Top

ಕೆಆರ್​ಎಸ್​ನಲ್ಲಿ ಕಾವೇರಿ ಸರ್ವ ಅಲಂಕಾರ ಭೂಷಿತೆ!

ಕೆಆರ್​ಎಸ್​ನಲ್ಲಿ ಕಾವೇರಿ ಸರ್ವ ಅಲಂಕಾರ ಭೂಷಿತೆ!
X

ಕಳೆದ ಕೆಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಆರ್​ಎಸ್ ಜುಲೈ ತಿಂಗಳಲ್ಲಿ ಭರ್ತಿಯಾಗಿದೆ. ಇದೀಗ ಜಲಾಶಯದ ಎಲ್ಲಾ ಗೇಟ್​ಗಳನ್ನು ತೆರೆಯುವ ಮೂಲಕ ನೀರನ್ನೂ ಪೂರ್ಣ ಪ್ರಮಾಣದಲ್ಲಿ ಹೊರಗೆ ಬಿಡಲಾಗುತ್ತಿದೆ. ಹೀಗೆ ಹರಿದು ಹೋಗುತ್ತಿರುವ ಕಾವೇರಿಯನ್ನು ಸರ್ವ ಅಲಂಕಾರ ಭೂಷಿತೆಯಾಗಿ ಅಧಿಕಾರಿಗಳು ಬೀಳ್ಕೊಡುತ್ತಿದ್ದಾರೆ. ಜನ ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಕೆಆರ್​ಎಸ್​ ಅಣೆಕಟ್ಟೆಯ 42 ಗೇಟ್​ಗಳನ್ನು ತೆರೆಯಲಾಗಿದೆ. ಎಲ್ಲಾ ಗೇಟ್​ಗಳಿಂದ ಕಾವೇರಿ ಭೋರ್ಗರೆದು ಹರಿಯತೊಡಗಿದ್ದಾಳೆ. ಈ ಅಪರೂಪದ ದೃಶ್ಯಕ್ಕೆ ವಿದ್ಯುತ್​ ದೀಪಾಲಂಕಾರದ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿದ್ದಾರೆ. ಹೀಗಾಗಿ ಪ್ರವಾಸಿಗರಿಗೆ ಇದು ಮತ್ತೊಂದು ಅಪರೂಪದ ದೃಶ್ಯವಾಗಿದೆ.

ಅಣೆಕಟ್ಟೆ ಭರ್ತಿಯಾಗಿರುವುದರಿಂದ ಪ್ರತಿದಿನ 80 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಬಿಡುಗಡೆ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್ ಎಸ್ ಜಲಾಶಯದಲ್ಲಿ ಜನಸಾಗರ ಆಗಮಿಸುತ್ತಿದೆ.

Next Story

RELATED STORIES