Top

ನಟಸಾರ್ವಭೌಮ ಚಿತ್ರ ಬಿಡುಗಡೆ ಮುಹೂರ್ತ ಫಿಕ್ಸ್..!

ನಟಸಾರ್ವಭೌಮ ಚಿತ್ರ ಬಿಡುಗಡೆ ಮುಹೂರ್ತ ಫಿಕ್ಸ್..!
X

ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್, ಗೂಗ್ಲಿ ಪವನ್ ಒಡೆಯರ್​ ಕ್ರೇಜಿ ಕಾಂಬಿನೇಷನ್​ ಸಿನಿಮಾ ನಟಸಾರ್ವಭೌಮ. ಟೈಟಲ್​ ಮತ್ತು ಮೇಕಿಂಗ್​ನಿಂದ್ಲೇ ಬೇಜಾನ್​ ಸೌಂಡ್ ಮಾಡ್ತಿರೋ ಈ ಆ್ಯಕ್ಷನ್​ ಎಂಟ್ರಟ್ರೈನರ್ ರಿಲೀಸ್​ ಡೇಟ್​ ಕನ್ಫರ್ಮ್ ಆಗಿದೆ. ಈ ವರ್ಷದ ದಸರಾ ಹಬ್ಬದ ಸಂಭ್ರಮದಲ್ಲೇ ಚಿತ್ರವನ್ನ ತೆರೆಗೆ ತರೋ ಪ್ರಯತ್ನ ಮಾಡಲಾಗ್ತಿದ್ದು, ದೊಡ್ಮನೆ ಅಭಿಮಾನಿಗಳು ಈ ಸುದ್ದಿ ಕೇಳಿ ಸಂತಸಗೊಂಡಿದ್ದಾರೆ.

ಡಾ. ರಾಜ್​ಕುಮಾರ್​​ ಅವ್ರ ಬಿರುದನ್ನ ಟೈಟಲ್ ಮಾಡಿ ಪವನ್ ಒಡೆಯರ್ ಆಕ್ಷನ್ ಕಟ್ ಹೇಳ್ತಿರೋ ಸಿನಿಮಾ ನಟಸಾರ್ವಭೌಮ. ಈ ಚಿತ್ರದಲ್ಲಿ ಪುನೀತ್ ರಾಜ್​​ಕುಮಾರ್ ಮೀಡಿಯಾ ಸ್ಟಿಲ್ ಫೋಟೋಗ್ರಫರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಜ್ಯೂನಿಯರ್ ನಟಸಾರ್ವಭೌಮನಿಗೆ ನಾಯಕಿಯಾಗಿದ್ದಾರೆ. ಆರ್ಮುಗ ರವಿಶಂಕರ್, ಬಿ. ಸರೋಜಾ ದೇವಿ, ಚಿಕ್ಕಣ್ಣ, ಅಚ್ಯುತ್ ಕುಮಾರ್, ಅನಂತ್ ನಾಗ್​ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದ್ದು, ಈಗಾಗಲೇ 50ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದೆ.

ದಸರಾ ಹಬ್ಬದ ಸಂಭ್ರಮಕ್ಕೆ ತೆರೆಗೆ ಬಂದ ಪುನೀತ್ ಮೊದಲ ಸಿನಿಮಾ ಜಾಕಿ. 2010ನೇ ಸಾಲಿನ ದಸರಾ ಸಂಭ್ರಮವನ್ನ ಹೆಚ್ಚಿಸಿದ್ದು, ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ಜಾಕಿ. ಸೂರಿ ದಕ್ಷ ನಿರ್ದೇಶನ, ಅಪ್ಪು ಸ್ಕ್ರೀನ್ ಪ್ರಸೆನ್ಸ್​​, ಹರಿಕೃಷ್ಣ ಮ್ಯೂಸಿಕ್ ಸೇರಿ ಜಾಕಿ ಝೇಂಕಾರ ಜೋರಾಗಿತ್ತು. ಪೂರ್ಣಿಮಾ ಎಂಟ್ರಪ್ರೈಸಸ್ ಬ್ಯಾನರ್​ನಲ್ಲಿ ಪಾರ್ವತಮ್ಮ ರಾಜ್​ಕುಮಾರ್ ನಿರ್ಮಾಣದ ಜಾಕಿ ಅಪ್ಪು ಕರಿಯರ್​ನಲ್ಲೇ ಆಲ್​ಟೈಲ್​ ಸೂಪರ್ ಹಿಟ್​ ಎನಿಸಿಕೊಂಡಿದೆ. ದೊಡ್ಮನೆ ಅಭಿಮಾನಿಗಳು ಜಾಕಿ ದರ್ಬಾರ್​ನ ಇಂದಿಗೂ ಮರೆತಿಲ್ಲ.

