Top

ಜುಲೈ.20ರಿಂದ ರಾಷ್ಟ್ರವ್ಯಾಪಿ ಲಾರಿ ಮುಷ್ಕರ : ಸರಕು ಸಾಗಾಣಿಕೆ ಬಂದ್

ಜುಲೈ.20ರಿಂದ ರಾಷ್ಟ್ರವ್ಯಾಪಿ ಲಾರಿ ಮುಷ್ಕರ : ಸರಕು ಸಾಗಾಣಿಕೆ ಬಂದ್
X

ಬೆಂಗಳೂರು : ಇಂಧನ ದರ ಏರಿಕೆ, ಥರ್ಡ್ ಪಾರ್ಟಿ ವಿಮೆ ಪ್ರೀಮಿಯಂ ದುಬಾರಿ ಹಾಗೂ ಹೆದ್ದಾರಿ ಟೋಲ್ ಏರಿಕೆ ವಿರೋಧಿಸಿ ಸರ್ಕಾರದ ವಿರುದ್ಧ ಮತ್ತೆ ಲಾರಿ ಮಾಲೀಕರು ಸಿಡಿದೆದ್ದಿದ್ದಾರೆ. ಹೌದು ಜುಲೈ 20 ರಿಂದ ದೇಶಾದ್ಯಂತ ಲಾರಿ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮುಷ್ಕರದದಿಂದಾಗಿ 93 ಲಕ್ಷ ಲಾರಿಗಳ ಮೂಲಕ ವಾಗುತ್ತಿದ್ದ ಸರಕು ಸಾಗಾಣಿಕೆ ಸಂಪೂರ್ಣ ಬಂದ್ ಆಗುವುದರಿಂದ ಜನಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇದಕ್ಕೆ ಸೆಡ್ಡು ಹೊಡೆಯಲು ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳವುದಕ್ಕೆ ಸಾರಿಗೆ ಇಲಾಖೆ ಸಿದ್ದವಾಗಿದೆ.

ಸರಕು ಸಾಗಾಣಿಕೆ ಬಂದ್-ಜನಜೀವನದ ಮೇಲೂ ವ್ಯತಿರಿಕ್ತ ಪರಿಣಾಮ..!

ಪೆಟ್ರೋಲ್ - ಡಿಸೇಲ್ ಏರಿಕೆ, ಥರ್ಡ್ ಪಾರ್ಟಿ ವಿಮಾ ದರ ಕಡಿತ, ಟೋಲ್ ರದ್ದತಿ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಮೋಟಾರು ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ ಜು. 20 ರಿಂದ ರಾಷ್ಟ್ರವ್ಯಾಪಿ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ ನೀಡಿದೆ. ನೋಟು ಅಮಾನ್ಯೀಕರಣದ ಬಳಿಕ ಕೇಂದ್ರ ಸರ್ಕಾರಕ್ಕೆ 10 ಲಕ್ಷ ಕೋಟಿಗೂ ಅಧಿಕ ಹಣ ಸಂಗ್ರಹವಾಗಿದ್ದರೂ ಥರ್ಡ್ ಪಾರ್ಟಿ ವಿಮೆಯ ಪ್ರೀಮಿಯಂ ಹೆಚ್ಚಿಸಲಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡುವ ಮೂಲಕ ಲಾರಿ ಮಾಲೀಕರು ಹಾಗೂ ಅವಲಂಬಿತರ ಜೀವನಕ್ಕೆ ಕೇಂದ್ರ ಸರ್ಕಾರ ಬರೆ ಹಾಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಲಾರಿ ಮಾಲೀಕರು ನಾಡಿದ್ದಿ ಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದ್ದು, ಮುಷ್ಕರದದಿಂದಾಗಿ ಕರ್ನಾಟಕದಲ್ಲಿ 9 ಲಕ್ಷದ 30 ಸಾವಿರ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿವೆ.

