Top

ಮತ್ತೆ ಭೀಮಾತೀರಕ್ಕೆ ಏಂಟ್ರಿಕೊಟ್ಟ ಐಜಿಪಿ ಅಲೋಕ್ ಕುಮಾರ್..!

ಮತ್ತೆ ಭೀಮಾತೀರಕ್ಕೆ ಏಂಟ್ರಿಕೊಟ್ಟ ಐಜಿಪಿ ಅಲೋಕ್ ಕುಮಾರ್..!
X

ವಿಜಯಪುರ : ಭೀಮಾತೀರದ ಹಂತಕರು ಅಂದ್ರೆ ಸಾಕು ಇಡಿ ರಾಜ್ಯವೆ ಬೆಚ್ಚಿ ಬೀಳುತ್ತದೆ. ಭೀಮಾತೀರಕ್ಕೆ ಅಂಟಿರುವ ಈ ಕಳಂಕವನ್ನ ತೊಳೆಯಲು ಮತ್ತೊಂದು ಪ್ರಯತ್ನಕ್ಕೆ ಐಜಿಪಿ ಅಲೋಕ ಕುಮಾರ್ ಮುಂದಾಗಿದ್ದಾರೆ. ಹೀಗಾಗಿ ಭೀಮಾತೀರದಲ್ಲಿ ಪಾರ್ಥೆನಿಯಂ ನಂತೆ ಬೆಳೆದಿರುವ ಗನ್ ಮಾಫೀಯಾಗೆ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ. ಈ ಭಾಗದಲ್ಲಿ ನೀಡಲಾಗಿರುವ 500 ಕ್ಕೂ ಅಧಿಕ ಗನ್ ಲೈಸನ್ಸ್ ರದ್ದು ಪಡೆಸಲು ಕ್ರಮಕೈಗೊಂಡಿದ್ದಾರೆ. ಜೊತೆಗೆ ಅಕ್ರಮ ಪಿಸ್ತುಲು ವಹಿವಾಟು, ಶೂಟೌಟ್, ಮರಳು ದಂಧೆಯಂತ ಕ್ರಿಮಿನಲ್ ದಂಧೆಗಳಿಗೆ ಬ್ರೇಕ್ ಹಾಕಲು ಪ್ಲಾನ್ ಮಾಡಿದ್ದಾರೆ.

ಭೀಮಾತೀರದ ಅಂದ್ರೆ ಸಾಕು ಕಣ್ಮುಂದೆ ಬರೋದು ಆಗಾಗ್ಗ ಮಾರ್ಧನಿಸೋ ಗುಂಡಿನ ಸದ್ದು, ಅಕ್ರಮ ಕಂಟ್ರಿ ಪಿಸ್ತುಲಿನ ದಂಧೆ. ಸಧ್ಯ ಭೀಮಾತೀರವನ್ನ ರಾಜ್ಯ ಮಟ್ಟದಲ್ಲಿ ಕೆಟ್ಟ ರೀತಿಯಲ್ಲಿ ಬಿಂಬಿಸಿರುವ ಗನ್ ಮಾಪೀಯಾಗೆ ಬ್ರೆಕ್ ಹಾಕಲು ಬೆಳಗಾವಿ ಉತ್ತರ ವಲಯ ಐಜಿಪಿ ಅಲೋಕ ಕುಮಾರ್ ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಮತ್ತೆ ಭೀಮಾತೀರಕ್ಕೆ ಎಂಟ್ರಿ ಕೊಟ್ಟಿರುವ ಅಲೋಕ್ ಕುಮಾರ್ ನಗರದ ಪೊಲೀಸ್ ಚಿಂತನಾ ಹಾಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ಅವರು ಭೀಮಾತೀರದಲ್ಲಿ ಸಧ್ಯ ನೀಡಲಾಗಿರುವ ಗನ್ ಲೈಸನ್ಸ್ ಗಳನ್ನ ವಾಪಸ್ ಪಡೆಯಲು ನಿರ್ಧರಿಸಿದ್ದೇವೆ. ಇಂಡಿ ಉಪ ವಿಭಾಗದಲ್ಲಿ ಅನವಶ್ಯಕವಾಗಿ ನೀಡಲಾಗಿರುವ 514 ಗನ್ ಗಳ ಲೈಸನ್ಸ್ ರದ್ದು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಅಕ್ರಮವಾಗಿ ಇಟ್ಟುಕೊಂಡಿರುವ ಪಿಸ್ತುಲ್, ಗನ್ ಗಳ ಬಗ್ಗೆಯು ಮಾಹಿತಿ ಸಂಗ್ರಹಿಸಲಾಗ್ತಿದೆ. ಕಾನೂನು ಬಾಹಿರವಾಗಿ ಗನ್ ಇಟ್ಟುಕೊಂಡವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸೋದಾಗಿ ಹೇಳಿದ್ದಾರೆ. ಈ ಮೂಲಕ ಭೀಮಾತೀರದಲ್ಲಿರುವ ಗನ್ ಸಂಸ್ಕೃತಿಯನ್ನ ಮಟ್ಟಹಾಕುವ ಭರವಸೆ ಮೂಡಿಸಿದ್ದಾರೆ.

