Top

ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ 23 ಅಂಶಗಳ ಟಾಸ್ಕ್

ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ 23 ಅಂಶಗಳ ಟಾಸ್ಕ್
X

ವಿಶೇಷ ವರದಿ : ಪವನ್ ಕುಮಾರ್, ಪೊಲಿಟಿಕಲ್ ಬ್ಯುರೋ, ಟಿವಿ5

ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಅಮಿತ್ ಶಾ ನೀಡಿದ್ದ 19 ಅಂಶಗಳ ಟಾಸ್ಕ್ ಗಳು ವರ್ಕೌಟ್ ಆಗಿದ್ವು.ಆದ್ದರಿಂದಲೇ ಬಿಜೆಪಿ 104 ಸೀಟು ಗೆದ್ದು ಬೀಗಿತ್ತು. ಈಗ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಪ್ರಚಂಡ ಗೆಲುವು ಸಾಧಿಸಲು 23 ಅಂಶಗಳ ಟಾಸ್ಕ್‌ ಮೂಲಕ ತಯಾರಾಗಿದೆ.

ಜುಲೈ 28ರಂದು ಟಾಸ್ಕ್ ಜೊತೆ ಬೆಂಗಳೂರಿಗೆ ಬರುತ್ತಿರುವ ಅಮಿತ್ ಶಾ

ವಿಧಾನಸಭೆ ಚುನಾವಣೆ ವೇಳೆ ನಿರಂತರ ಸಭೆ ನಡೆಸಿ 40 ರಿಂದ 104 ಕ್ಷೇತ್ರಗಳಲ್ಲಿ ಕಮಲ ಅರಳಲು ಕಾರಣರಾದ ಅಮಿತ್ ಶಾ ಮತ್ತೇ ರಾಜ್ಯಕ್ಕೆ ಕಾಲಿಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 28 ಸ್ಥಾನಗಳ ಗುರಿ ಹೊತ್ತು ರಾಜ್ಯಕ್ಕೆ ಬರುತ್ತಿರುವ ಅಮಿತ್ ಶಾ ದೋಸ್ತಿಗಳಿಗೆ ಶಾಕ್ ನೀಡಲು ತಂತ್ರ ರೂಪಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅನುಸರಿಸಿದ 19 ಟಾಸ್ಕ್ ಗಳ ಜೊತೆಗೆ ಹೆಚ್ಚುವರಿಯಾಗಿ 4 ಟಾಸ್ಕ್ ನೀಡಿ ಒಟ್ಟು 23 ಅಂಶಗಳ ಸೂತ್ರ ನೀಡಲು ಮುಂದಾಗಿದ್ದಾರೆ.

ಅಲ್ದೆ ಜುಲೈ 28ರ ಸಭೆಯಲ್ಲಿ ಲೋಕಸಭೆ ಚುನಾವಣೆ ಜವಾಬ್ದಾರಿ ಹೊರುವ ಪ್ರತಿ ಕ್ಷೇತ್ರದ ನಾಯಕರು ಚುನಾವಣೆ ಮುಕ್ತಾಯದವರೆಗೂ ಅನುಸರಿಸಲೇಬೇಕು ಅಂತ ಖಡಕ್ ಸೂಚನೆ ನೀಡಲಿದ್ದಾರೆ.

ಬಿಜೆಪಿ ಫಾರ್ಮುಲಾ 23 ಅಂಶಗಳ ಟಾಸ್ಕ್‌ ಕೆಳಗಿನಂತಿವೆ..

1. ವಾರದಲ್ಲಿ ವಾಸ್ತವ್ಯ ಸಹಿತಿ ಎರಡು ದಿನ ಪ್ರವಾಸ

2. ಪ್ರತಿ ಮತಗಟ್ಟೆಗೆ ಶಕ್ತಿಕೇಂದ್ರದ ಪ್ರಮುಖರ ನೇಮಕ

3. ಮಂಡಳದ ವಿಸೃತ ಸಭೆ ನಡೆಸಲು ಸೂಚನೆ

4. ಶಕ್ತಿಕೇಂದ್ರದ ಪ್ರಮುಖರು ವಾರದಲ್ಲಿ ಎರಡು ದಿನ ಪ್ರವಾಸ ಕಡ್ಡಾಯ

5. ಕಳೆದ ಎರಡು ಲೋಕಸಭೆ ಚುನಾವಣೆ ಆಧಾರದ ಮೇಲೆ ಮತಗಟ್ಟೆಗಳ A B C ಎಂದು ವರ್ಗಿಕರಸಿಬೇಕು.

6. ಮತಗಟ್ಟೆ ಸಶಕ್ತೀಕರಣ ಪೂರ್ಣಗೊಳಿಸಬೇಕು.

7. ಎಸ್ ಇ ಎಸ್ಟಿ ಓಬಿಸಿ ಸಮುದಾಯದವರನ್ನು ಕನಿಷ್ಠ 10 ಹೊಸ ಸದಸ್ಯತ್ವ ಮಾಡಬೇಕು.