ಅಖಿಲ ಭಾರತ ಲಾರಿ ಸರಕು ಸೇವಾ ವಾಹನಗಳ ಮಾಲೀಕರ ಸಂಘ ಹಾಗೂ ರಾಜ್ಯ ಲಾರಿ ಮಾಲೀಕರ ಒಕ್ಕೂಟ,ತೈಲ ಸಾಗಿಸುವ ಲಾರಿ ಸಂಘ ಮುಷ್ಕರಕ್ಕೆ ಕೈ ಜೋಡಿಸಿವೆ. ರಾಜ್ಯದ 6 ಲಕ್ಷ ಸರಕು ಸಾಗಾಣೆ ಲಾರಿಗಳು ಸೇರಿ ದೇಶದ ಸುಮಾರು 70 ಲಕ್ಷಕ್ಕೂ ಅಧಿಕ ಲಾರಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಲಿವೆ. ಜೊತೆಗೆ ಇಂಧನ ಸಾಗಣೆ ಟ್ಯಾಂಕರ್, ಪ್ರವಾಸಿ ವಾಹನ ಕ್ಯಾಬ್, ಖಾಸಗಿ ಬಸ್, ಟೆಂಪೋ ಸೇರಿ ವಾಣಿಜ್ಯ ಸೇವಾ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಮುಷ್ಕರದಿಂದ ಕಟ್ಟಡ ಸಾಮಾಗ್ರಿಗಳು, ಮರಳು, ಜಲ್ಲಿ, ಸಿಮೆಂಟ್ ಸೇರಿದಂತೆ ಆಹಾರ ಸಾಮಾಗ್ರಿಗಳು, ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅತ್ಯವ್ಯಶಕ ವಸ್ತುಗಳ ಪೂರೈಕೆಯಲ್ಲೂ ಸಹ ವ್ಯತ್ಯಯವಾಗಲಿದೆ. ಸರ್ಕಾರ ಕೂಡಲೇ ಮದ್ಯಪ್ರವೇಶ ಸಮಸ್ಯೆ ಬಗೆಹರಿಸಬೇಕು ಅಂತ ಲಾರಿ ಮಾಲೀಕರು ಒತ್ತಾಯಿಸಿದ್ದಾರೆ.

ಲಾರಿ ಮುಷ್ಕರ- ಸಾರಿಗೆ ಇಲಾಖೆಯಿಂದ ನಿಯಂತ್ರಣ ಕೊಠಡಿ ಆರಂಭ

ರಾಜ್ಯ ಲಾರಿ ಮಾಲೀಕರು ಸರಕು ಸಾಗಣೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ಪ್ರತಿಯೊಂದು ಜಿಲ್ಲೆಯಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸುತ್ತಿದೆ. ಲಾರಿ ಮುಷ್ಕರದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಮತ್ತು ಇತರೆ ಅಹಿತಕರ ಘಟನೆಗಳ ಬಗ್ಗೆ ನಿಗಾ ವಹಿಸಲು ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗುತ್ತಿದೆ. ಹಾಗೆಯೇ, ಇಲ್ಲಿಂದ ಮಾಹಿತಿ ಪಡೆದುಕೊಂಡು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಹಾಗೂ ಪರಿಸ್ಥಿತಿ ಸುಧಾರಿಸಲು ಸಾರಿಗೆ ಆಯುಕ್ತರ ಕಚೇರಿಯಲ್ಲೂ ನಿಯಂತ್ರಣ ಕೊಠಡಿ ತೆರೆದಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಪ್ರಕಟನೆ ತಿಳಿಸಿದೆ. ಆದರೆ ಬೇಡಿಕೆ ಈಡೇರಿಸುವರಿಗೆ ಲಾರಿಗಳು ರಸ್ತೆಗಿಳಿಯೋದಿಲ್ಲ ಅಂತ ಟ್ಯಾಕ್ಸಿ ಸಂಘ ತಿಳಿಸಿದೆ.

ಒಟ್ಟಿನಲ್ಲಿ ಸರ್ಕಾರ ಹಾಗೂ ಲಾರಿ ಮಾಲೀಕರು ಜಗ್ಗಿ ಕುಸ್ತಿಯಲ್ಲಿ ದೇಶಾದ್ಯಂತ ಸಾರ್ವಜನಿಕ ತೊಂದರೆ ಅನುಭವಿಸಬೇಕಿದೆ. ನಾಡಿದ್ದಿನಿಂದ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತವಾಗಲಿದ್ದು, ಸರ್ಕಾರ ಕೂಡಲೇ ಮದ್ಯಪ್ರವೇಶಿ ಸಮಸ್ಯೆ ಬಗೆಹರಿಸುತ್ತಾ ಅನ್ನೋದನ್ನ ಕಾದುನೊಡಬೇಕಿದೆ.

ವರದಿ : ಕೃಷ್ಣಮೂರ್ತಿ, ಟಿವಿ5 ಬೆಂಗಳೂರು

Next Story

RELATED STORIES