ಇನ್ನು ಐಜಿಪಿ ಅಲೋಕ್ ಕುಮಾರ್ ಭೀಮಾತೀರಕ್ಕೆ ಏಂಟ್ರಿ ಕೊಡ್ತಿದ್ದಂತೆ ಧರ್ಮರಾಜ್ ಎನ್ಕೌಂಟರ್ ಪ್ರಕರಣಕ್ಕು ಮರುಜೀವ ನೀಡುವ ಸೂಚನೆ ನೀಡಿದ್ದಾರೆ. ಗಂಗಾಧರ ನಿಗೂಢ ಕೊಲೆ ಬಹಿರಂಗವಾಗಿ ಆರೋಪಿಗಳು ಅಂದರ್ ಆಗ್ತಿದ್ದಂತೆ ಧರ್ಮರಾಜ್ ಏನ್ಕೌಂಟರ್ ಬಗ್ಗೆಯೂ ಅನುಮಾನಗಳು ಶುರುವಾಗಿದ್ವು. ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪಿಎಸ್ಐ ಗೋಪಾಲ್ ಹಳ್ಳೂರ್ ಧರ್ಮರಾಜ್ ಏನ್ಕೌಂಟರ್ ನಡೆಸಿದ್ದರಿಂದ ಇದು ಚಡಚಣ ಸಹೋದರರ ಹತ್ಯೆಗಾಗಿ ಮಹಾದೇವ ಸಾಹುಕಾರ್ ಭೈರಗೊಂಡ ಖಾಕಿಗಳಿಗೆ ನೀಡಿದ ಸೂಪಾರಿ ಅಂತ ಜನ್ರು ಮಾತನಾಡಿಕೊಳ್ಳೊಕೆ ಶುರು ಮಾಡಿದ್ದರು. ಹೀಗಾಗಿ ಧರ್ಮರಾಜ್ ಎನ್ಕೌಂಟರ್ ರಿ ಓಪನ್ ಮಾಡುವ ಬಗ್ಗೆಯೂ ಐಜಿಪಿ ಅಲೋಕ ಕುಮಾರ್ ಈಗ ಒಲವು ತೋರಿದ್ದಾರೆ.ಧರ್ಮನ ಫೇಕ್ ಏನ್ಕೌಂಟರ್ ಬಗ್ಗೆಯೂ ಗಮನ ಹರಿಸಿದ್ದೇವೆ ಎಂದು ಸ್ವತಃ ಐಜಿಪಿ ಅಲೋಕ ಕುಮಾರ್ ಹೇಳಿದ್ದಾರೆ...

ಸಧ್ಯ ಗನ್ ಮಾಫೀಯಾ ಬುಡಕ್ಕೆ ನೀರು ಬಿಡಲು ಸಜ್ಜಾಗಿರುವ ಐಜಿ ಅಲೋಕ್ ವಿಜಯಪುರದಲ್ಲೆ ಟೀಕಾಣಿ ಹೂಡಿದ್ದಾರೆ. ನಾಳೆ ಭೀಮಾತೀರದ ಉಮರಾಣಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಗ್ರಾಮದಲ್ಲಿ ಅಪರಾಧ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಶಾಂತಿ ಸಭೆ ನಡೆಸಲಿದ್ದಾರೆ. ಆದ್ರೆ ಇತ್ತ ಧರ್ಮರಾಜ್ ಏನ್ಕೌಂಟರ್ ಕೇಸ್ ರಿಓಪನ್ ಆದಲ್ಲಿ ಪಿಎಸ್ಐ ಹಳ್ಳೂರ್ ಸೇರಿ ಮತ್ತಷ್ಟು ಖಾಕಿ ಧಾರಿಗಳಿಗೆ ಚಳಿ ಜ್ವರ ಶುರುವಾಗೊದಂತು ಗ್ಯಾರಂಟಿ..!

ವರದಿ : ಶರಣು ಮಸಳಿ, ಟಿವಿ5 ವಿಜಯಪುರ

Next Story

RELATED STORIES