8. ಸಹಕಾರಿ ನಿರ್ದೇಶಕರ ಮತ್ತು ಸ್ವಸಹಾಯ ಸಂಘಗಳ ಸದಸ್ಯರ ಪಟ್ಟಿ ಸಿದ್ಧಪಡಿಸಬೇಕು.

9. ಮಂದಿರ, ಮಠ, ಸಾಧು-ಸಂತರ ಪಟ್ಟಿ ಸಿದ್ದಪಡಿಸಿ ಚರ್ಚಿಸಬೇಕು.

10. ಪಂಚಾಯಿತಿ ಚುನಾವಣೆ ಸೂತವರ ಪಟ್ಟಿ ಸಿದ್ಧಪಡಿಸಬೇಕು, ಪಕ್ಷಕ್ಕೆ ಸೇರ್ಪಡಿಸಿಕೊಳ್ಳಬೇಕು.

11. ಸ್ಮಾರ್ಟ್ ಪೋನ್ ಇರುವವರ ಪಟ್ಟಿ ತಯಾರಿಸಬೇಕು.

12. ಮೋಟರ್ ಬೈಕ್ ಇರುವವರ ಪಟ್ಟಿ ಸಿದ್ಧಪಡಿಸಬೇಕು.

13. ಪ್ರತಿಮತಗಟ್ಟೆಯಲ್ಲಿ ಈ ಭಾರಿ ಬಿಜೆಪಿ ಸರ್ಕಾರ ಎಂಬ ಘೋಷಣೆಯುಳ್ಳ ಗೋಡೆ ಬರಹ 5 ಸ್ಥಳದಲ್ಲಿ ಬರೆಯಬೇಕು.

14. ಕಾಂಗ್ರೆಸ್ ಮತ್ತು ಜೆಡಿಎಸ್ ಸಂಸದರ ಪ್ರತಿನಿಧಿಸುವ ಕ್ಷೇತ್ರದ ಚಾರ್ಜ್ ಶೀಟ್ ತಯಾರಿಸಬೇಕು.

15. ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 8-10 ಪ್ರಮುಖರ ಕೋರ್ ಕಮಿಟಿ ರಚನೆ.

16. ಮತಗಟ್ಟೆಯ ಪ್ರತಿ ಬೂತ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜಾರೋಹಣ

17. ನವಶಕ್ತಿ ಸಮಾವೇಶ ಕಡ್ಡಾಯವಾಗಿ ಆಯೋಜಿಸಬೇಕು

18. ಸಾಮಾಜಿಕ ಜಾಲತಾಣ ಕಾರ್ಯಾಗಾರ ಮಾಡಬೇಕು

19. ಪ್ರಣಾಳಿಕೆ ಮತ್ತು ಚಾರ್ಜ್ ಶೀಟ್ ಕಾರ್ಯಾಗಾರ ಮಾಡಬೇಕು

20. ವಾಟ್ಸ್ ಆಫ್ ಗ್ರುಪ್ ಗಳ ರಚನೆ

21. ಚುನಾವಣೆ ವಿಸ್ತಾರಕರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳಬೇಕು.

22. ಹೊರ ರಾಜ್ಯದ ಕ್ಷೇತ್ರ ಸಂಯೋಜಕರ ಜೊತೆ ಕಾರ್ಯ ವಿಭಜನೆ ಮಾಡಿಕೊಳ್ಳಬೇಕು.

23. ಪೇಜ್ ಪ್ರಮುಖರ ನೇಮಕಾತಿಗೆ ಚಾಲನೆ ಕೊಡಬೇಕು.

ಇನ್ನು ಅಮಿತ್ ಶಾ ಜುಲೈ 28ರ ಸಭೆಯಲ್ಲಿ ಮೇಲಿನ ಟಾಸ್ಕ್ ಗಳ ಬಗ್ಗೆ ರಾಜ್ಯ ನಾಯಕರಿಂದ ಪೂರ್ವ ಸಿದ್ಧತೆ ಮಾಹಿತಿ ಪಡೆಯಲಿದ್ದಾರೆ. ಹೀಗಾಗಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ರಾಜ್ಯ ಬಿಜೆಪಿ ಘಟಕದ ಪ್ರಮುಖ ನಾಯಕರ ಜೊತೆ ಚುನಾವಣೆ ಸಿದ್ದತಾ ವರದಿ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಒಟ್ಟಿನಲ್ಲಿ ಹಲವು ತಂತ್ರಗಳಿಂದ ವಿಧಾನಸಭೆ ಚುನಾವಣೆಯಲ್ಲಿ ವಿರೋಧಿ ಪಕ್ಷಗಳ ನಿದ್ದೆಗೆಡಿಸಿದ್ದ ಅಮಿತ್ ಶಾ, ಲೋಕಸಭೆ ಚುನಾವಣೆಗೆ ಮತ್ತೇ ರಾಜ್ಯಕ್ಕೆ ಬರ್ತಿರೋದು ವಿರೋಧ ಪಕ್ಷಗಳ ಪಾಳೆಯದ ತಲೆನೋವಿಗೆ ಕಾರಣವಾಗಿದೆ.

Next Story

RELATED STORIES