Top

ದಾವಣಗೆರೆಯಲ್ಲಿ ಸರ್ಕಾರಿ ರೇಷ್ಮೆ ನೂಲು ನೌಕರರ ಪ್ರತಿಭಟನೆ

ದಾವಣಗೆರೆಯಲ್ಲಿ ಸರ್ಕಾರಿ ರೇಷ್ಮೆ ನೂಲು ನೌಕರರ ಪ್ರತಿಭಟನೆ
X

ದಾವಣಗೆರೆ : ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತಿರುವ ನೌಕರರು, ಕುಟುಂಬ ಸಮೇತವಾಗಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿರುವ ಸಿಬ್ಬಂದಿ, ಸಂಬಂಳವಿಲ್ಲದೇ ಜೀವನ ನಿರ್ವಹಣೆ ಹೇಗೆ ಎಂದು ಕಂಗಾಲಾಗಿರುವ ನೌಕರ ವರ್ಗ ಈ ದೃಶ್ಯ ಕಂಡು ಬಂದಿದ್ದು, ದಾವಣಗೆರೆ ತಾಲೂಕಿನ ತೋಳಹುಣಸೆ ಸಮೀಪದ ಸರ್ಕಾರಿ ರೇಷ್ಮೆ ನೂಲು ಬಿಚ್ಚುವ ಕಿರು ಘಟಕದಲ್ಲಿ.

ದಾವಣಗೆರೆಯ ರೇಷ್ಮೆ ನೂಲು ಕಾರ್ಖಾನೆಯಲ್ಲಿ 1985 ರಲ್ಲಿ ರೇಷ್ಮೆ ಇಲಾಖೆಯಲ್ಲಿ ರೀಲರ್, ಕುಕ್ಕರ್ ಆಗಿ ಕೆಲಸಕ್ಕೆ ಸೇರಿದವರು. ರಾಜ್ಯದಲ್ಲಿ ದಾವಣಗೆರೆ ತಾಲೂಕಿನ ತೋಳಹುಣಸೆ, ಚಾಮರಾಜನಗರ ಜಿಲ್ಲೆಯ 5 ಕಡೆ ರೇಷ್ಮೆ ನೂಲು ಬಿಚ್ಚುವ ಕಿರು ಘಟಕ ತೆರೆಯಲಾಗಿತ್ತು. ಪ್ರಾರಂಭದಲ್ಲಿ ಚನ್ನಾಗಿಯೇ ನಡೆಯುತ್ತಿದ್ದ ಘಟಕಗಳು 2014 ರ ವೇಳೆ ರೇಷ್ಮೆ ಗೂಡುಗಳು ಇಲ್ಲದೆ ಲಾಕ್ ಔಟ್ ಆಗಿದೆ.

ಹಾಗಾಗಿ ರೇಷ್ಮೆ ಇಲಾಖೆ ಡಿ ಗ್ರೂಪ್ ನೌಕರರಿಗೆ ಮೂರು ವರ್ಷಗಳ ಕಾಲ ಅರ್ಧ ಸಂಬಳ ಕೊಟ್ಟು ಮನೆಯಲ್ಲಿ ಕೂರಿಸಿತ್ತು. ಬಳಿಕ 2017 ನವೆಂಬರ್ ನಲ್ಲಿ ಸಿಬ್ಬಂದಿಯನ್ನ ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಯ ರೇಷ್ಮೆ ಇಲಾಖೆಗೆ ವರ್ಗಾವಣೆ ಮಾಡಿತ್ತು. ಬಳಿಕ 8 ತಿಂಗಳು ಸಂಬಳವೇನೋ ಕೊಟಿತ್ತು, ಆದರೇ ಕಳೆದ 9 - 10 ತಿಂಗಳಿನಿಂದ ಸಂಬಳವಿಲ್ಲದೆ ಡಿಗ್ರೂಸ್ ನೌಕರರು ಹಾಗೂ ಅವರ ಕುಟುಂಬ ಇದೀಗ ಬೀದಿಗೆ ಬಿದ್ದಿವೆ.

ತೋಳಹುಣಸೆ ಘಟಕದಲ್ಲಿ 42 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಅವರೆಲ್ಲಾ ಈಗ ಬೇರೆ ಬೇರೆ ಜಿಲ್ಲೆಗೆ ವರ್ಗಾವಣೆಯಾಗಿದ್ದು, ಕೈಯಿಂದ ಹಣ ಹಾಕಿಕೊಂಡು ಕೆಲಸಕ್ಕೆ ಹೋಗುತ್ತಿದ್ದಾರೆ. ಸಂಬಳ ಇಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ. ಈಗಾಗಲೇ ಕೆಲವರು ನಿವೃತ್ತಿ ಹಂಚಿನಲ್ಲಿದ್ದು, ಬಿಪಿ, ಶುಗರ್ ಸೇರಿದಂತೆ ಇತರೆ ಖಾಯಿಲೆಗಳಿಗೆ ತುತ್ತಾಗಿದ್ದಾರೆ. ಅತ್ತ ಔಷಧ ತೆಗೆದುಕೊಳ್ಳಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ಕಳೆದ 10 ತಿಂಗಳ ಸಂಬಳ ಪಾವತಿಸುವಂತೆ ನೌಕರರು ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿ, ರೇಷ್ಮೆ ಇಲಾಖೆ ಸಚಿವ ಸಾ.ರಾ.ಮಹೇಶ್ ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಒಟ್ಟಾರೆ ರೇಷ್ಮೆ ಇಲಾಖೆ ನೌಕರರು ಇದೀಗ ಬೀದಿಗೆ ಬಿದ್ದಿದ್ದು, ಅಧಿಕಾರಿಗಳು ಜಾಣ ಕುರುಡುತನ ತೋರಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಡಿ ಗ್ರೂಪ್ ನೌಕರರ ಸಂಕಷ್ಟಕ್ಕೆ ಸ್ಪಂದಿಸಿ, ಶೀಘ್ರವೇ ಸಂಬಳ ನೀಡಲಿ ಎಂಬುದು ನಮ್ಮ ಆಶಯ.

ವರದಿ : ಪ್ರವೀಣ್ ಬಾಡ, ಟಿವಿ5 ದಾವಣಗೆರೆ

Next Story

RELATED STORIES