Top

ನಡು ರಸ್ತೆಯಲ್ಲೇ ಚಾಕು ಹಿಡಿದು ಸಾರ್ವಜನಿಕರಿಗೆ ಅವಾಜ್.!!

ನಡು ರಸ್ತೆಯಲ್ಲೇ ಚಾಕು ಹಿಡಿದು ಸಾರ್ವಜನಿಕರಿಗೆ ಅವಾಜ್.!!
X

ಆನೇಕಲ್ : ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲಿ ಬಾಕು ಹಿಡಿದು ಅವಾಜ್ ಹಾಕಿದ್ದ ರಾಮಚಂದ್ರ ಅಲಿಯಾಸ್ ಜೆಸಿ ರಾಮಚಂದ್ರನ ದಾಂದಲೆ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಅರೋಪಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ‌. ಹುಟ್ಟುಹಬ್ಬದ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂದಿಸಿದಂತೆ ನಿನ್ನೆ ರಾತ್ರಿ ಎಲೆಕ್ಟ್ರಾನಿಕ್ಸ್ ಸಿಟಿಗೆ ಸಮೀಪದಲ್ಲಿ ಇರುವ ಶಾಂತಿಪುರ ಮುಖ್ಯ ರಸ್ತೆಯಲ್ಲೇ ಘಟನೆ ನಡೆದಿತ್ತು‌.

ಈಗಾಗಲೇ ಕೊಲೆ ಪ್ರಕರಣವೊಂದರಲ್ಲಿ ಏಳು ವರ್ಷ ಜೈಲಿನಲ್ಲಿ ಇದ್ದ ಅಸಾಮಿ, ಇನ್ನೂ ಹಲವು ಪ್ರಕರಣಗಳಲ್ಲಿ ಬಾಗಿಯಾಗಿದ್ದಾನೆ. ಇಷ್ಟೇಲ್ಲಾ ಕೇಸ್‌ಗಳಿದ್ದರು ಈ ಅಸಾಮಿ ರೌಡಿಶೀಟರ್ ಆಗದೇ ಇರೋದು ಇವನ ಪೋಲೀಸ್ ಬಾಂದವ್ಯಕ್ಕೆ ಸಾಕ್ಷಿಯಾಗಿದೆ. ಈತನಿಗೆ ಪ್ರಭಾವಿ ರಾಜಕೀಯ ನಾಯಕರ ಆರ್ಶಿವಾದವಿರುವುದರಿಂದ ಇಷ್ಟೋಂದು ಹಟ್ಟಹಾಸದಿಂದ‌ ಮೆರೆಯುತ್ತಿದ್ದಾನೆ ಎನ್ನಲಾಗಿದೆ. ಈ ಊರಲ್ಲಿ ಯಾರೇ ಬ್ಯಾನರ್ ಕಟ್ಟಬೇಕೆಂದರೇ ಇವನ ಅನುಮತಿ ಪಡೆದೆ ಕಟ್ಟಬೇಕು ಇಲ್ಲದಿದ್ದಲ್ಲಿ ಇವನಿಂದ ಅವಾಜ್ ಗ್ಯಾರಂಟಿ.

ಜೊತೆಗೆ ಶಾಂತಿಪುರದ ಮುಖ್ಯ ರಸ್ತೆಯಲ್ಲಿನ ಎಲ್ಲಾ ಅಂಗಡಿಯವರು ಇವನಿಗೆ ಹಪ್ತಾ ನೀಡಬೇಕು. ಇಲ್ಲದಿದ್ದಲ್ಲಿ ಇವನಿಂದ ಗೂಸ ಗ್ಯಾರಂಟಿ‌ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ. ನಿನ್ನೆ ರಾತ್ರಿ ಹೀಗೆ ಬಾಕು ಹಿಡಿದು ನಡು ರಸ್ತೆಯಲ್ಲೇ ಅವಾಜ್ ಹಾಕಿಕೊಂಡು ಓಡಾಡಿದ್ದರಿಂದ ಶಾಂತಿಪುರದ ಜನರು ಬೆಚ್ಚಿಬೀಳುವಂತೆ ಮಾಡಿತ್ತು. ಕಳೆದ ರಾತ್ರಿಯಿಂದ ಸುಮ್ಮನಿದ್ದ ಪೊಲೀಸರು ಸುದ್ದಿ ಮಾಧ್ಯಮಗಳಲ್ಲಿ, ಈತನ ಪುಂಡಾಟ ಪ್ರಸಾರವಾಗುತ್ತಿದ್ದಂತೆ, ಜೆಸಿ ರಾಮಚಂದ್ರನನ್ನು ಬಂದಿಸಿದ್ದಾಗಿ ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ.

Next Story

RELATED STORIES