Top

ಈ ಅಜ್ಜಿಯ ತಪಸ್ಸಿನ ಪ್ರಭಾವದಿಂದ ರಾಜ್ಯದಲ್ಲಿ ಏನಾಗಿದೆ ಗೊತ್ತಾ?

ಈ ಅಜ್ಜಿಯ ತಪಸ್ಸಿನ ಪ್ರಭಾವದಿಂದ ರಾಜ್ಯದಲ್ಲಿ ಏನಾಗಿದೆ ಗೊತ್ತಾ?
X

ಕೊಪ್ಪಳ: ಮಳೆಗಾಗಿ ಅಜ್ಜಿಯೊಬ್ಬರು ಉಪವಾಸದ ಜೊತೆಗೆ ತಪಸ್ಸಿಗೆ ಕುಳಿತ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಬಿಕನಳ್ಳಿ ಗ್ರಾಮದಲ್ಲಿ ಹುಲಿಗೆಮ್ಮ ಅಜ್ಜಿ ಮಳೆಗಾಗಿ ಉಪವಾಸ ಕುಳಿತಿದ್ದಾರೆ.ಅಜ್ಜಿ ರೈತರ ಸಂಕಷ್ಟಕ್ಕೆ ಈ ಉಪವಾಸ ಕುಳಿತಿದ್ದು, ಒಂದು ಹನಿ ನೀರು ಕುಡಿಯದೇ ದೇವರ ಧ್ಯಾನದಲ್ಲಿ ಕಣ್ಣು ಮುಚ್ಚಿ ಕುಳಿತಿದ್ದಾರೆ.

ಈ ಹಿಂದೆ ಕೊಪ್ಪಳದ ಹಿರಿಸಿಂದೋಗಿಯಲ್ಲಿ ಮಳೆಗಾಗಿ ಹುಲಿಗೆಮ್ಮ 11ದಿನ ಉಪವಾಸ ವೃತ ಮಾಡಿದ್ದರು. ಈ ವೇಳೆ ಮಳೆಯಾದ ಕಾರಣ ಅದೇ ನಂಬಿಕೆಯ ಮೇಲೆ ಅಜ್ಜಿ ಮತ್ತೆ ಉಪವಾಸ ಕುಳಿತಿದ್ದಾರೆ. ಇನ್ನು ಅಜ್ಜಿಗೆ ಬಿಸರಳ್ಳಿ, ಮೈನಳ್ಳಿ, ಹಿರಿಸಿಂಧೋಗಿ, ಹನವಾಳ, ಬಿಕನಹಳ್ಳಿ ಗ್ರಾಮಸ್ಥರು ಸ್ಥಳದಲ್ಲಿ ಬೀಡು ಬಿಟ್ಟು, ಹಗಲು ರಾತ್ರಿ ಭಜನೆ ದೇವರ ಹಾಡು ಹಾಡುತ್ತ ಹುಲಿಗೆಮ್ಮ ಅಜ್ಜಿಗೆ ಸಾಥ್ ನೀಡುತ್ತಿದ್ದಾರೆ. ಗ್ರಾಮದಿಂದ ಬಂದ ಜನರಿಗೆ ದಾಸೋಹ ವ್ಯವಸ್ಥೆ ಕೂಡ ಮಾಡಲಾಗಿದೆ.

https://www.youtube.com/watch?v=xAL1Cf6kUN0&feature=youtu.be

Next Story

RELATED STORIES