ವಾಹನ ಸವಾರರಿಗೆ ಹೆಲ್ಮೆಟ್ ತೊಡಿಸಲು ರಸ್ತೆಗೆ ಬಂದ ಗಣೇಶ

X
TV5 Kannada17 July 2018 10:24 AM GMT
ರಸ್ತೆ ಸಂಚಾರ ನಿಯಮಗಳನ್ನು ವಾಹನ ಸವಾರರು ಪದೇಪದೆ ಉಲ್ಲಂಘಿಸುತ್ತಿರುವುದರಿಂದ ಅವರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಹಲವಾರು ಕ್ರಿಯಾಶೀಲ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ಧಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಯಮ ಕಾಣಿಸಿಕೊಂಡಿದ್ದರೆ, ಮಂಗಳವಾರ ಮೈಸೂರಿನಲ್ಲಿ ಗಣೇಶ ರೋಡಿಗೆ ಇಳಿದಿದ್ದಾನೆ.
ಹೌದು, ಹೆಲ್ಮೆಟ್ ಧರಿಸಿ ಸಂಚರಿಸುವಂತೆ ಮೈಸೂರಿನ ವಾಹನ ಸವಾರರಿಗೆ ವಿಘ್ನವಿನಾಶಕ ಗಣೇಶ ಸ್ವತಃ ರೋಡಿಗೆ ಇಳಿದು ಸಂದೇಶ ಸಾರಿದ್ದಾನೆ. ಕೆಲವರಿಗೆ ಗುಲಾಬಿ ಹೂ ನೀಡಿದರೆ, ಇನ್ನು ಕೆಲವರಿಗೆ ಹೆಲ್ಮೆಟ್ ತೊಡಿಸಿದ್ದಾನೆ. ಇನ್ನಾದರೂ ನನ್ನ ಮಾತು ಕೇಳಿ ಎಂದು ಸೂಚಿಸಿದ್ದಾನೆ.
ರಸ್ತೆ ಸುರಕ್ಷಿತ ಹಾಗೂ ಸಂಚಾರ ನಿರ್ವಾಹಣೆ ದಿನಾಚರಣೆ ಅಂಗವಾಗಿ ಮೈಸೂರಿನ ಪೊಲೀಸರು ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಗರದ ರೈಲ್ವೆ ವೃತ್ತದಲ್ಲಿ ಹಮ್ಮಿಕೊಂಡಿದ್ದ ವಿಭಿನ್ನ ಕಾರ್ಯಕ್ರಮದಲ್ಲಿ ಗಣೇಶನ ವೇಷಧರಿಸಿದ್ದ ಕಲಾವಿದ ಜಾಗೃತಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ.
Next Story