Top

ಬೆಂಗಳೂರಿನಲ್ಲಿ ಮುಯೆತೈ ಚಾಂಪಿಯನ್​ಶಿಪ್​

ಬೆಂಗಳೂರಿನಲ್ಲಿ ಮುಯೆತೈ ಚಾಂಪಿಯನ್​ಶಿಪ್​
X

ಮುಯೆತೈ ಕಲೆಯು ಅತ್ಯಂತ ಪ್ರಾಚೀನ ಥಾಯ್ ಮಾರ್ಷಲ್ ಆರ್ಟ್ಸ್‌ಗಳಲ್ಲಿ ಒಂದಾಗಿದೆ. ಇದಲ್ಲದೆ ವಿಶ್ವದಲ್ಲಿ ಅಭ್ಯಾಸ ಮಾಡುತ್ತಿರುವ ಅತ್ಯಂತ ಜನಪ್ರಿಯ ಶಸ್ತ್ರಾಸ್ತ್ರ ಯುದ್ಧ ಕಲೆಯಾಗಿದೆ.

ಮೌಯೈತೈಯನ್ನು ಮಾರ್ಷಲ್ ಆರ್ಟ್ ಅನುಭವವಿರುವ, ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ, ಮಾರ್ಷಲ್ಸ್ ಆರ್ಟ್ಸ್ ಕಲಾವಿದರಾದ ಅಖಿಲ ಭಾರತ ಮೌಯಿ ಥೈ ಇಂಡಿಯಾ ಅಧ್ಯಕ್ಷ ಗ್ರ್ಯಾಂಡ್ ಮಾಸ್ಟರ್ ಎಂ.ಹೆಚ್. ಅಬ್ರಿಡ್ 1992 ರಲ್ಲಿ ಭಾರತದಲ್ಲಿ ಪರಿಚಯಿಸಿದರು . ಮೂಯೆತೈ ಕ್ರೀಡೆಯು ದೇಶದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಕರ್ನಾಟಕ ರಾಜ್ಯದಿಂದ ಆರಂಭವಾದ ಈ ಕಲೆ ಇಂದು ಎಲ್ಲಾ ರಾಜ್ಯಗಳಲ್ಲಿ ಗ್ರ್ಯಾಂಡ್ ಮಾಸ್ಟರ್ ಅಬಿಡ್ ರವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಲಾಗುತ್ತಿದೆ.

ಭಾರತದಲ್ಲಿ ಮೂಯೈತಿ ಕ್ರೀಡೆಯ ಪ್ರಚಾರ ಮತ್ತು ಆಡಳಿತಕ್ಕಾಗಿ ಭಾರತದಿಂದ ಅಧಿಕೃತ ಸಂಸ್ಥೆಯಾಗಿದೆ. 1996 ರಿಂದ ನಮ್ಮ ಕ್ರೀಡಾಪಟುಗಳು ವಿಶ್ವ ಮುಯೆತೈ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಇಲ್ಲಿಯವರೆಗೆ ಹಲವು ಚಿನ್ನದ ಪದಕ ಸೇರಿದಂತೆ, ಒಟ್ಟೂ 125 ಪದಕಗಳನ್ನು ಗೆದ್ದಿದ್ದಾರೆ. ಏಷ್ಯಾದ ಒಲಿಂಪಿಕ್ ಕೌನ್ಸಿಲ್ 2005 ರಲ್ಲಿ ಏಶ್ಯನ್ ಒಳಾಂಗಣ ಮತ್ತು ಮಾರ್ಷಿಯಲ್ ಆರ್ಟ್ ಗೇಮ್ಸ್ನಲ್ಲಿ ಮೌಯೈತಿ ಕ್ರೀಡೆಯನ್ನು ಪರಿಚಯಿಸಿತು. ಅಂದಿನಿಂದ ಐಓಎ ಅನುಮೋದನೆಯೊಂದಿಗೆ 2016 ರವರೆಗೆ ಮುಯೆತೈ ಕ್ರೀಡಾಪಟುಗಳು ಮುಯೆತೈ ಕ್ರೀಡೆಯಲ್ಲಿ ಐಒಎ ಅಡಿಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ . ಏಷಿಯನ್ ಬೀಚ್ ಗೇಮ್ಸ್ ನಲ್ಲಿ ಎರಡು ಬಾರಿ ಈ ಕ್ರೀಡಾಪಟುಗಳು ಚಿನ್ನದ ಪದಕ ಸೇರಿದಂತೆ 22 ಪದಕಗಳನ್ನು ಸಾಧಿಸಿದ್ದಾರೆ.

ಮುಯೆತೈ ಇಂಡಿಯಾ (ರಿ.) ಇಲ್ಲಿಯವರೆಗೆ 19 ಹಿರಿಯ ರಾಷ್ಟ್ರೀಯ ಮುಯೆತೈ ಚಾಂಪಿಯನ್ಷಿಪ್ಗಳನ್ನು ಮತ್ತು 18 ಜೂನಿಯರ್ ಮತ್ತು ಉಪ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ಶಿಪ್ಗಳನ್ನು ದೇಶದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ನಡೆಸಿದೆ; 6 ಪ್ರೋ ಆಮ್ ನ್ಯಾಷನಲ್ ಮುಯೆತೈ ಚಾಂಪಿಯನ್ಷಿಪ್ಗಳನ್ನು ಕೂಡಾ ನಡೆಸಿತು.

ಮೌಯಿ ಥೈ ಅಸೋಸಿಯೇಷನ್ ​​ಸಹಯೋಗದೊಂದಿಗೆ ಮೌಯಿ ಥೈ ಇಂಡಿಯಾ ಈಗ ಕರ್ನಾಟಕದಲ್ಲಿ 19 ನೇ ಒಖಿI(ಖ) ನ್ಯಾಷನಲ್ ಅಮಟೂ ಎರ್ ಮುಯಿ ಥಿ ಚ್ಯಾಂಪಿಯನ್​ಶಿಪ್ (ಜೂನಿಯರ್ ಮತ್ತು ಸಬ್ ಜೂನಿಯರ್) ಜುಲೈ 19ರಿಂದ 22ರವರೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಆಯೋಜಿಸುತ್ತಿದೆ.

ಈ ಪಂದ್ಯಾವಳಿಯ ವಿಜೇತರು ಮುಂಬರುವ ಬ್ಯಾಂಕಾಕ್ನಲ್ಲಿ ನಡೆಯಲಿರುವ 2018 ಯೂತ್ ವರ್ಲ್ಡ್ ಚ್ಯಾಂಪಿಯನ್ ಶಿಪ್ 2-9 ಆಗಸ್ಟ್ 2018 ರಲ್ಲಿ ಭಾಗವಹಿಸಲಿದ್ದಾರೆ .

Next Story

RELATED STORIES