Top

ರಿವೆಂಜ್ ಪಾಲಿಟಿಕ್ಸ್‌ಗೆ ಮಾಜಿ ಸಚಿವ ಹೆಚ್‌ ಆಂಜನೇಯ ಕಿಡಿ

ರಿವೆಂಜ್ ಪಾಲಿಟಿಕ್ಸ್‌ಗೆ ಮಾಜಿ ಸಚಿವ ಹೆಚ್‌ ಆಂಜನೇಯ ಕಿಡಿ
X

ಚಿತ್ರದುರ್ಗ : ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ದ್ವೆಷದ ರಾಜಕಾರಣ ಮಾಡುತ್ತಿದ್ದಾರೆ. ಟೆಂಡರ್ ಅಗಿ ವರ್ಕ್ ಆರ್ಡರ್ ಅಗಿರುವ ಸುಮಾರು 50 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ, ಇದನ್ನು ಕೈ ಬಿಡಬೇಕು. ಇಲ್ಲದೆ ಇದ್ರೆ ಉಗ್ರ ಸ್ವರೂಪದ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಎಚ್ಚರಿಕೆ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲಾ ಪತ್ರಿಕರ್ತರ ಭವನದಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಚಂದ್ರಪ್ಪ ವಿರುದ್ದ ಸುಳ್ಳು ಹೇಳುವುದೇ ಅವನ ದೊಡ್ಡ ಕಾಯಕವಾಗಿದೆ. ಆತನ ತಲೆಯಲ್ಲಿ ಏನೂ ಇಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ಮಾಡಿದ್ರು, ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಆಗಿರುವ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು. ಆದ್ರೆ ಈಗಿನ ಶಾಸಕ ಅದನ್ನೆಲ್ಲಾ ತಡೆಯುತ್ತಿದ್ದಾನೆ. ಆತನಿಗೆ ಜ್ಞಾನ, ತಿಳುವಳಿಕೆ ಇದ್ರೆ ಆಗಿರುವ ಎಲ್ಲಾ ಯೋಜನೆಗಳನ್ನು ತಡೆಯದೇ ಮುಂದುವರಿಸಬೇಕು ಎಂದು ಕಿಡಿಕಾರಿದರು.

ಇನ್ನೂ ಮುಂದುವರೆದು ಮಾತನಾಡಿದ ಮಾಜಿ ಸಚಿವ ಹೆಚ್ ಆಂಜನೇಯ, ಬಿಜೆಪಿ ಶಾಸಕ ಎಂ.ಚಂದ್ರಪ್ಪ ವಿನಾಕಾರಣ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಇದು ಹೀಗೆ ಮುಂದುವರೆದರೇ, ಅವರ ವಿರುದ್ದ ಉಗ್ರವಾದ ಹೋರಾಟ ಮಾಡುತ್ತೇನೆ ಎಚ್ಚರಿಕೆ ನೀಡಿದುರ..

ನಾನು ಸೋತಿದ್ದೇನೆ ಎಂದು ಕೈ ಕಟ್ಟಿಕೊಂಡು ಕೂರುವವನಲ್ಲ ನಾನು ಹೋರಾಟದಿಂದ ಬಂದವನು. ನಾವು ಮಾಡಿರುವ ಅಭಿವೃದ್ದಿ ಕಾರ್ಯಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ರು. ಜನಾದೇಶಕ್ಕೆ ತಲೆಬಾಗಿ ಎರಡು ತಿಂಗಳು ಸುಮ್ಮನೆ ಇದ್ದೆ ಆದ್ರೆ ಇನ್ನೂ ಮುಂದೆ ಸುಮ್ಮನೆ ಕೈ ಕಟ್ಟಿ ಕೂರಲ್ಲ, ನಾಳೆ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡ್ತೇನೆ ಎಂದು ತಿಳಿಸಿದರು.

Next Story

RELATED STORIES