೆ, ಇಲ್ಲಿ ಆರಾಧ್ಯ ದೈವ. ದೇವಾಲಯದ ರಕ್ಷಣೆಗೆ ಇರುವ ಕಾವಲುಗಾರ. ಅಲ್ಲದೇ ಮಾಂಸಹಾರ ವರ್ಜಿಸಿ, ಅಪ್ಪಟ ಸಸ್ಯಹಾರ ಸೇವಿಸುವ ಸಸ್ಯಜೀವಿ.

Next Story

RELATED STORIES