Top

ಬ್ಯಾಗ್ ಸರಕಾರದ್ದು, ಐ-ಫೋನ್ ನನ್ನದು : ಡಿಕೆಶಿ

ಬ್ಯಾಗ್ ಸರಕಾರದ್ದು, ಐ-ಫೋನ್ ನನ್ನದು : ಡಿಕೆಶಿ
X

ನಾನೇನು ಸಂಸದರಿಗೆ ಲಂಚ ಕೊಟ್ಟಿಲ್ಲ. ಐಫೋನ್ ನೀಡಿರುವುದು ನನ್ನ ಸ್ವಂತ ಹಣದಿಂದ. ಸರಕಾರದಿಂದ ಬರೀ ಬ್ಯಾಗ್ ಕೊಟ್ಟಿದ್ದೇವೆ. ವಿಚಾರ- ವಿನಿಮಯ, ದಾಖಲೆ ಹಂಚಿಕೊಳ್ಳಲು ಕೊಟ್ಟಿದ್ದೇವೆ. ಇದೇನು ಕ್ರೈಮಾ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸರಕಾರದ ವತಿಯಿಂದ ಸಂಸದರಿಗೆ ದುಬಾರಿಗೆ ಬೆಲೆಯ ಐಫೋನ್ ಉಡುಗೊರೆಯಾಗಿ ನೀಡಿರುವ ಕುರಿತು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್​, ಐ ಫೋನ್ ಕೊಟ್ಟಿರೋದ್ರಲ್ಲಿ ತಪ್ಪೇನಿದೆ ಎಂದು ಮರುಪ್ರಶ್ನಿಸಿದರು.

ಐಫೋನ್ ಕೊಟ್ಟಿರುವುದು ದೊಡ್ಡ ಅಪರಾಧ ಅನ್ನುವ ತರಹ ಹೇಳ್ತಿದ್ದೀರಲ್ಲಾ, ನಾನು ಮಾಡಿದ್ದು ತಪ್ಪು ಎಂದಾದರೆ ನೇಣಿಗೆ ಹಾಕಿ. ಐಫೋನ್ ನೀಡಿರುವ ಬಗ್ಗೆ ಕೆಲ ಬಿಜೆಪಿ ಸಂಸದರ ಸಲಹೆಗಳನ್ನು ಒಪ್ಪಿಕೊಳ್ಳುವೆ. ಸಂಸದರ ಗೌರವಾರ್ಥವಾಗಿ ಕೊಟ್ಟಿದ್ದೇನೆ. ನಾನು ದೆಹಲಿಗೆ ಹೋದಾಗ ನಮಗೂ ವಾಚು , ಫೋನು ಕೊಟ್ಟಿದ್ದಾರೆ. ಈ ಹಿಂದೆ ಇಂಧನ ಸಚಿವ ಆದಾಗಲೂ ಐ-ಫೋನ್ ಕೊಟ್ಟಿದ್ದೇನೆ ಎಂದು ಡಿಕೆಶಿ ವಿವರಿಸಿದರು.

ಐಫೋನ್ ನೀಡಿದ್ದನ್ನು ಹಳದಿ ಕಣ್ಣಿಂದ ನೋಡಬಾರದು. ಹೃದಯ ಶ್ರೀಮಂತಿಕೆಯಿಂದ ನೋಡಿ. ಐ ಫೋನ್ ಕೊಟ್ಟ ಕಾರಣ ಬಿಜೆಪಿ ಸಂಸದರೆ ನನಗೆ ಫೋನ್ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ. ನಾನು ಅವರ ಹೆಸರು ಬಹಿರಂಗ ಪಡಿಸಲ್ಲ. ರಾಜೀವ್ ಚಂದ್ರಶೇಖರ್ ಐ ಫೋನ್ ತಿರಸ್ಕರಿಸಿದ ವಿಚಾರ. ರಾಜೀವ್ ಚಂದ್ರಶೇಖರ್ ಶ್ರೀಮಂತರು. ಅವರಿಗೆ ಅಗತ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

Next Story

RELATED STORIES