Top

ಆಂಗ್ಲರ ಮಡಿಲಿಗೆ ಏಕದಿನ ಸರಣಿ

ಆಂಗ್ಲರ ಮಡಿಲಿಗೆ ಏಕದಿನ ಸರಣಿ
X

ಲೀಡ್ಸ್ : ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾ ನಿರ್ಣಾಯಕ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಎಂಟು ವಿಕೆಟ್​ಗಳ ಸೋಲು ಅನುಭವಿಸಿ ಐತಿಹಾಸಿಕ ಸರಣಿ ಗೆಲ್ಲುವ ಅವಕಾಶದಿಂದ ವಂಚಿತವಾಯಿತು. ಇದರೊಂದಿಗೆ ಇಂಗ್ಲೆಂಡ್ 2-1 ಅಂತರದಿಂದ ಸರಣಿ ಗೆದ್ದು ಬೀಗಿತು.

ಲೀಡ್ಸ್ ಅಂಗಳದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಕೊಹ್ಲಿ ಪಡೆ ಎಡಗೈ ವೇಗಿ ಡೇವಿಡ್ ವಿಲ್ಲಿ ಮತ್ತು ಲೆಗ್ ಸ್ಪಿನ್ನರ್ ಆದೀಲ್ ರಶೀದ್ ದಾಳಿಗೆ ತತ್ತರಿಸಿ ಹೋಯಿತು. ಆರಂಭಿಕ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ ಮತ್ತು ಶಿಖರ್​ ಧವನ್ ಉತ್ತಮ ಆರಂಭ ನೀಡುವಲ್ಲಿ ಎಡವಿದ್ರು.

ರೋಹಿತ್ ಶರ್ಮಾ 2 ರನ್​ ಗಳಿಸಿ ಡೇವಿಡ್ ವಿಲ್ಲಿಗೆ ವಿಕೆಟ್ ಒಪ್ಪಿಸಿದ್ರು. ನಂತರ ಬಂದ ನಾಯಕ ಕೊಹ್ಲಿ , ಧವನ್ ಜೊತೆಗೂಡಿ ತಾಳ್ಮೆಯ ಇನ್ನಿಂಗ್ಸ್ ಕಟ್ಟಿ ಎರಡನೇ ವಿಕೆಟ್​ಗೆ 71 ರನ್​ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದ್ರು. ಆದರೆ ರಶೀದ್ ದಾಳಿಗೆ ಕ್ಯಾಪ್ಟನ್ ಕೊಹ್ಲಿ, ಸುರೇಶ್ ರೈನಾ ಔಟಾಗಿ ಪೆವಿಲಿಯನ್ ಸೇರಿದ್ರು.

ನಂತರ ಬಂದ ಧೋನಿ 42, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ತಲಾ 21 ರನ್ ಬಾರಿಸಿದ್ದರಿಂದ ತಂಡ ನಿಗದಿತ ಓವರ್ನಲ್ಲಿ 8 ವಿಕೆಟ್ ನಷ್ಟ್ಕಕೆ 256 ರನ್ ಗಳಿಸಿತು. ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ ಮತ್ತು ರಶೀದ್ ಖಾನ್ ತಲಾ ಮೂರು ವಿಕೆಟ್ ಪಡೆದು ಮಿಂಚಿದ್ರು. ಟೀಂ ಇಂಡಿಯಾ ಕೊನೆಯಲ್ಲಿ ನಿಗದಿತ ಓವರ್​ನಲ್ಲಿ 8 ವಿಕೆಟ್ ನಷ್ಟ್ಕಕೆ 256 ರನ್ ಗಳಿಸಿತು.

257 ರನ್​ಗಳ ಸವಾಲಿನ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ ಮನ್ ಜಾನಿ ಬೈರ್​ ಸ್ಟೋ (30) ಅವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. 27 ರನ್ ಗಳಿಸಿದ್ದ ಜೇಮ್ಸ್ ವಿನ್ಸ್ ರನೌಟ್ ಬಲೆಗೆ ಬಿದ್ರು. ನಂತರ ಬಂದ ನಾಯಕ ಇಯಾನ್ ಮಾರ್ಗನ್ ಜೋ ರೂಟ್​ಗೆ ಉತ್ತಮ ಸಾಥ್ ನೀಡಿದ್ರು. ಈ ಜೋಡಿ ಮುರಿಯದ ಮೂರನೇ ವಿಕೆಟ್​ಗೆ 186 ರನ್​ಗಳ ಬೃಹತ್ ಜೊತೆಯಾಟ ನೀಡಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಜೋ ರೂಟ್ 120 ಎಸೆತ ಎದುರಿಸಿ 10 ಬೌಂಡರಿಯೊಂದಿಗೆ ಶತಕ ಬಾರಿಸಿ ಏಕದಿನ ಕ್ರಿಕೆಟ್​ನಲ್ಲಿ 13ನೇ ಶತಕ ಬಾರಿಸಿ ಸಾಧನೆ ಮಾಡಿದ್ರು. ನಾಯಕ ಇಯಾನ್ ಮಾರ್ಗನ್ ಅಜೇಯ 88 ರನ್ ಸಿಡಿಸಿದ್ರು. ಕೊನೆಯಲ್ಲಿ ಇಂಗ್ಲೆಂಡ್ 44.3 ಓವರ್​ಗಳಲ್ಲಿ 2 ವಿಕೆಟ್ ನಷ್ಟ್ಕಕೆ 2060ರನ್ ಗಳಿಸಿ ಸರಣಿಯನ್ನ 2-1 ಅಂತರದಿಂದ ಗೆದ್ದುಕೊಂಡಿತು.

Next Story

RELATED STORIES