2011ರ ದಸರಾ ಹಬ್ಬಕ್ಕೆ ಯೋಗರಾಜ್​ ಭಟ್- ಅಪ್ಪು ಕಾಂಬಿನೇಷನ್​ನ ಪರಮಾತ್ಮ ಸಿನಿಮಾ ತೆರೆಗೆ ಬಂದಿತ್ತು. ಪರಮಾತ್ಮ ಪುನೀತ್ ಜೋಡಿಯಾಗಿ ದೀಪಾ ಸನ್ನಿಧಿ ಮಿಂಚಿದ್ರು. ಜಯಣ್ಣ- ಭೋಗೇಂದ್ರ ಪರಮಾತ್ಮ ಸಿನಿಮಾ ಸಕ್ಸಸ್ ಕಂಡಿತ್ತು.

ಜಾಕಿ, ಪರಮಾತ್ಮ ನಂತ್ರ ಎರಡು ವರ್ಷದ ಹಿಂದೆ ದೊಡ್ಮನೆ ಹುಡ್ಗ ಸಿನಿಮಾ ದಸರಾ ಹಬ್ಬಕ್ಕೆ ತೆರೆಗೆ ಬಂದಿತ್ತು. ಬಹುತಾರಾಗಣದ ದೊಡ್ಮನೆ ಹುಡ್ಗ ಸಿನಿಮಾ ಬಾಕ್ಸಾಫೀಸ್​ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಒನ್ಸ್ ಅಗೇನ್​ ಈ ಚಿತ್ರಕ್ಕೆ ಸೂರಿ ಆಕ್ಷನ್​ ಕಟ್ ಹೇಳಿದ್ರು. ರೆಬೆಲ್ ಸ್ಟಾರ್ ಅಂಬರೀಷ್, ಸುಮಲತಾ ಅಂಬರೀಶ್, ಭಾರತೀ ವಿಷ್ಣುವರ್ಧನ್, ಅವಿನಾಶ್​ರಂತಹ ಘಟಾನುಘಟಿ ಕಲಾವಿದರು ನಟಿಸಿದ್ದ ಚಿತ್ರದಲ್ಲಿ ರಾಧಿಕಾ ಪಂಡಿತ್ ದೊಡ್ಮನೆ ಹುಡ್ಗನಿಗೆ ನಾಯಕಿಯಾಗಿದ್ರು.

ಹೀಗೆ ದಸರಾ ಹಬ್ಬಕ್ಕೆ ಬಂದ ಪುನೀತ್ ರಾಜ್​ಕುಮಾರ್ ಅಭಿನಯದ 3 ಸಿನಿಮಾಗಳು ಸಕ್ಸಸ್ ಕಂಡಿವೆ. ಇದೀಗ ನಟಸಾರ್ವಭೌಮ ಚಿತ್ರವನ್ನ ಸಹ ದಸರಾ ಹಬ್ಬಕ್ಕೆ ತೆರೆಗೆ ತರಲಾಗ್ತಿದೆ.ಸ್ವತ: ಚಿತ್ರತಂಡ ಈ ವರ್ಷದ ದಸರಾ ಹಬ್ಬಕ್ಕೆ ಚಿತ್ರ ರಿಲೀಸ್ ಮಾಡೋದಾಗಿ ಅನೌನ್ಸ್​ ಮಾಡಿದ್ದು, ಪವರ್ ಸ್ಟಾರ್ ಫ್ಯಾನ್ಸ್​ ಥ್ರಿಲ್ಲಾಗಿದ್ದಾರೆ. ಸದ್ಯ ಚಿತ್ರೀಕರಣ ಭರದಿಂದ ಸಾಗಿದ್ದು, ಅಕ್ಟೋಬರ್​ನಲ್ಲಿ ನಟಸಾರ್ವಭೌಮ ತೆರೆಗೆ ಬರೋದು ಪಕ್ಕಾ.

ಹೈ ಪ್ರೊಡಕ್ಷನ್ಸ್​​ ವ್ಯಾಲ್ಯೂಸ್​​​ ಜೊತೆಗೆ ಸಿಕ್ಕಾಪಟ್ಟೆ ಅದ್ಧೂರಿಯಾಗಿ ನಿರ್ಮಾಣ ಮಾಡ್ತಿರೋ ಸಿನಿಮಾ ನಟಸಾರ್ವಭೌಮ. ಅದಕ್ಕೆ ತಕ್ಕಂತೆ ಪ್ರಮೋಷನ್ ಮತ್ತು ರಿಲೀಸ್ ಪ್ಲಾನ್ ಮಾಡಿದೆ ಚಿತ್ರತಂಡ. ದಸರಾ ಸಂಭ್ರಮದಲ್ಲಿ ಸಿಕ್ಕಾಪಟ್ಟೆ ಗ್ರೌಂಡಾಗಿ ಚಿತ್ರವನ್ನ ರಿಲೀಸ್​ ಮಾಡ್ತಿದ್ದು, ಚಿತ್ರ ಬಾಕ್ಸಾಫೀಸ್​ ದೋಚೋದು ಗ್ಯಾರೆಂಟಿ.

ನಾಣಿ..ಎಂಟ್ರಟ್ರೈನ್​ಮೆಂಟ್ ಬ್ಯೂರೊ,ಟಿವಿ5

Next Story

RELATED STORIES