Top

ಐ ಪೋನ್‌ ವಾಪಸ್‌ಗೆ ಬಿಜೆಪಿ ಸಂಸದರು ನಿರ್ಧಾರ : ಅನಂತ್ ಕುಮಾರ್ ಟ್ವಿಟ್‌

ಐ ಪೋನ್‌ ವಾಪಸ್‌ಗೆ ಬಿಜೆಪಿ ಸಂಸದರು ನಿರ್ಧಾರ : ಅನಂತ್ ಕುಮಾರ್ ಟ್ವಿಟ್‌
X

ಬೆಂಗಳೂರು : ರಾಜ್ಯ ಸರ್ಕಾರವನ್ನು ತೀವ್ರ ಮುಜುಗರಕ್ಕೆ ದೂಡಿದ್ದ ಸಂಸದರಿಗೆ ಐ ಪೋನ್ ವೀಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅನಂತ್‌ ಕುಮಾರ್ ಟ್ವಿಟ್‌ ಮಾಡಿದ್ದಾರೆ. ಈ ಟ್ವಿಟ್‌ನಲ್ಲಿ ನಾನು ಈಗಾಗಲೇ ಐ ಪೋನ್‌ ಮತ್ತು ಬ್ಯಾಗನ್ನು ಮರಳಿಸಿದ್ದೇನೆ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವ ಅನಂತ್‌ ಕುಮಾರ್ ಮಾಡಿರುವ ಟ್ವಿಟ್‌ ನಲ್ಲಿ ಸಿಎಂ ಕುಮಾರಸ್ವಾಮಿಯವರೇ, ನನ್ನ ಬೆಂಗಳೂರು ಕಚೇರಿಗೆ ಕಾವೇರಿ ನದಿಗೆ ಸಂಬಂಧಪಟ್ಟ ದಾಖಲೆಗಳು ಹಾಗೂ ದುಬಾರಿ ಬೆಲೆಯ ಐ ಪೋನ್‌ ಅನ್ನು ಬ್ಯಾಗ್‌ನಲ್ಲಿ ನೀಡಲಾಗಿತ್ತು. ಆದರೆ, ನನ್ನ ಆದೇಶದ ಮೇರೆಗೆ ನನ್ನ ಕಾರ್ಯದರ್ಶಿ ಸೋಮವಾರವೇ ಬ್ಯಾಗನ್ನು ವಾಪಸ್ ಕಳಿಸಿದ್ದಾರೆ. ಈ ರೀತಿಯ ಉಡುಗೊರೆಗಳಿಗೆ ಸರಕಾರದ ಹಣವನ್ನು ಬಳಸುವುದು ತಪ್ಪು. ಹೀಗಾಗಿ ರಾಜ್ಯದ ಎಲ್ಲ ಬಿಜೆಪಿ ಸಂಸದರು ಐ ಪೋನ್‌ ಅನ್ನು ವಾಪಸ್ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.

https://twitter.com/AnanthKumar_BJP/status/1019292334306091008?ref_src=twsrc^tfw|twcamp^tweetembed|twterm^1019292334306091008&ref_url=https://vijaykarnataka.indiatimes.com/state/karnataka/bjp-mps-have-decided-to-give-back-i-phone-tweets-anant-kumar/articleshow/65033796.cms

ಅಲ್ಲದೆ, ಸರಿಯಾದ ಸಂಬಳ ಸಿಗದೆ ಪೌರಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿದಿನ ರೈತರು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು, ರಾಜ್ಯದಲ್ಲಿ ಮಳೆ ಹೆಚ್ಚಾದ ಕಾರಣ ಪ್ರವಾಹ ಉಂಟಾಗಿದ್ದು, ರೈತರ ಹಾಗೂ ಜನರ ಜೀವನವನ್ನು ಹಾಳು ಮಾಡುತ್ತಿದೆ. ಹೀಗಾಗಿ, ರಾಜ್ಯ ಸರಕಾರ ತನ್ನ ಬೊಕ್ಕಸದಲ್ಲಿರುವ ಹಾಗೂ ಜನರ ತೆರಿಗೆ ಹಣದ ಪ್ರತಿ ಪೈಸೆಯನ್ನೂ ಜನರ ಕಷ್ಟವನ್ನು ಪರಿಹರಿಸಲು ವಿನಿಯೋಗಿಸಿ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಹೊಸದಿಲ್ಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಐ ಪೋನ್ ಗಿಫ್ಟ್ ನೀಡಿರುವ ಬಗ್ಗೆ ತಮಗೆ ಗೊತ್ತೇ ಇಲ್ಲ ಎಂದು ಹೇಳಿದ್ದರು. ಆನಂತ್ರ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಕೂಡ ಟ್ವಿಟ್ ಮಾಡಿದ್ದು, ರಾಜ್ಯದ ಬಿಜೆಪಿಯ ಎಲ್ಲಾ ಸಂಸದರಿಗೆ ಐ ಪೋನ್‌ ವಾಪಾಸ್‌ ನೀಡಲು ನಿರ್ಧಾರಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್‌, ಈ ಗಿಫ್ಟ್‌ ಅನ್ನು ನಾನೇ ಕೊಟ್ಟಿದ್ದು ಎಂದು ಮಂಗಳವಾರ ಸ್ಪಷ್ಟಪಡಿಸಿದ್ದರು.

ಒಟ್ಟಾರೆ ರಾಜ್ಯದಿಂದ ಸಂಸದರಿಗೆ ದುಬಾರಿ ಬೆಲೆಯ ಐ ಪೋನ್‌ ಹಾಗೂ ಬ್ಯಾಗ್‌ ವಿಚಾರ ರಾಜ್ಯದಲ್ಲಿ ದೊಡ್ಡ ಬಿರುಗಾಳಿಯನ್ನು ಎಬ್ಬಿಸಿದೆ. ಈ ಮೂಲಕ ಕೇಂದ್ರ ಬಿಜೆಪಿ ಸಂಸದರಲ್ಲಿ ಅನೇಕರು ರಾಜ್ಯ ಸರ್ಕಾರದ ನೀಡಿದ್ದ ಬ್ಯಾಗ್‌, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಾವೇ ಸ್ವಂತದ್ದಾಗಿ ಕೊಟ್ಟಿದ್ದೇನೆ ಎನ್ನಲಾದ ಐ ಪೋನ್‌ನನ್ನು ವಾಪಾಸ್ ನೀಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಮುಂಬರುವ ಲೋಕಸಭಾ ಚುನಾವಣೆಗೆ ಸಂಸದರನ್ನು ಒಲಿಸಿಕೊಳ್ಳಲು ಮಾಡಿದ್ದ ಪ್ಲಾನ್‌ ಉಲ್ಟಾ ಹೊಡೆದಿದೆ ಎನ್ನಲಾಗಿದೆ.

Next Story

RELATED STORIES